Oplus_131072

ಸತ್ಯ ಹೇಳಿದರೆ ಬೆಚ್ಚಿ ಬೀಳುವ ಕಾಂಗ್ರೆಸ್, ಸುಳ್ಳಿನ ಅಪಪ್ರಚಾರದಲ್ಲಿ ತೊಡಗಿದೆ: ಹಣಮಂತ ಇಟಗಿ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಸತ್ಯ ಹೇಳಿದರೆ ಬೆಚ್ಚಿ ಬೀಳುವ ಕಾಂಗ್ರೆಸ್ಸಿಗರು ಅಪಪ್ರಚಾರದಲ್ಲಿ ತೊಡಗಿ ಆರ್.ಎಸ್.ಎಸ್ ಬಗ್ಗೆ ಅಲ್ಲಸಲ್ಲದ ಹೇಳಿಕೆ ನೀಡುತ್ತಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್.ಎಸ್.ಎಸ್. ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸತ್ಯ ಹೇಳಿದ್ದಾರೆ. ಈ ದೇಶದ ಸಂವಿಧಾನದ ಪೀಠಿಕೆಯಲ್ಲಿ ಯಾರೂ ಕೈ ಆಡಿಸಬಾರದು ಅದನ್ನು ತಿದ್ದುಪಡಿ ಮಾಡಲು ಯಾವುದೇ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.

ಯಾವುದೇ ತಿದ್ದುಪಡಿ ಮಾಡುವುದಿದ್ದರೂ ಕಲಂಗಳನ್ನು ಅನುಚ್ಛೇದಗಳನ್ನು ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಆದರೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಅನೈತಿಕವಾಗಿ ಮತ್ತು ರಾಜಾರೋಷವಾಗಿ ಪೀಠಿಕೆಯಲ್ಲಿ ಕೈಯಾಡಿಸಿ ಜಾತ್ಯಾತೀತ ಮತ್ತು ಸಮಾಜವಾದ ಎಂಬ ಎರಡು ಶಬ್ದಗಳನ್ನು ಸೇರ್ಪಡೆ ಮಾಡಿ ಈ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದರು ಎಂದು ಅವರು ದೂರಿದ್ದಾರೆ.

ಇದಿಷ್ಟೇ ಅಲ್ಲದೇ ಮುಂದುವರೆದು ಅಲಾಹಾಬಾದ ಹೈಕೋರ್ಟ್ ಈಕೆಯ ಚುನಾವಣೆ ಅಕ್ರಮವನ್ನು ಎತ್ತಿಹಿಡಿದು ಬಂಧಿಸಲು ಆದೇಶ ನೀಡಿದ್ದನ್ನು ಸಹಿಸಲಾಗದೇ ತಾನು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಈ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿ ಇಡೀ ದೇಶದ ವಿರೋಧ ಪಕ್ಷದ ನಾಯಕರನ್ನೆಲ್ಲ ಬಂಧಿಸಿ ದೇಶವನ್ನೇ ಬಂಧಿಖಾನೆ ಯಾಗಿ ಮಾಡಿದ್ದಲ್ಲದೇ ಯಾವ ಸದನದಲ್ಲೂ ಚರ್ಚೆ ಮಾಡದೇ ಸಂವಿಧಾನದ ಪೀಠಿಕೆಯಲ್ಲಿ ಈ ಎರಡು ಶಬ್ದಗಳನ್ನು ಸೇರಿಸಿದ ಕಾಂಗ್ರೆಸ್ ದೇಶಕ್ಕೆ ದೊಡ್ಡ ಅಪಚಾರ ಮಾಡಿತು ಎಂದು ತಿಳಿಸಿದ್ದಾರೆ.

ಇದರ ಕನಿಷ್ಟ ಜ್ಞಾನವೂ ಇಲ್ಲದ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಿತರರು ಆರ್.ಎಸ್.ಎಸ್. ಬಗ್ಗೆ ಸುಳ್ಳು ಪುಂಗುವುದನ್ನು ನಿರಂತರ ಮಾಡುತ್ತಾ ಸುಳ್ಳನ್ನು ಸತ್ಯವಾಗಿಸಲು ಹೊರಟಿದ್ದಾರೆ ಎಂದು ಅವರು ದೂರಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಉಪಾದ್ಯಕ್ಷ ಭೀಮಣ್ಣ ಮೇಟಿ ಅವರು ಆರ್ ಎಸ್ ಎಸ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಕಾಂಗ್ರೆಸ್ ಎಂದರೆ ಸುಳ್ಳು ಎಂಬುದನ್ನು ಮೇಟಿ ಸಹ ಸಾಬೀತು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಪಿಠಿಕೆಯಲ್ಲಿ ಈ ಎರಡು ಶಬ್ದಗಳು ಸಂವಿಧಾನದಲ್ಲಿ ಸೇರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂಲ ಸಂವಿಧಾನದಾನಕ್ಕೆ ತಿದ್ದಿದ ಕಾಂಗ್ರೆಸ್ ನಾಯಕರಿಗೆ ಆರ್ ಎಸ್ ಎಸ್ ನಲ್ಲಿದ್ದಾಗ ಕಲಿತದ್ದನ್ನು ತಿಳಿಸಿ ಹೇಳಲಿ ಆರ್ ಎಸ್ ಎಸ್ ಮುಖವಾಡ ಕಳಚಲು ಅದೇನು ಕಾಂಗ್ರೆಸ್ ತರಹ ಲೂಟಿ ಮಾಡಿದ ಸಂಘಟನೆ ಅಲ್ಲ ದೇಶದ ಒಳತಿಗಾಗಿ, ದೇಶದ ಅಖಂಡತೆಗಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಸಂಘಟನೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!