ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ, ನಿರ್ದೇಶಕರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಸನ್ಮಾನ | ಪಿಎಲ್’ಡಿ ಬ್ಯಾಂಕ್ ಅಧಿಕಾರ ಬರುವಲ್ಲಿ ನಾಗರೆಡ್ಡಿ ಪಾತ್ರ ಪ್ರಮುಖ: ಹೇರೂರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪಿಎಲ್’ಡಿ ಬ್ಯಾಂಕ್ ಅಧಿಕಾರದ ಗದ್ದುಗೆ ಸುದೀರ್ಘ ಕಾಲದ ನಂತರ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿದೆ ಅಂದರೆ ಅದು ನಾಗರೆಡಿ ಪಾಟೀಲ ಕರದಾಳ ಅವರ ಪರಿಶ್ರಮ ಮುಖ್ಯ ಇದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರು ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ನಲ್ಲಿ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ, ನಿರ್ದೇಶಕರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, 2021 ರಲ್ಲಿ ನಿರ್ದೇಶಕನಾದ ನಂತರ ಇಲ್ಲಿವರೆಗೆ ಪ್ರತಿಯೊಂದು ಸಹಕಾರ ಸಂಘಕ್ಕೆ 2 ರಿಂದ 5 ಕೋಟಿ ಸಾಲ ಸೇರಿದಂತೆ 85 ರಿಂದ 90 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಚಿತ್ತಾಪುರ ತಾಲೂಕಿನಲ್ಲಿ ಯಾಗಾಪೂರ, ಸಾತನೂರು, ಕಂದಗೋಳ, ಹೇರೂರು, ಬೆಡಸೂರ ಸೇರಿದಂತೆ 10 ಹೊಸ ಸಹಕಾರ ಸಂಘಗಳು ಆರಂಭಿಸಲಾಗಿದೆ ಎಂದು ಹೇಳಿದರು.
ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಒಗ್ಗೂಡಿ ಶ್ರಮ ವಹಿಸಿದ್ದರಿಂದ ಈ ಬಾರಿ ಪಿಎಲ್’ಡಿ ಅಧಿಕಾರ ಒದಗಿ ಬಂದಿದೆ ಎಂದು ಹೇಳಿದರು. ಬರುವ ದಿನಗಳಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ವೀರುಪಾಕ್ಷಿ ಗಡ್ಡದ್ ಮಾತನಾಡಿ, ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರ ಮಾಡಿರುವ ಆರೋಪ ಹತಾಶೆಯಿಂದ ಕೂಡಿದೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು. ನಿರ್ದೇಶಕರಾದ ಯಂಕಾರೆಡ್ಡಿ ತಿಪ್ಪಾರೆಡ್ಡಿ, ಶಿವರಾಯ ಮಲ್ಲಶೆಟ್ಟಪ್ಪಾ, ಅಶೋಕ ಗುರುಲಿಂಗಪ್ಪಾ, ಸುನೀಲಕುಮಾರ ವಿಶ್ಲೇಲ್, ರಾಜಶೇಖರ ಗುಂಡಪ್ಪಾ, ಅಣ್ಣಾರಾವ ಹಣಮಂತರಾವ, ಜಾವೀದ ಪಟೇಲ್ ಮಹಿಬೂಬ ಪಟೇಲ್, ರಮೇಶ ಥಾವರು ಜಾಧವ ಮರೆಪ್ಪ ಸಾಯಿಬಣ್ಣಾ, ಬಸಲಿಂಗಮ್ಮ ಗಂಡ ಬಸವರಾಜ ಪಾಟೀಲ್, ಅಕ್ತರ ಬೇಗಂ ಗಂಡ ಅಜಮೋದೀನ್, ಮಹಾದೇವ ನಾಶಿ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಮನ್ಸೂರ್ ಪಟೇಲ್, ಶಿವರಾಜ್ ಕಲಗುರ್ತಿ, ಯಲ್ಲಾಲಿಂಗ ಮುಗುಟಿ, ಶಾಂತಕುಮಾರ್ ಬೆಣ್ಣೂರ, ಸುರೇಶ್ ಗುತ್ತೇದಾರ, ಮುನಿಯಪ್ಪ ಕೊಳ್ಳಿ, ಕರಣು ಅಲ್ಲೂರು, ಶರಣು ವಾರದ್, ಸಿದ್ದು ಸ್ವಾಮಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿ.ಬಿ ಸಾಧಲಾಪುರ್ ಮತ್ತು ಸಿಬ್ಬಂದಿಗಳಾದ ಮಹೇಂದ್ರಕುಮಾರ್, ಮಲ್ಲಿಕಾರ್ಜುನ್ ಯಕ್ಕಚಿ, ಸಿದ್ದಮ್ಮ ಮಲಕೂಡ, ತನುಜಾ ಬೆಳಕೇರಿ, ಜ್ಯೋತಿ ಜಾಧವ, ದಯಾನಂದ ಪಾಟೀಲ್ ಸೇರಿದಂತೆ ಇತರರು ಇದ್ದರು. ಬಸವರಾಜ ಚಿನ್ನಮಳ್ಳಿ ನಿರೂಪಿಸಿದರು.

