Oplus_0

ಭಾಗೋಡಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವ | ಜಗತ್ತಿನಲ್ಲಿ ಪ್ರಪ್ರಥಮ ಪಾರ್ಲಿಮೆಂಟ್ ಸ್ಥಾಪಿಸಿದವರು ಬಸವಣ್ಣನವರು; ಪೂಜಾ ಭಂಕಲಗಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಬ್ರಿಟನ್ ದೇಶದವರು ತಮ್ಮ ಸಂಸತ್ ಪ್ರಥಮ ಎನ್ನುವರು ಆದರೆ, ಅದಕ್ಕೂ ಮೊದಲೇ ಕರುನಾಡಿನಲ್ಲಿ ವಿವಿಧ ವರ್ಗಗಳ ಶರಣರ ಅಭಿಪ್ರಾಯ ಪಡೆದು, ಎಲ್ಲರಿಗೂ ಮಾನ್ಯತೆ ನೀಡಿದ ಸಮಾನತೆಯ ಹರಿಕಾರ ಬಸವಣ್ಣನವರು ಜಗತ್ತಿನಲ್ಲಿಯೇ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ನಿರ್ಮಿಸಿದ್ದರು ಎಂದು ಲೇಖಕಿ ಪೂಜಾ ಆರ್. ಭಂಕಲಗಿ ಹೇಳಿದರು.

ತಾಲೂಕಿನ ಭಾಗೋಡಿ‌ ಗ್ರಾಮದ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಶಾಂತಲಿಂಗೇಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ದೇಶದಲ್ಲಿ ಆರ್ಯರು ಬರೋಕೆ ಮುಂಚೆ ನಮ್ಮಲ್ಲಿ ಒಗ್ಗಟ್ಟು ಇತ್ತು‌. ಅವರು ಬಂದ ಮೇಲೆ ಒಡೆದು ಆಳ್ತಾ ಇದ್ದಾರೆ, ಅವರು ಒಡೆದು ಆಳುವುದೇ ಧರ್ಮ ಮಾಡಿದ್ದಾರೆ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕ‌ರ್ ಮೂವರು ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡಿದವರು. ಆದರೆ ದುರ್ದೈವ ಇನ್ನೂ ಅದು ಚಾಲ್ತಿಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುರುಮಿಠಕಲ್’ನ ಖಾಸಾ ಮಠದ ಶ್ರೀ ಶಾಂತವೀರ ಮುರಘರಾಜೇಂದ್ರ ಸ್ವಾಮಿಜೀ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪ್ರಪಂಚಕ್ಕೆ ವಚನ ಸಾಹಿತ್ಯ ಸಂಪತ್ತು ಕೊಟ್ಟ ಮಹಾನ್ ಶರಣ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಜಾತಿ ಪದ್ದತಿ ನಿರ್ಮೂಲನೆ ಮಾಡಲು ಅವರು ಮಾಡಿದ ಕ್ರಾಂತಿ ಹೊಸ ಬದಲಾವಣೆಗೆ ನಾಂದಿ ಹಾಡಿತು ಎಂದರು.

ಮುಖ್ಯ ಅತಿಥಿಗಳಾಗಿ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಅಧ್ಯಕ್ಷತೆ ವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪಗೌಡ ಪಾಟೀಲ ಅವರು ಮಾತನಾಡಿದರು.

ಇದೇ ವೆಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ‌ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪದ್ಮಣ್ಣಗೌಡ ಪಾಟೀಲ, ತಾಲೂಕು ಕಾರ್ಯದರ್ಶಿ ಬಸವರಾಜ ಪಾಟೀಲ್ ದಳಪತಿ, ರಾಮಲಿಂಗ ಬಾನಾರ್, ಭೀಮಣ್ಣ ಹೋತಿನಮಡಿ, ಶಿವಕುಮಾರ ಕಲಬುರಗಿ, ಚಂದ್ರಶೇಖರ ಉಟಗೂರ, ಮುತ್ತಣ್ಣ ಭಾಗೋಡಿ, ಸಾಬಣ್ಣ ಸೇರಿ, ಶಂಭುಲಿಂಗ, ಶಿವಕುಮಾರ, ಸೀರಾಜ್, ಅನೀಲ್ ವಡ್ಡಡಗಿ, ಶರಣಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಇದ್ದರು.

ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಹಾಂತಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಎಂಬತ್ನಾಳ ಸ್ವಾಗತಿಸಿದರು, ಮಾಲಾಶ್ರೀ ನಿರೂಪಿಸಿ, ವಂದಿಸಿದರು. ನಂತರ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!