Oplus_0

ಚಿತ್ತಾಪುರದಲ್ಲಿ ಮೇ.24 ರಂದು ಅಧಿಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮ | 501 ದಂಪತಿಗಳಿಂದ ಸಹಸ್ರ ಲಿಂಗಾರ್ಚನೆ, ಕಾಶಿ ಗಂಗಾ ಆರತಿ: ಕರಬಸಯ್ಯ ಶಾಸ್ತ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮೇ.24 ರಂದು ಅಧಿಕ ಮಾಸದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ವೇದ ಮೂರ್ತಿ ಶ್ರೀ ಕರಬಸಯ್ಯ ಶಾಸ್ತ್ರೀ ಚಿತ್ತಾಪುರ ತಿಳಿಸಿದ್ದಾರೆ.

ಅಂದು ಬೆಳಗ್ಗೆ 9 ಗಂಟೆಗೆ 501 ದಂಪತಿಗಳಿಂದ ಸಹಸ್ರ ಲಿಂಗಾರ್ಚನೆ, 10 ಗಂಟೆಗೆ ಗಿರಿಜಾ ಕಲ್ಯಾಣ, 11 ಗಂಟೆಗೆ ತಾಳಿಕೋಟಿ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು ಅವರಿಂದ ವಿಶೇಷ ಆಶೀರ್ವಚನ ನಡೆಯಲಿದೆ. ನಂತರ ಮ‌ಹಾಪ್ರಸಾದ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಯಂಕಾಲ 7 ಗಂಟೆಗೆ ಕಾಶಿ ಗಂಗಾ ಆರತಿ, ರಾತ್ರಿ 8 ಗಂಟೆಗೆ ಶಿವಶಂಕರ ಶಿವಾಚಾರ್ಯರು, ಸೋಮಶೇಖರ ಶಿವಾಚಾರ್ಯರು ಡಾ.ಚನ್ನಬಸವ ಶರಣರು ಇವರ ತುಲಾಭಾರ ನಡೆಯಲಿದೆ ಹಾಗೂ 8.30 ಕ್ಕೆ 251 ಮುತ್ತೈದೆಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಂತರ ಮಹಾಪ್ರಸಾದ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರುಗುಡಿ, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಸೊಂತ ಶ್ರೀ ಬಾಲತಪಸ್ವಿ ಅಭಿನವ ಶರಣ ಶಂಕರಲಿಂಗ ಮಹಾರಾಜರು, ಹೊನ್ನಕಿರಣಗಿ ಶ್ರೀ ಚಂದ್ರಗುಂಡ ಶಿವಾಚಾರ್ಯರು, ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಹಲಕಟ್ಟಿ ಶ್ರೀ ಮುನೀಂದ್ರ ಶಿವಾಚಾರ್ಯರು, ಪಾಳಾ ಶ್ರೀ ಗುರುಮೂರ್ತಿ ಶಿವಾಚಾರ್ಯರು, ತೊಟ್ನಳ್ಳಿ ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯರು, ರಾವೂರ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಹಲಕಟ್ಟಿ ಶ್ರೀ ರಾಜಶೇಖರ ಶಿವಾಚಾರ್ಯರು, ಅಳ್ಳೋಳ್ಳಿ ಶ್ರೀ ಸಂಗಮನಾಥ ಮಹಾಸ್ವಾಮಿಗಳು, ದಂಡೋತಿ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜಿ, ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಮಾಲಗತ್ತಿ ಶ್ರೀ ಡಾ. ಚನ್ನಬಸವ ಶರಣರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಸಿ. ಭಂಕಲಗಿ, ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಎಮ್ ದೇಶಮುಖ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಡಾ. ಶ್ರೀ ವೇ.ಮೂ. ಶಿವಶರಣಯ್ಯ ಸ್ವಾಮಿ ಪುರದಯ್ಯನ ಮಠ, ಡಾ. ಶ್ರೀ ವೇ.ಮೂ. ಕರಣಯ್ಯ ಶಾಸ್ತ್ರಿಗಳು ಸ್ಥಾವರಮಠ, ಹೊನ್ನಕಿರಣಗಿ, ಡಾ. ಶ್ರೀ ವೇ.ಮೂ. ಸೋಮನಾಥ ಶಾಸ್ತ್ರಿಗಳು ಮಾದನ ಹಿಪ್ಪರಗಾ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು.

ಅನಿತಾ ಡಾ. ಮಹಾಂತಗೌಡ ಪಾಟೀಲ ಭಾಗೋಡಿ, ಸುವರ್ಣ ಅನಿಲಕುಮಾರ ಸಾಹು ವಡ್ಡಡಗಿ ಚಿತ್ತಾಪುರ, ಪ್ರಿಯಾಂಕಾ ರಮೇಶ ಹಡಪದ ಚಿತ್ತಾಪುರ ಅವರಿಂದ ತುಲಾಭಾರ ಸೇವೆ ನಡೆಯಲಿದೆ. ಮೀನಾಕ್ಷಿ ರಾಜಶೇಖರ ಯದಲಾಪೂರ ಚಿತ್ತಾಪುರ ಅವರಿಂದ ಗಂಗಾ ಆರತಿ ಸೇವೆ ಹಾಗೂ ಸವಿತಾ ಜಗನ್ನಾಥ ರಾಠೋಡ ಕಲಬುರಗಿ, ಬಸವರಾಜ ಪೋಲಿಸ ಪಾಟೀಲ (ದಳಪತಿ) ಭಾಗೋಡಿ ಅವರಿಂದ ಬಾಗಿನ ಸೇವೆ ಮತ್ತು ಜಯಲಕ್ಷ್ಮೀ ಶಿವರೆಡ್ಡಿಗೌಡ ಪಾಲಪ ಚಿತ್ತಾಪುರ, ಸೈಯದ್ ಅಮೀನ್ ಉದ್ದೀನ್ ಚಿತ್ತಾಪುರ ಅವರಿಂದ ದಾಸೋಹ ಸೇವೆ ನಡೆಯಲಿದೆ.

ಶ್ರೀ ಋಗ್ವದ ವೈಧಿಕ ಪುರೋಹಿತರ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಎಸ್. ಹಿರೇಮಠ ಸೇಡಂ, ವೇ.ಮೂ. ಶ್ರೀ ವೀರೇಶ ಶಾಸ್ತ್ರೀಗಳು ಮಲಕೂಡ, ವೇ.ಮೂ. ವೃಷಬೇಂದ್ರ ಶಾಸ್ತ್ರೀಗಳು ಕಾಚವಾರ, ವೇ.ಮೂ. ತೋಟಯ್ಯ ಶಾಸ್ತ್ರೀಗಳು ಪತ್ರಿ ಕರದಾಳ, ಶ್ರೀ ವಿನೋದ್ ಶಾಸ್ತ್ರಿ ಮಠಪತಿ ರುದ್ರಾರಂ ಅವರಿಂದ ಪೂಜಾ ಕಾರ್ಯ ನಡೆಯಲಿದೆ

ಸುರೇಶ ಅಲ್ಲೂರ ಚಿತ್ತಾಪುರ, ರಾಜಶೇಖರ ಸಿಂಪಿ ಚಿತ್ತಾಪುರ, ಮಾರುತಿರಾವ್ ಪೂಜಾರಿ ಚಿತ್ತಾಪುರ, ಬಸವರಾಜ ಬಿ. ಪಾಟೀಲ ಮಾಡಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬಸವರಾಜ್ ಪಿ. ಬೊಮ್ಮನಳ್ಳಿ ಚಿತ್ತಾಪುರ ಅವರಿಂದ ಪತ್ರಿಕೆ ಸೇವೆ, ಹೊನ್ನ ಕಿರಣಗಿ ಶ್ರೀ ಮಠದ ಶಾಲಾ ವಿದ್ಯಾರ್ಥಿನಿಯರಿಂದ ನಡೆಯಲಿದೆ ಗಂಗಾ ಆರತಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಭೆ ನಿರೂಪಣೆಯನ್ನು ವೇ.ಮೂ. ಶ್ರೀ ವೀರೇಶ ಶಾಸ್ತ್ರೀಗಳು ಮಲಕೂಡ, ಪೂಜಾ ಆರ್. ಭಂಕಲಗಿ ಚಿತ್ತಾಪುರ ಅವರು ಮಾಡಲಿದ್ದಾರೆ ಎಂದು ವಿವರಿಸಿದ್ದಾರೆ. ಹೀಗಾಗಿ ಅಂದು ದಿನಪೂರ್ತಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!