ರಾಜ್ಯ ಜಲಸಾರಿಗೆ ಮತ್ತು ಜಲಮಾರ್ಗಗಳ ಮಾಸ್ಟರ್ ಪ್ಲಾನ್ ಅಂತಿಮ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 4ನೇ ಎಸ್ಎಂಡಬ್ಲ್ಯುಟಿಸಿ ಸಮಿತಿಯ ಸಭೆ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗಗಳ ಸಾರಿಗೆ ಸಮಿತಿಯ (ಎಸ್ಎಂಡಬ್ಲ್ಯುಟಿಸಿ) 4 ನೇ ಸಭೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್ ಪುರ ಅವರು ಮಾತನಾಡಿ, ಕರ್ನಾಟಕ ರಾಜ್ಯ ಜಲಸಾರಿಗೆ ಮತ್ತು ಜಲಮಾರ್ಗಗಳ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲಾವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಎಂಒಪಿಎಸ್ಡಬ್ಲ್ಯೂಯಿಂದ ರಾಜ್ಯದ ಆಲಮಟ್ಟಿಯಿಂದ ಬಾಗಲಕೋಟೆಯವರೆಗೆ ಜಲಮಾರ್ಗಗಳ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿಯಲ್ಲಿ 12.20 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಮೋದನೆಗೆ ನೀಡಿದೆ. ಇದರ ಜೊತೆಗೆ ಆಲಮಟ್ಟಿಯಿಂದ ಬಾಗಲಕೋಟೆವರೆಗೆ ಜಲಮಾರ್ಗಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಕೆಬಿಜೆಎನ್ ಎಲ್ ನಿಂದ ಕೆಎಂಬಿಗೆ ಭೂಮಿಯನ್ನು ವರ್ಗಾಯಿಸಲಾಗಿದೆ ಎಂದು ಸಭೆ ಕೆ.ಎಂ.ಬಿ ಸಿಇಒ ಅವರು ತಿಳಿಸಿದರು.
ಸಾಗರಮಾಲಾ ಯೋಜನೆಯಡಿಯಲ್ಲಿ ಕಾಳಿ ನದಿಯಲ್ಲಿ ಜಲಮಾರ್ಗಗಳ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರದ ಎಂಒಪಿಎಸ್ಡಬ್ಲ್ಯೂ ಅನುಮೋದನೆ ನೀಡಿದ್ದು, ಇದಕ್ಕೆ 14.46 ಕೋಟಿ ರೂ.ಗಳ ಅಂದಾಜು ಯೋಜನಾ ವೆಚ್ಚದಲ್ಲಿ ನಿಗಧಿಪಡಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯದ 13 ಪ್ರಮುಖವಲ್ಲದ ಬಂದರು ಮಿತಿಗಳ ಅಭಿವೃದ್ಧಿಗೆ ಕೆಎಂಬಿ ನೋಡಲ್ ಪ್ರಾಧಿಕಾರವಾಗಿದೆ. ಇದಕ್ಕೆ ಕೆಎಂಬಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಸಾಗರಮಾಲಾ, ಎಂಒಪಿಎಸ್ ಡಬ್ಲ್ಯೂ ಮತ್ತು ರಾಜ್ಯ ಸರ್ಕಾರದ ಪಿಪಿಪಿ ಮತ್ತು ಇಪಿಸಿ ವಿಧಾನಗಳ ಮೂಲಕ ಯೋಜನೆಗಳು ರೂಪಿಸಲಾಗಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಯರಾಮ್ ರಾಯ್ ಪುರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಬೆಂಗಳೂರು-ಮಂಗಳೂರು ಹೈಸ್ಪೀಡ್ ಆರ್ಥಿಕ ಕಾರಿಡಾರ್ ಬಗ್ಗೆ ಚರ್ಚೆ, ಬೆಂಗಳೂರು-ಮಂಗಳೂರು ಹೈಸ್ಪೀಡ್ ಆರ್ಥಿಕ ಕಾರಿಡಾರ್ ಅಭಿವೃದ್ಧಿಯು ಬಗ್ಗೆ ಚರ್ಚ ನಡೆಯಿತು.