Oplus_0

ಜಾನಪದ ಸಂಗೀತ ವೈಭವ | ಬುಡ್ಗ ಜಂಗಮ ಸಮಾಜದವರು ಕಲೆ ಸಂಸ್ಕೃತಿಯಲ್ಲಿ ಪಾಂಡಿತ್ಯ ಬಲ್ಲಂತವರು: ಪಟೇಲ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಬುಡ್ಗ ಜಂಗಮ ಸಮಾಜದವರು ಅಲೆಮಾರಿಗಳು ಅವಿದ್ಯಾವಂತರು ಆಗಿರಬಹುದು ಆದರೆ ಕಲೆ, ಸಂಸ್ಕೃತಿ, ವೈದ್ಯಕೀಯ ರಂಗಗಳಲ್ಲಿ ಪಾಂಡಿತ್ಯ ಬಲ್ಲಂತಹ ಸಮುದಾಯವಿದು ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಜಿಲ್ಲಾ ಉಪಾಧ್ಯಕ್ಷ ಮಸ್ತಾನ್ ಪಟೇಲ್ ಹೇಳಿದರು.

ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಅಲೆಮಾರಿ ಕಲಾ ವೇದಿಕೆ ಚಿತ್ತಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು (ಕಲಬುರಗಿ) ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಗೀತ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವರಿಂದ ಭರತ್ ಭೂಮಿಯಲ್ಲಿ ರಾಜ್ಯ ಮಹಾರಾಜರ ಕಥೆ, ಕಾದಂಬರಿಗಳು, ರಾಮಾಯಣ, ಮಹಾಭಾರತ, ಪುರಾಣ ಪ್ರವಚನಗಳನ್ನು ಜನರಿಗೆ ಮನಮುಟ್ಟುವ ಹಾಗೆ ವೇಷಭೂಷಣಗಳನ್ನ ಹಾಕಿಕೊಂಡು ಉಡುಪುಗಳನ್ನು ಧರಿಸಿ ವಾದ್ಯಪರೀಕರಗಳಿಂದ ಸಂಗೀತ ಗಾಯನ ನುಡಿಸುವ ಮೂಲಕ ಕಲೆಯನ್ನು ಪ್ರದರ್ಶನ ಮಾಡಿ ಹಳ್ಳಿಗಾಡಿನ ಜನರಿಗೆ ಬಹು ಸೊಗಸಾದ ಸಂಗೀತ ನಾಟಕ ಹಗಲುವೇಷ, ಬರ್ರಾಕಥೆ ಪ್ರದರ್ಶಿಸಿ ಹಳ್ಳಿಯ ಜನರ ಮನ ಗೆದ್ದ ಮಹಾನ್ ಕಲಾವಿದರು ಎಂದು ಬಣ್ಣಿಸಿದರು.

ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಪಂಡಿತ್ ಶಿರವಾಟಿ ಮಾತನಾಡಿ, ಅಲೆಮಾರಿಗಳು ಕಲೆ ಸಂಸ್ಕೃತಿಯಲ್ಲಿ ಪ್ರಾವೀಣ್ಯತೆ ಹೊಂದಿದವರು ಆದರೆ ಇವರಿಗೆ ಒಂದೆಡೆ ಸ್ಥಿರವಾಗಿ ನಿಲ್ಲಲು ತಮ್ಮದೇ ಆದ ಸ್ವಂತ ಜಾಗ ಮನೆಗಳಿರಲಿಲ್ಲ ಇಂತಹ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಆಶ್ರಯ ಕಾಲೋನಿಯಲ್ಲಿ ಸ್ಲಂ ಬೋರ್ಡ್ ಹೌಸ್ ನಲ್ಲಿ ಅಲೆಮಾರಿಗಳಿಗೆ ಸುಮಾರು 21 ಮನೆ ನೀಡುವ ಮೂಲಕ ಅಲೆಮಾರಿಗಳನ್ನು ನೆಲೆ ಮಾರಿಗಳನ್ನಾಗಿ ಮಾಡಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಹಕಾರ ಮಾಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಸುಭಾಷ್ ಜಾಧವ ಉದ್ಘಾಟಿಸಿದರು. ಅಲೆಮಾರಿ ಕಲಾ ವೇದಿಕೆ ಅಧ್ಯಕ್ಷ ಮಾರುತಿ ಶಿರವಾಟಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಗುರುಲಿಂಗಪ್ಪ ಮೊಗಲಾ, ಲಲಿತಾ ಶಾಸ್ತ್ರೀ, ರಾಜೇಶ್ವರಿ ಮೋನಪ್ಪ ದೇವರ್, ಸಂಗೀತಾ ಪಾಟೇಕರ್, ಹಾರ್ಮೋನಿಯಂ ಮಾಸ್ಟರ್ ಶಿವರಾಜ್ ಚಿತ್ತಾಪುರ, ಪಾರಂಪಾರಿಕಾ ವೈದ್ಯ ಮಾಣಿಕೇಪ್ಪ ಶಂಕ್ರಪ್ಪ, ಚನ್ನಪ್ಪ ಸುಡಗಾಡು ಸಿದ್ದ, ಯಲ್ಲಪ್ಪ ಡೊಕ್ಕಾ, ಸಿದ್ರಾಮ ಬುಡ್ಗ ಜಂಗಮ, ಅನವಾರ ಮೇಸ್ತ್ರೀ ಚಿತ್ತಾಪುರ, ಶಾಲುಬೇಗಂ ಚಿತ್ತಾಪುರ, ಮಹಾಲಿಂಗಮ್ಮ ಚಿತ್ತಾಪುರ ವೇದಿಕೆಯಲ್ಲಿದ್ದರು.

ಜಾನಪದ ಮೇಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುರಕಥೆ ಶಂಕ್ರಮ್ಮ ಮಹಾದೇವ ರಾಮತೀರ್ಥ, ವಚನ ಗೀತೆ ರಾಕೇಶ ಯಾದಗಿರಿ, ಭಾವ ಗೀತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರ ಶಾಸ್ತ್ರಿ ಯಾದಗಿರಿ, ತತ್ವಪದ ಮಾರುತಿ ಮುಗಳಕರ್, ಬಸವಣ್ಣನ ಪಾತ್ರ ಭರತಕುಮಾರ ಶಿರವಾಟಿ, ಜಾನಪದ ಸಂಗೀತ ಗಂಗಮ್ಮ ಯಾದಗಿರಿ, ಗಾಯಕ ಪಂಚಶೀಲ್ ಸುಮಾರ್, ತಬಲಾ ಸಾಥ್ ಮಾಂತೇಶ ನರಬೋಳಿ ಅವರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!