ಚಿತ್ತಾಪುರ ತಾಲೂಕಿನಲ್ಲಿ ಮೇ.16 ರಿಂದ ಮುಂಗಾರು ಹಂಗಾಮಿನ ಆಂದೋಲನ: ಮಾನಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಾದ್ಯಂತ 2026-27ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆ ವತಿಯಿಂದ ಮೇ 16 ರಿಂದ ಜೂನ್ 3 ರವರೆಗೆ ಗ್ರಾಮ ಪಂಚಾಯತಿವಾರು ‘ಮುಂಗಾರು ಹಂಗಾಮು ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಗಾರು ಹಂಗಾಮಿನಲ್ಲಿ ರೈತರು ಅನುಸರಿಸಬೇಕಾದ ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡುವುದು ಆಂದೋಲನದ ಮುಖ್ಯ ಉದ್ದೇಶ. ಮಣ್ಣು ಪರೀಕ್ಷೆ, ಬೀಜೋಪಚಾರ, ಸಮತೋಲನ ರಸಗೊಬ್ಬರ ಬಳಕೆ, ತೊಗರಿ ನಾಟಿ ಹಾಗೂ ಗೊಡ್ಡು ರೋಗ ನಿರ್ವಹಣೆ, ತಿಪ್ಪೆಗೊಬ್ಬರ ಉಪಚಾರ, ಬಸವನ ಹುಳು ನಿಯಂತ್ರಣ, ಕಸೂಟ ಕಳೆ ಹತೋಟಿ, ಕಬ್ಬು ನಿರ್ವಹಣೆ ಹಾಗೂ ಬರ ನಿರೋಧಕ ಕ್ರಮಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಆಂದೋಲನದ ವೇಳಾಪಟ್ಟಿ:
ಮೇ 16: ಮಾಡಬೂಳ , ಗುಂಡಗುರ್ತಿ, ದಂಡೋತಿ. ಮೇ 18: ಪೇಟಶಿರೂರ, ಇವಣಿ. ಮೇ 19: ನಾಲವಾರ, ರಾಂಪುರಹಳ್ಳಿ, ಕೊಲ್ಲೂರ. ಮೇ 20: ಸನ್ನತಿ, ಕಡಬೂರ, ಇಂಗಳಗಿ. ಮೇ 21: ಲಾಡ್ಲಾಪುರ , ಹಲಕಟ್ಟಾ, ಕಮರವಾಡಿ, ಆಲೂರ. ಮೇ 22: ಭೀಮನಳ್ಳಿ, ಯಾಗಾಪುರ, ರಾಜೋಳಾ. ಮೇ 25: ಚಿತ್ತಾಪುರ, ದಿಗ್ಗಾಂವ, ಮೊಗಲಾ. ಮೇ 26: ಬಾಗೋಡಿ, ಡೋಣಗಾಂವ, ಸಾತನೂರ. ಮೇ 27: ಕರದಾಳ, ಕಾಳಗಿ, ರಾಜಾಪುರ. ಮೇ 29: ಕೊಡದೂರ, ಟೆಂಗಳಿ, ಕೋರವಾರ. ಮೇ 30: ಗೋಟೂರ, ಚಿಂಚೋಳಿ ಎಚ್, ಹೆಬ್ಬಾಳ. ಜೂನ್ 2: ಶೆಳ್ಳಗಿ, ಕಂದಗೋಳ, ಬೆಡಸೂರ, ಶಹಾಬಾದ್. ಜೂನ್ 3: ಭಂಕೂರ , ಮರತೂರ, ಮುಗುಳನಾಗಾಂವ, ಹೊನಗುಂಟಾ, ತೋನಸನಹಳ್ಳಿ, ಮಾಲಗತ್ತಿ, ರಾವೂರ.
ಗ್ರಾಮ ಪಂಚಾಯತಿವಾರು ನಿಗದಿಪಡಿಸಿರುವ ದಿನಾಂಕದಂದು ಆಯಾ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಷಿ ಇಲಾಖೆಯ ಈ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾನಕರೆ ಕೋರಿದ್ದಾರೆ.

