Oplus_0

ಚಿತ್ತಾಪುರ ನಾಗಾವಿ ದಸರಾ ವೈಭವದ ಪ್ರಥಮ ವರ್ಷದ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ: ಬೊಮ್ಮನಹಳ್ಳಿ ಮನವಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ನಾಗಾವಿ ದಸರಾ ವೈಭವದ ಪ್ರಥಮ ವರ್ಷದ ಕಾರ್ಯಕ್ರಮ ಅ.11 ರಿಂದ 20 ರ ವರೆಗೆ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ದೇವಿಯ ಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಹೀಗಾಗಿ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಸಮಿತಿ ಅಧ್ಯಕ್ಷ ರಾಚಪ್ಪ ಬೊಮ್ಮನಹಳ್ಳಿ ಮನವಿ ಮಾಡಿದರು.

ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ದಿನಗಳ ಕಾಲ ವಿಶಿಷ್ಟ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಹೀಗಾಗಿ ಪಟ್ಟಣದ ಸಾರ್ವಜನಿಕರು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅ.10 ರಂದು ಸಾಯಂಕಾಲ 4.35ಕ್ಕೆ ವಾದ್ಯಮೇಳಗಳೊಂದಿಗೆ ದೇವಿಯ ಮೂರ್ತಿ ಮೇರವಣಿಗೆ ಶ್ರೀ ಅಕ್ಕಮಹಾದೇವಿ ದೇವಸ್ಥಾನದಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದ ವರೆಗೆ ನಡೆಯಲಿದೆ.

ಅ.11 ರಂದು ಬೆಳಿಗ್ಗೆ 6 ಗಂಟೆಗೆ ಸನಾತನ ಭಾರತೀಯ ಪದ್ಧತಿಯಂತೆ ಪ್ರಧಾನ ಅರ್ಚಕರಾದ ವೇ.ಮೂ ಶ್ರೀ ಮಂಜುನಾಥ ಶಾಸ್ತ್ರಿಗಳು ಹಾಗೂ ತಂಡದವರಿಂದ ಘಟಸ್ಥಾಪನೆ ಹಾಗೂ ಅಖಂಡ ದೀಪಾರಾದನೆ, ಅ.12 ರಂದು ಸಾಯಂಕಾಲ 6 ಗಂಟೆಗೆ ಕುಂಕುಮಾರ್ಚನೆ ನಂತರ ಮಾತೆಯರಿಂದ ದಾಂಡಿಯ ಕಾರ್ಯಕ್ರಮ, ಸಾಯಂಕಾಲ 7.15ಕ್ಕೆ ಚಿತ್ತಾಪುರ ಪಟ್ಟಣದ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಸ್ಥಳೀಯ ಪ್ರತಿಭೆಗಳಿಂದ ಅ.13 ರಂದು ಸಾಯಂಕಾಲ 7.15ಕ್ಕೆ ರೇಣುಕ ಬಸವ ವೈದಿಕ ಬಳಗದಿಂದ ದೇವಿಗೆ ವಿಶೇಷ ಮಹಾಆರತಿ (ಕಾಶಿಯ ಪ್ರಸಿದ್ದ ಗಂಗಾ ಆರತಿ ಶೈಲಿಯಲ್ಲಿ), ಅ.14 ರಂದು ಸಾಯಂಕಾಲ 7.15ಕ್ಕೆ ತಾಲೂಕಿನ ಸಾಹಿತಿಗಳಿಂದ ದಸರಾ ಕವಿಗೋಷ್ಠಿ ಕನ್ನಡ ಸಾಹಿತ್ಯ ಪರಿಷತ್ ಚಿತ್ತಾಪೂರ ಇವರ ಸಂಯುಕ್ತಾಶ್ರಯದಲ್ಲಿ, ಅ.15 ರಂದು ಸಾಯಂಕಾಲ 7.15ರಿಂದ ಹೊನಲು ಬೆಳಕಿನ ವಾಲಿಬಾಲ್, ದಸರಾ ಕ್ರೀಡಾಕೂಟ ನಾಗಾವಿ ನಾಡು ಯುವಕರ ಸಂಯುಕ್ತಾಶ್ರಯದಲ್ಲಿ, ಅ.16 ರಂದು ಸಾಯಂಕಾಲ 7.15ಕ್ಕೆ ಚಿತ್ತಾಪುರ ತಾಲೂಕಿನ ಆದರ್ಶ ದಂಪತಿಗಳು, ಚಿತ್ರನಟ ಹಾಗೂ ಹಿರಿಯ ಸಾಹಿತಿ ಮಹಿಪಾಲ್‌ ರೆಡ್ಡಿ ಮುನ್ನೂರ ಸೇಡಂ ಇವರ ಸಾರಥ್ಯದಲ್ಲಿ, ಅ.17 ರಂದು ಸಾಯಂಕಾಲ 7.15ಕ್ಕೆ ಎಸ್. ಜಾನಕಿ ಅವರ ನೆನಪಿಗಾಗಿ ಗಾನಯಾನ ರಸಮಂಜರಿ ಕಾರ್ಯಕ್ರಮ ಕಲಾವಿದ ಮೇಲೋಡಿಸ್ ಕಲಬುರಗಿ ಚೆನ್ನವೀರ ಬೆಳಗುಂಪಾ ಇವರ ಸಾರಥ್ಯದಲ್ಲಿ,

ಅ.18 ರಂದು ಸಾಯಂಕಾಲ 7.15ಕ್ಕೆ ಗದಗ ಜಿಲ್ಲೆಯ ಖ್ಯಾತ ಜನಪದ ಕಲಾವಿದರಿಂದ ಜೋಗತಿ ನೃತ್ಯ ಪ್ರದರ್ಶನ, ಜೀವನ ಬೆಳಕು ಜೀವನ ಜ್ಯೋತಿ ಜನಪದ ವೈವಿಧ್ಯಮಯ ಕಲಾತಂಡದಿಂದ, ಅ.19 ರಂದು ಸಾಯಂಕಾಲ 7.15ಕ್ಕೆ ಸ್ಥಳೀಯ ಪ್ರತಿಭಾವಂತ ಕಲಾವಿದರ ಪ್ರೋತ್ಸಾಹಕ್ಕಾಗಿ ವಾಯ್ಸ್ ಆಫ್ ಚಿತ್ತಾಪುರ, ಚಿತ್ರನಟ ಹಾಗೂ ಹಿರಿಯ ಸಾಹಿತಿ ಮಹಿಪಾಲ್‌ ರೆಡ್ಡಿ ಮುನ್ನೂರ ಸೇಡಂ ಇವರ ಸಾರಥ್ಯದಲ್ಲಿ, ಅ.20 ರಂದು ಸಾಯಂಕಾಲ 4.15ಕ್ಕೆ ವಿಜಯ ದಶಮಿ ಪ್ರಯುಕ್ತ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರತಿದಿನ ಸಂಜೆ ನಡೆಯುವ ಕುಂಕುಮಾರ್ಚನೆಯಲ್ಲಿ ಭಾಗವಹಿಸಲು ಮಾತೆಯರು ಮೊದಲೆ ಹೆಸರನ್ನು ನೊಂದಾಯಿಸಬೇಕು ಹಾಗೂ ಪ್ರತಿದಿನದ ಕಾರ್ಯಕ್ರಮದಲ್ಲೂ ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಭಂಕಲಗಿ, ವಿಶ್ವಾರಾಧ್ಯ ಪಾಟೀಲ ಕರದಾಳ, ಮಂಜುನಾಥ ಶಾಸ್ತ್ರಿ, ಚಂದ್ರಶೇಖರ ಉಟಗೂರ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಶ್ರೀಧರ್ ವಾರದ್, ಅನಿಲ್ ವಡ್ಡಡಗಿ, ದೀಪಕ್ ಹೊಸ್ಸುರಕರ್, ಕೋಟೇಶ್ವರ ರೇಷ್ಮಿ, ನಾಗೇಶ್ ಲೋಮಟೆ, ವಿಜಯಕುಮಾರ್ ಯಾಗಾಪೂರ, ಬಸಲಿಂಗಪ್ಪ ಸಜ್ಜನ್, ಯಲ್ಲಾಲಿಂಗ ಸುಲ್ತಾನಪೂರ, ಅಂಬರೀಷ್ ಸುಲೇಗಾಂವ, ಅಂಬರೀಷ್ ಭೋವಿ, ಮೇಘರಾಜ ಗುತ್ತೇದಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!