Oplus_0

(ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ    ದಿನದ ನಿಮಿತ್ತ ಕವನ ರಚನೆ)

ಡಾ. ಬಾಬಾ ಸಾಹೇಭಾ, ಬಾಬಾ ಸಾಹೇಬಾ

ಮನವ ತುಂಬಿ ಬಂದಿತ್ತು ದು:ಖವ, ಮನವ ತುಂಬಿ ಬಂದಿತ್ತು, ನೀ ಹೋದ ಮೇಲೆ ತಿಳಿದಿತ್ತು ನಿಮ್ಮ ಬಲವ, ನೀ ಹೋದ ಮೇಲೆ ತಿಳಿದಿತ್ತು. ಬಾಬಾ ಸಾಹೇಬಾ ಬಾಬಾ ಸಾಹೇಬಾ !

ತುಂಬಿದ ಕೊಡ ತುಳುಕುವುದಿಲ್ಲ ಎಂಬ ತತ್ವಕ್ಕೆ ನಿನ್ನ ವ್ಯಕ್ತಿತ್ವವಾಗಿತ್ತು, ಶಿಕ್ಷಣ ಎಂಬ ಜ್ಞಾನಕ್ಕೆ ನಿಮ್ಮ ಕೊಡುಗೆ ನಮ್ಮ ಮನದಲ್ಲಿ ಅಮರವಾಯಿತು. ಬಾಬಾ ಸಾಹೇಬಾ ಬಾಬಾ ಸಾಹೇಬಾ !

ಸಂವಿಧಾನ ಶಿಲ್ಪಿ ನೀನಯ್ಯಾ ಒಂದೇ ಎಂಬ ಕಾನೂನು ರಚಿಸಿದ ಕಲ್ಪವೃಕ್ಷ ನೀನಯ್ಯಾ, ನಿಮ್ಮ ತನಕೆ ಹೋರಾಡಿರೋ ನಿಮ್ಮವರಿಗೆ ಜಯದಮಾಲೆ ಹಾಕಿರೋ ಎಂದು ಹೇಳಿದ ಮಹಾನಾಯಕನು ನೀನಯ್ಯಾ. ಬಾಬಾ ಸಾಹೇಬಾ ಬಾಬಾ ಸಾಹೇಬಾ !

ಕೀಳು ಮನಸಿನ ಭಾವನೆಗೆ ಹಿರಿಮೆ ಗರಿಮೆಯ ಶಿಖರವು ನೀನಯ್ಯಾ, ಬುದ್ಧರ ನುಡಿಗೆ ಬದ್ಧನಾಗಿ ನಡೆದ ಧಿಮಂತ ನಾಯಕನು ನೀನಯ್ಯಾ. ಬಾಬಾ ಸಾಹೇಬಾ ಬಾಬಾ ಸಾಹೇಬಾ !!!

ಎಷ್ಟು ಬರೆದರೇನು ಎಷ್ಟು ಓದಿದರೇನು ಸಾಲದಯ್ಯಾ ನಿಮ್ಮ ವ್ಯಕ್ತಿತ್ವಕ್ಕೆ, ನಮ್ಮ ಕನಸುಗಳಿಗೆ ನನಸಾಗಿಸಿದ ಭೋಧಿಸತ್ವವು ನೀನಯ್ಯಾ. ಬಾಬಾ ಸಾಹೇಬಾ ಬಾಬಾ ಸಾಹೇಬಾ !!!

ಬಾಬಾ ಸಾಹೇಬಾ ಬಾಬಾ ಸಾಹೇಬಾ ! ನಿಮ್ಮ ನುಡಿ ನಡೆಗೆ ಬದ್ಧರಾಗಿ ನಡೆಯುವೆನಯ್ಯಾ, ಎಂದೆಂದೂ ಮರೆಯದ ಮಾನವ ಕುಲದ ವಜ್ರವು ನೀನಯ್ಯಾ, ಭಾರತ ರತ್ನದ ಕೊಡುಗೆ ನೀನಯ್ಯಾ, ಬಾಬಾ ಸಾಹೇಬಾ ಬಾಬಾ ಸಾಹೇಬಾ!

ಮತ್ತೊಮ್ಮೆ ಹುಟ್ಟಿ ಬಾರೋ, ಅಜ್ಞಾನಿಗಳಿಗೆ ಪಾಠ ಕಲಿಸಲು, ಜ್ಞಾನದ ಜ್ಯೋತಿ ನೀಡಲು ಜನ್ಮ ತಾಳಿ ಈ ಜಗಕ್ಕೆ ಬಾರೋ ಅಚ್ಚಳಿಯದೇ ಉಳಿದಿರುವೆ, ನಮ್ಮ ಮನದಲ್ಲಿ ನಿನ್ನೇ ನೆನೆಯುತ ಕುಳಿತಿರುವೆ ಈ ಜಗದಲ್ಲಿ ಬಾಬಾ ಸಾಹೇಬಾ ಬಾಬಾ ಸಾಹೇಬಾ !!!

ಆರುಣ ಬಿ.ಟಿ. ಸುಣಗಾರ, ನಾಲವಾರ

Spread the love

Leave a Reply

Your email address will not be published. Required fields are marked *

error: Content is protected !!