ರಾಜೋಳ್ಳಾ ಹಜರತ್ ರಾಜಾಭಾಗಸವಾರ ರಹೇಮತ್ ಉಲ್ ಅಲೈ ರವರ ಜಾತ್ರಾ ಮಹೋತ್ಸವ ಏ.7 ರಿಂದ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವು ಕೂಡ ಹಜರತ್ ರಾಜಾಭಾಗಸವಾರ ರಹೇಮತ್ ಉಲ್ ಅಲೈ ರವರ ಜಾತ್ರಾ ಮಹೋತ್ಸವ ಏ.7 ರಿಂದ ಮೂರು ದಿನಗಳವರೆಗೂ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ದರ್ಗಾದ ಶೇಖ್ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ತಿಳಿಸಿದ್ದಾರೆ.
ಏ. 7 ರಂದು ಸಂಜೆ ಗಂಧ (ಸಂದಲ್) ಶೇಖ್ ಇಮಾಮ್ ಸಾಬ್ ಮಹೇಬುಬ್ ಅಲಿ ಶೇಖಸಿಂದಿ ಇವರ ಮನೆಯಿಂದ ಗಂಧ ರಾತ್ರಿ 8.45 ರಂದು ಪ್ರಾರಂಭಗೊಂಡು ಸಕಲ ವಾದ್ಯಗಳೊಂದಿಗೆ ಗ್ರಾಮದ ಮುಖ್ಯ ಬೀದಿಯಿಂದ ಬೆಳಿಗ್ಗೆ 4 ಗಂಟೆಗೆ ದರ್ಗಾ ತಲುಪುತ್ತದೆ. ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ್ ಬಖಾದ್ರಿ (ಸಜ್ಜಾದ ಸಶಿನ) ಇವರ ಅಮೃತ ಹಸ್ತದಿಂದ ಹಾಗೂ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.
ಏ. 7 ರಂದು ಸಂಜೆ ಗಂಧ (ಸಂದಲ್) ಮೆರವಣಿಗೆ, ಏ.8 ರಂದು ದೀಪ (ಚಿರಾಗ್), ರಾತ್ರಿ 8.45 ಕ್ಕೆ ಖವ್ವಾಲಿ, ಏ.9 ರಂದು ಜೀಯಾರತ ನಡೆಯಲಿದೆ. ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

