ಆಟೋ ಚಾಲಕರಿಗೆ ಐಡಿ ಕಾರ್ಡ್ ಮತ್ತು ಸಮವಸ್ತ್ರ ವಿತರಣೆ | ಸಂಘಟನೆಯಲ್ಲಿರುವ ಶಕ್ತಿ ದೊಡ್ಡ ಶಕ್ತಿ: ನಾಗರೆಡ್ಡಿ ಪಾಟೀಲ ಅಭಿಮತ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಯಾವುದೇ ಸಂಘ-ಸಂಸ್ಥೆಯಾಗಲಿ ಅಲ್ಲಿ ಒಗ್ಗಟ್ಟು ಎನ್ನುವುದು ಬಹಳ ಮುಖ್ಯ, ಸಂಘಟನೆಯಲ್ಲಿ ಇರುವ ಶಕ್ತಿ ದೊಡ್ಡ ಶಕ್ತಿ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ, ಆಟೋ ಚಾಲಕರ ಮತ್ತು ಮಾಲಿಕರ ಸಂಘ ಹಾಗೂ ಶಂಕರನಾಗ್ ಅಭಿಮಾನಿ ಬಳಗ ಚಿತ್ತಾಪುರ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಆಟೋ ರಾಜಾ ಶಂಕರನಾಗ್ ಆಟೋ ನಾಮಫಲಕ ಉದ್ಘಾಟನೆ, ಐಡಿ ಕಾರ್ಡ್ ಮತ್ತು ಖಾಕಿ ಸಮಾವಸ್ತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷರಾದವರು ಅಟೋ ಚಾಲಕರ ಕಷ್ಟ ಸುಖದಲ್ಲಿ ಭಾಗಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಅಂದಾಗ ಮಾತ್ರ ಸಂಘ ಬಲಿಷ್ಠ ಆಗಲಿದೆ. ಈ ನಿಟ್ಟಿನಲ್ಲಿ ಸಂಘಟನೆ ಶಕ್ತಿಯಿಂದಾಗಿ ನಾಗರಾಜ ಭಂಕಲಗಿ ಈ ಹಿಂದೆ ಪುರಸಭೆ ಅಧ್ಯಕ್ಷರಾದರು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣ ಹತ್ತಿರ ಅಟೋ ನಿಲ್ದಾಣ ಆಗುವುದಕ್ಕೆ ದಿ.ದಿಲೀಪ್ ಕಾಶಿ ಅವರ ಪಾತ್ರ ಪ್ರಮುಖ ಆಗಿತ್ತು ಎಂದು ಸ್ಮರಿಸಿದರು.
ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಅಟೋ ಚಾಲಕರು ನಂಬಿಕೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಆಟೋದಲ್ಲಿ ಮರೆತು ಹೋದ ಹಣದ ಬ್ಯಾಗ್ ಇತರೆ ವಸ್ತುಗಳು ಮರಳಿ ತಲುಪಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದರು.
ಅಟೋ ಚಾಲಕರ ಸೇವೆ ಸಮಾಜ ಸೇವೆಯಂತಿದೆ. ಕಾಯಕವೇ ಕೈಲಾಸ ಎನ್ನುವಂತೆ ಪ್ರತಿಯೊಬ್ಬರು ದುಡಿದು ಜೀವನ ಸಾಗಿಸಬೇಕು ಈ ನಿಟ್ಟಿನಲ್ಲಿ ಅಟೋ ಚಾಲಕರು ನಿತ್ಯ ಜನಸೇವೆ ಸಲ್ಲಿಸುವ ಮೂಲಕ ಬದುಕು ಸಾಗಿಸುತ್ತಾರೆ. ಸರ್ಕಾರಕ್ಕೆ ಮಣಿಸುವ ಶಕ್ತಿ ಅಟೋ ಚಾಲಕರಿಗೆ ಇದೆ ಕಾರಣ ಇವರಲ್ಲಿ ಒಗ್ಗಟ್ಟು ಇರುವುದರಿಂದ ಸಂಘಟನೆ ಬಲಿಷ್ಠವಾಗಿದೆ ಎಂದು ಹೇಳಿದರು.
ಶಂಕರನಾಗ್ ಅಟೋ ಚಾಲಕರ ಕಣ್ಮಣಿ ಎಂದೇನಿಸಿಕೊಂಡಿದ್ದಾರೆ, ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಗುಂಡಣ್ಣ ಬಾಳಿ, ಕಲಾವಿದ ಬಾಬು ಕಾಶಿ ಅವರು ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶಿವಕಾಂತ್ ಬೆಣ್ಣೂರಕರ್, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ ಬೊಮ್ಮನಳ್ಳಿ, ಕರ್ನಾಟಕ ಚಾಲಕರ ಒಕ್ಕೂಟ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ, ಜಿಲ್ಲಾಧ್ಯಕ್ಷ ರುಕ್ಕಣರಡ್ಡಿ, ಮಹಿಳಾ ಜಿಲ್ಲಾಧ್ಯಕ್ಷೆ ಸುಮಿತ್ರಾ ಸಿಂಗ್ ಪಟ್ಟಣ, ಜಿಲ್ಲಾ ಉಪಾಧ್ಯಕ್ಷೆ ಪ್ರಮೀಳಾ ಶರಣಪ್ಪ ಶಾದಿಪೂರ, ಶಂಕರನಾಗ್ ಅಭಿಮಾನಿ ಬಳಗ ಯಾದಗಿರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾಂಗ್ಲಿಯಾನ್, ಕರ್ನಾಟಕ ಚಾಲಕರ ಒಕ್ಕೂಟ ಯಾದಗಿರ ಜಿಲ್ಲಾಧ್ಯಕ್ಷ ಬಸನಗೌಡ ಚಟ್ನಳ್ಳಿ, ಶಂಕರನಾಗ್ ಅಭಿಮಾನಿ ಬಳಗದ ದೇವದುರ್ಗ ಅಧ್ಯಕ್ಷ ರಫೀಕ್, ಹಾಸ್ಯ ಕಲಾವಿದ ಮಲ್ಲೇಶಿ ಸಾವರಕರ್ ದೇವದುರ್ಗ, ರಾವೂರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಈರಣ್ಣ ಕಲ್ಯಾಣಿ, ಮಹೇಶ ಬಾಳಿ ರಾವೂರ, ಕೂಲಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಜನಿಕಾಂತ್, ಭೀಮರಾಯ ಹೊತಿನಮಡಿ ಅವರು ವೇದಿಕೆಯಲ್ಲಿದ್ದರು.
ಕರ್ನಾಟಕ ಚಾಲಕರ ಒಕ್ಕೂಟ ತಾಲೂಕು ಅಧ್ಯಕ್ಷ ಜಗನ್ನಾಥ ಕಾಶಿ, ಅಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್, ಶಂಕರನಾಗ್ ಅಭಿಮಾನಿ ಬಳಗದ ಅಧ್ಯಕ್ಷ ಅಂಬರೀಷ ಸಾಂಗ್ಲಿಯಾನ್ ರಾವೂರ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರವಿಚಂದ್ರ ದೊಡ್ಡಮನಿ, ನಾಗರಾಜ ಕಾಶಿ, ಸುಭಾಷ ಕಾಶಿ, ವಿಠಲ್ ಕಟ್ಟಿಮನಿ, ಜಗನ್ನಾಥ ಮುಡುಬೂಳಕರ್ ಸೇರಿದಂತೆ ಇತರರು ಇದ್ದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಇದಕ್ಕೂ ಮುನ್ನ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹಾಗೂ ಬಸ್ ನಿಲ್ದಾಣ ಹತ್ತಿರ ಅಟೋ ರಾಜಾ ಶಂಕರನಾಗ್ ಅವರ ನಾಮಫಲಕ ಅನಾವರಣಗೊಳಿಸಲಾಯಿತು.

