Oplus_131072

3ನೇ ವಾರ್ಷಿಕೋತ್ಸವ ಮತ್ತು ವಿಶ್ವದಾಖಲೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ, ಚಿತ್ತಾಪುರ ಕಟಕೆ ಕಂಪ್ಯೂಟರ್ ತರಬೇತಿ ಸಂಸ್ಥೆಯ ಸೇವೆ ಅಮೋಘ: ಗುತ್ತೇದಾರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಕಳೆದ ಮೂರು ವರ್ಷಗಳಿಂದ ಕಂಪ್ಯೂಟರ್ ತರಬೇತಿ ನೀಡುತ್ತಿರುವ ಕಟಕೆ ಕಂಪ್ಯೂಟರ್ ತರಬೇತಿ ಸಂಸ್ಥೆಯ ಸೇವೆ ಅಮೋಘವಾಗಿದೆ ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ಕಟಕೆ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 3ನೇ ವಾರ್ಷಿಕೋತ್ಸವ ಮತ್ತು ವಿಶ್ವದಾಖಲೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ, ಯುವಕರಿಗೆ ಕಂಪ್ಯೂಟರ್ ತರಬೇತಿ ನೀಡಿ ಅವರಲ್ಲಿ ಸ್ವಾಭಿಮಾನ ಹಾಗೂ ಸ್ವಾವಲಂಬನೆ ಬೆಳೆಸಿದ ಕೀರ್ತಿ ಕಟಕೆ ಸಂಸ್ಥೆಗೆ ಸಲ್ಲುತ್ತದೆ ಎಂದರು. ಪ್ರಸ್ತುತ ಕಾಲದಲ್ಲಿ ಕಂಪ್ಯೂಟರ್ ಶಿಕ್ಷಣ ಬಹಳ ಅವಶ್ಯಕತೆಯಾಗಿದ್ದು, ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿ ಪಡೆಯಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕ ಸುಧೀರ್ ಕಟಕೆ ಮಾತನಾಡಿ, ಚಿತ್ತಾಪುರ ತಾಲೂಕು ಶೈಕ್ಷಣಿಕವಾಗಿ ಬೆಳವಣಿಗೆಯಾಗಬೇಕು ನಾವು ಯಾರಿಗೇನು ಕಡಿಮೆ ಇಲ್ಲ ಎಂಬುದು ಸಾಬೀತು ಮಾಡಬೇಕಿದೆ, ನಮ್ಮನ್ನು ಕೀಳಾಗಿ ನೋಡುವವರಿಗೆ ಉತ್ತರ ನೀಡಬೇಕಿದೆ ಇದು ನಮ್ಮ ಆಶಯವಾಗಿದೆ ಈ ನಿಟ್ಟಿನಲ್ಲಿ ಕೆಂಪ್ಯೂಟರ್ ತರಬೇತಿ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎಂದು ಹೇಳಿದರು.

ನಮ್ಮ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಎರಡು ಬಾರಿ ವಿಶ್ವ ದಾಖಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೃಷ್ಟಿ ರವೀಂದ್ರ ಸಿಂಗೋಡಿ ವಿಶ್ವದಾಖಲೆ ಮಾಡಿದ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆ ಕಟ್ಟುವ ಮೂಲಕ Z ನಿಂದ A ರವರೆಗೆ ನಡುವೆ ಸ್ಪೇಸ್ ಬಿಡುವ ಮೂಲಕ ಸಾಧನೆ ಕೇವಲ 4.16 ಸೆಕೆಂಡ್‌ಗಳಲ್ಲಿ ಮಾಡಿದ್ದಾಳೆ ಎಂದು ಹೇಳಿದರು. ಈ ವಿದ್ಯಾರ್ಥಿನಿಗೆ ಸಂಸ್ಥೆಯ ನಿರ್ದೇಶಕರಿಂದ ಹಾಗೂ ಅತಿಥಿಗಳಿಂದ ಸನ್ಮಾನಿಸಲಾಯಿತು.

ವಿಶ್ವ ದಾಖಲೆ ಮಾಡಿದ ಸೃಷ್ಟಿ ಸಿಂಗೋಡಿ ಮಾತನಾಡಿ, ನಾನು ವಿಶ್ವ ದಾಖಲೆ ಮಾಡುವಲ್ಲಿ ಸಂಸ್ಥೆಯ ನಿರ್ದೇಶಕ ಸುಧೀರ ಭಗವಂತ ಕಟಕೆ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಮಾರ್ಗದರ್ಶನ ಹಾಗೂ ತಂದೆ ತಾಯಿಯವರ ಸಹಕಾರ ಮತ್ತು ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಟೈಪ್ ಮಾಡುವ ಸ್ಫರ್ಧೆಯಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಜಗದೇವ ಕುಂಬಾರ, ಸಿದ್ದಣ್ಣಾ ರಾಮಣ್ಣ ಕವಲಾದರ್, ಕಾಶಪ್ಪ ಹುಸೇನಪ್ಪ ಮೇಟಿ, ರವಿಂದ್ರ ದೊಡ್ಡಪ್ಪ ಸಿಂಗೋಡಿ, ದೊಡ್ಡಪ್ಪ ಶಂಕ್ರೆಪ್ಪ ಸಿಂಗೋಡಿ ವೇದಿಕೆಯಲ್ಲಿದ್ದರು.

ಸಿದ್ದಮ್ಮ ಸುಧೀರ ಸ್ವಾಗತಿಸಿದರು, ಕೀರ್ತಿ ರಾಮಣ್ಣ ನಾಟೀಕರ್ ನಿರೂಪಿಸಿದರು, ನಂದಿನಿ ನಾಗಯ್ಯಸ್ವಾಮಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!