Oplus_0

ವಾಡಿ ಬಿಜೆಪಿ ಕಚೇರಿಯಲ್ಲಿ ಬಲಿದಾನ ದಿನಾಚರಣೆ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್‌, ಸುಖದೇವ್‌ ಥಾಪರ್, ಶಿವರಾಮ್ ರಾಜಗುರು ಅವರ ಪುಣ್ಯತಿಥಿ ಪ್ರಯುಕ್ತ ಬಲಿದಾನ ದಿನಾ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದಿಂದ ಸಾವಿನ ಕುಣಿಕೆ ಏರಿದ ಕೆಚ್ಚೆದೆಯ ವೀರರಾದ ಭಗತ್‌‌ ಸಿಂಗ್‌‌, ರಾಜಗುರು ಹಾಗೂ ಸುಖದೇವ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು.

ಇವರು ಹೇಗಾದರೂ ಸರಿ ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಬೇಕೆಂದು ಕ್ರಾಂತಿಕಾರಿ ಹೋರಾಟ ಮಾಡುತ್ತಿದ್ದರು. 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದರು. ಈ ಕಾರಣಕ್ಕೆ ಇವರನ್ನು ಬಂಧಿಸಿ ಮರಣದಂಡನೆ ಶಿಕ್ಷೆ ನೀಡಲಾಯಿತು. 1931 ಭಾರತೀಯರ ಪಾಲಿಗೆ ಕರಾಳ ದಿನ, ಈ ದಿನ ನಮ್ಮ ದೇಶ ಮೂವರು ಮಹಾನ್‌ ದೇಶಭಕ್ತರನ್ನು ಕಳೆದುಕೊಂಡಿತು. ಇವರನ್ನು ಗಲ್ಲಿಗೇರಿಸಿದಾಗ ಸುಖದೇವ್‌ ಥಾಪರ್, ಭಗತ್‌ ಸಿಂಗ್ ಅವರಿಗೆ 23 ವರ್ಷ, ರಾಜಗುರು ಅವರಿಗೆ ಕೇವಲ 22 ವರ್ಷ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಉಸಿರು ಚೆಲ್ಲಿದರು. ಇಂತಹ ಮಹಾನ್ ಆದರ್ಶವಂತರ ತಾಯ್ನಾಡಿನಲ್ಲಿರುವ ನಾವು ಅವರ ಆಶಯದಂತೆ ಭವ್ಯ ಭಾರತದ ‌ಹಿರಿಮೆಯನ್ನು ಸಾರೊಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ್ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಹರಿ ಗಲಾಂಡೆ, ಕಿಶನ ಜಾಧವ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಉಮಾಭಾಯಿ ಗೌಳಿ,ದೇವಕ್ಕಿ ಪುಜಾರಿ, ಬಸವರಾಜ ಇಂಗಳಗಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!