Oplus_0

ಚಿತ್ತಾಪುರ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರ ಏ.6 ರಿಂದ ಪ್ರಾರಂಭ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಬಸವೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ, ಚಿತ್ತಾಪುರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 6 ರಿಂದ 12 ರವರೆಗೆ 2025-26 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ (ನನ್ನ ಭಾರತಕ್ಕಾಗಿ ಯುವಕರು ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವಕರು) ಏರ್ಪಡಿಸಲಾಗಿದೆ ಎಂದು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಸಂಗಪ್ಪ ಮಾಮನಶೆಟ್ಟಿ, ಆಸ್ಮಾ ನಿಖತ್, ಡಾ.ಶಶಿಧರ ಯಡ್ರಾಮಿ ಅವರು ತಿಳಿಸಿದ್ದಾರೆ.

ಏ.6 ರಂದು ಬೆಳಿಗ್ಗೆ  11  ಗಂಟೆಗೆ ಗುಲಬರ್ಗಾ ವಿವಿ ಎನ್ಎಸ್ಎಸ್ ಸಂಯೋಜಕ ಪ್ರೊ. ಹೆಚ್. ಎಸ್. ಜಂಗೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಸಜ್ಜನಶೆಟ್ಟಿ, ಶ್ರೀ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಅಧ್ಯಕ್ಷ ನಾಗರಡ್ಡಿ ಪಾಟೀಲ ಕರದಾಳ, ಖ್ಯಾತ ವೈದ್ಯರು ಹಾಗೂ ಕಾಲೇಜಿನ ಭೂದಾನಿಗಳು ಡಾ. ಚಂದ್ರಶೇಖರ ಕಾಂತಾ, ನಿವೃತ್ತ ಪ್ರಾಚಾರ್ಯ ಡಾ. ಶಿವಶರಣಪ್ಪ ಬಿರಾದಾರ, ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ, ಸಿಬ್ಬಂದಿ ಕಾರ್ಯದರ್ಶಿ ಪ್ರೊ. ಶರಣಬಸ್ಸಪ್ಪ ರಾಯಕೋಟಿ, ಐಕ್ಯೂಎಸಿ ಸಂಯೋಜಕ ಡಾ. ಕೈಲಾಸಪತಿ ವಿಶ್ವಕರ್ಮ ಆಗಮಿಸುವರು. ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಬಿರಾದಾರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮ ಅಧಿಕಾರಿ ಡಾ. ಸಂಗಪ್ಪ ವಿ. ಮಾಮನಶೆಟ್ಟಿ ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ನುಡಿ ಹೇಳುವರು, ಕಾರ್ಯಕ್ರಮ ಅಧಿಕಾರಿ ಅಸ್ಮಾ ನಿಖಿತ್ ನಿರೂಪಣೆ ಮಾಡುವರು, ಕಾರ್ಯಕ್ರಮ ಅಧಿಕಾರಿ ಪ್ರೊ. ಶಶಿಧರ ಯಡ್ರಾಮಿ ವಂದನಾರ್ಪಣೆ ಮಾಡುವರು.

ಏ.7 ರಿಂದ 11 ರವರೆಗೆ ಒಂದೊಂದು ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಹಾಗೂ ಏ.12 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!