ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕಲಬುರಗಿ ಇಎಸ್ಐ ಆಸ್ಪತ್ರೆಯನ್ನು ನೋಂದಣಿಗೆ ಸರ್ಕಾರಿ ನೌಕರರ ಸಂಘ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲೆಯ ಇಎಸ್ಐ ಆಸ್ಪತ್ರೆಯ ಡೀನ್ ಅವರನ್ನು ಭೇಟಿಯಾಗಿ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವಿವಿಧ ಚಿಕಿತ್ಸೆಗಳ ಸೌಲಭ್ಯಗಳಿಗಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕಲಬುರಗಿ ಇಎಸ್ಐ ಆಸ್ಪತ್ರೆಯನ್ನು ನೋಂದಣಿ ಮಾಡಿಕೊಳ್ಳಲು ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಗೆ ಸ್ಪಂದಿಸಿದ ಆಸ್ಸತ್ರೇಯ ಡೀನ್ ಡಾ.ಧನಾಜಿ ಜಾದವ್ ಅವರು ಕೊಡಲೇ ನೋಂದಣಿ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಪ್ರಮುಖರಾದ ಚಂದ್ರಕಾಂತ ಏರಿ, ಧರ್ಮರಾಜ ಜವಳಿ, ಕೃಷ್ಣಚಾರಿ, ಸಿದ್ದಲಿಂಗಯ್ಯ ಮಠಪತಿ, ಅಣ್ಣಾರಾವ ಹಾಬಾಳಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
