ಚಿತ್ತಾಪುರ ಪ್ರಜಾ ಸೌಧದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಮಹಾ ಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ ಜಯಂತಿಯ ಪೂಜಾ ಕಾರ್ಯಕ್ರಮ ನಡೆಯಿತು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಇಜಾರ್, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಮುಖಂಡರಾದ ಭೀಮರೆಡ್ಡಿ ಗಡೆಶ್ವರ್, ಐಲರೆಡ್ಡಿ ಯರಗಲ್, ಸಿದ್ದರಾಮ ರೆಡ್ಡಿ ಪಾಲಪ್, ರುದ್ರಗೌಡ ಇಜಾರ್ ಶ್ರೀನಿವಾಸ್ ರೆಡ್ಡಿ ಯರಗಲ್, ಮಲ್ಲುಗೌಡ ಆಲ್ಲೂರ, ಬಸವರಾಜ ಪಾಟೀಲ್ ಅಲ್ಲೂರ, ಬಸವರಾಜ್ ಗೌಡ ಅಲ್ಲೂರ, ತಾಪಂ ಎಡಿ ಪಂಡಿತ್ ಸಿಂಧೆ, ಸುನೀಲ್ ಯನಗುಂಟಿಕರ್, ವಿಠಲ್ ರಾವ್ ಸೇರಿದಂತೆ ತಹಸೀಲ್ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

