ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ದೇವಿಂದ್ರರೆಡ್ಡಿ ದುಗನೂರ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಚಿತ್ತಾಪುರ ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಿಂದ್ರರೆಡ್ಡಿ ದುಗನೂರ ಸೇರಿದಂತೆ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ ಎಂದು ಚಿತ್ತಾಪುರ ಪ್ರಾದೇಶಿಕ ಕ್ಷೇತ್ರ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳು:
ಸಾತನೂರ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ದೇವಿಂದ್ರರೆಡ್ಡಿ ದುಗನೂರ (ಅಧ್ಯಕ್ಷರು), ದಿಗ್ಗಾಂವ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ದೇವಿಂದ್ರಪ್ಪ ಎನ್. ದೊರೆ (ಉಪಾಧ್ಯಕ್ಷರು), ಅಲ್ಲೂರು.ಬಿ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ವೆಂಕಟಪ್ಪ, (ಪ್ರಧಾನ ಕಾರ್ಯದರ್ಶಿ), ಚಿತ್ತಾಪುರ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ರಮೇಶ ಸಾಲೂಟಗಿ (ಖಜಾಂಚಿ), ಕೊಂಚೂರ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ಮಣಿಸಿಂಗ್ (ಜಂಟಿ ಕಾರ್ಯದರ್ಶಿ), ಇಂಗಳಗಿ ಸರ್ಕಾರಿ ಪ್ರೌಢ ಶಾಲೆ೧ ದೈಹಿಕ ಶಿಕ್ಷಕಿ ರಾಣಿ ಹಿರೇಮಠ (ಸಂಘಟನಾ ಕಾರ್ಯದರ್ಶಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

