ಚಿತ್ತಾಪುರ ಗುರು ಪೂರ್ಣಿಮೆ ನಿಮಿತ್ತ ವಿರೇಂದ್ರ ಆಚಾರ್ಯ ಅವರಿಗೆ ನಾಣ್ಯಗಳಿಂದ ತುಲಭಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಗುರು ಪೂರ್ಣಿಮೆ ನಿಮಿತ್ತ ಗುರುವಾರ ಬ್ರಹ್ಮಶ್ರೀ ವಿರೇಂದ್ರ ಆಚಾರ್ಯ ಇವರಿಗೆ ವಿಜಯಲಕ್ಷ್ಮೀ ಜಗನ್ನಾಥರೆಡ್ಡಿ ಟೆಕಳಿ ನಿರ್ಣಾ ಇವರ ಪರಿವಾರದಿಂದ ನಾಣ್ಯಗಳಿಂದ ತುಲಭಾರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡ ಓಂಕಾರ್ ರೇಷ್ಮಿ ಮಾತನಾಡಿ, ಗುರುವಿನ ಅನುಗ್ರಹ ಪ್ರತಿಯೊಂದು ಹಾದಿಯಲ್ಲಿ ಬೆಳಕು ಬೀಳಲಿದೆ. ಗುರು ಪೂರ್ಣಿಮೆ ದಿನವನ್ನು ಆಚರಿಸುವುದು ನಮ್ಮ ಸಂಸ್ಕೃತಿಯ ಜ್ಞಾನ ಪರಂಪರೆಗಾಗಿ ನಮಿಸುವ ಸನ್ನಿವೇಶ. ಇದು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ಜೀವನದ ಸತ್ಯವನ್ನು ಅರಿತವರಿಗೆ ಕೃತಜ್ಞತೆಯ ಪ್ರಾಮಾಣಿಕ ಸೂಚನೆಯಾಗಿದೆ. ಗುರುಗಳ ಮಾರ್ಗದರ್ಶನವಿಲ್ಲದ ಬದುಕು ದಿಕ್ಕಿಲ್ಲದ ನಾವಿಕನಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮಪ್ಪ ರೇಷ್ಮಿ, ರಾಜಶೇಖರ್ ಸಿಂಪಿ, ಸಾಬಣ್ಣ ಪೂಜಾರಿ, ವಿಶ್ವನಾಥ್ ಸೇರಿದಂತೆ ಇತರರು ಇದ್ದರು.

