Oplus_0

ಪಂಚ್ ಗ್ಯಾರಂಟಿ ಸಮಿತಿ ಸದಸ್ಯರಿಗೆ ಸನ್ಮಾನ | ಗ್ಯಾರಂಟಿ ಯೋಜನೆಗಳ ಲಾಭ ಜನಸಾಮಾನ್ಯರಿಗೆ ತಲುಪಿಸಿ: ಸಾಲಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ್ ಗ್ಯಾರಂಟಿ ಯೋಜನೆಗಳ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಂಚ್ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚ್ ಗ್ಯಾರಂಟಿ ಯೋಜನೆಗಳ ಲಾಭವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಪಂಚ್ ಗ್ಯಾರಂಟಿ ಸಮಿತಿಗೆ ನಾಮನಿರ್ದೇಶನಗೊಂಡ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಯೋಜನೆಗಳ ಲಾಭವನ್ನು ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು. ಸ್ಥಾನಮಾನ ಸಣ್ಣದು ಇರಲಿ ದೊಡ್ಡದು ಇರಲಿ, ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸುವುದು ಮುಖ್ಯ ಎಂದರು.

ಪಂಚ್ ಗ್ಯಾರಂಟಿ ಸಮಿತಿ ಸದಸ್ಯರಿಗೆ ಸನ್ಮಾನ:

ಪಂಚ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಸ್ ಬೊಮ್ಮನಳ್ಳಿಕರ್, ಸದಸ್ಯರಾದ ವೆಂಕಟೇಶ್ ಕುಲಕರ್ಣಿ ಅಲ್ಲೂರ (ಕೆ), ರವೀಂದರೆಡ್ಡಿ ಭಂಕಲಗಿ, ಸೋಮಶೇಖರ ಟೋಕಾಪೂರ, ವಿನ್ನುಕುಮಾರ ಜೈಪಾಲ ದೊಡ್ಡಮನಿ, ರಮೇಶ್ ಹಡಪದ ಕೊಲ್ಲೂರ, ಮಹ್ಮದ ಇಸಾಕ್ ಅಬ್ದುಲ್ ನಬಿ ದಂಡೋತಿ, ಸುರೇಶ ಗುತ್ತೇದಾರ ಕರದಾಳ, ಶರಣಬಸಪ್ಪ ಅರಣಕಲ್ ಭಾಗೋಡಿ, ಸಿದ್ಧಲಿಂಗ ಮುಗಟಿ ಮರಗೋಳ, ಸುಭಾಶ್ಚಂದ್ರ ಪವಾರ ದಿಗ್ಗಾಂವ ಅವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣ್ಣಿ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಯುವ ಕಾಂಗ್ರೆಸ್ ಅಧ್ಯಕ್ಷ ದೇವು ಯಾಬಾಳ, ಸಿದ್ದಣ್ಣಗೌಡ ಆರ್.ಡಿ, ಶಿವಯೋಗಿ ರಾವೂರ, ಲಕ್ಷ್ಮೀಕಾಂತ ಸಾಲಿ, ಇಸ್ಮಾಯಿಲ್ ಕಮರವಾಡಿ, ನಾಗೇಂದ್ರ ಚಪಾಟ್ಲೆ, ವಿಶ್ವನಾಥ ಹಾದಿಮನಿ, ಪ್ರಭು ಹಲಕರ್ಟಿ, ಶರಣಪ್ಪ ಕೋರವಾರ ಸೇರಿದಂತೆ ಇತರರು ಇದ್ದರು. ವಿಠಲ್ ಕಟ್ಟಿಮನಿ ನಿರೂಪಿಸಿದರು, ಸಂಜಯ್ ಬುಳಕರ್ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!