Oplus_0

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನೀತಿ ಸಂಹಿತೆ ನಿಮಿತ್ತ ಮಧ್ವಾಚಾರ್ಯ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಸರಳ ಆಚರಣೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿ ಇರುವ ನಿಮಿತ್ತ ಜಗದ್ಗುರು ಶ್ರೀ ಮಧ್ವಾಚಾರ್ಯ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ಹೇಳಿದರು.

ಪ್ರಜಾ ಸೌಧದ ಸಭಾಂಗಣದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.21 ರಂದು ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯ ಹಾಗೂ ಅ.26 ರಂದು ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಪ್ರಜಾ ಸೌಧದ ಆವರಣದಲ್ಲಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಬೇಕು ಎಂದು ಹೇಳಿದರು. ಆದರೆ ಇದನ್ನು ಕೇಳಲು ತಾಲೂಕಿನ ಯಾವೊಬ್ಬ ಅಧಿಕಾರಿಗಳು ಕೂಡ ಹಾಜರಿರಲಿಲ್ಲ ಇದು ವಿಶೇಷವಾಗಿ ಕಂಡುಬಂತು.

ಸಭೆಯಲ್ಲಿ ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ್ ಜಾನಿಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪೂರ, ಮುಖಂಡರಾದ ಜಯಂತ ಕುಲಕರ್ಣಿ, ರವಿ ಕುಲಕರ್ಣಿ, ನರಹರಿ ಕುಲಕರ್ಣಿ, ಸಂಜೀವ ಜಾನಿಬ್, ಸಂಜೀವ್ ಕೋಡದೂರ, ವೆಂಕಟೇಶ್ ಕುಲಕರ್ಣಿ, ಸುಧಾಕರ್ ರಾವ್ ಹಣಿಕೇರಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾಯ ದೊರಿ, ಮುಖಂಡರಾದ ರಾಮಕೃಷ್ಣ ಜಮಾದಾರ್, ‌ಸುಭಾಶ್ಚಂದ್ರ, ರಾಜು ದೊರೆ, ಭಾಗು ದೊರೆ, ಜಗು ಮಾಲಗತ್ತಿ, ಮಹಾಂತೇಶ ಲಾಡ್ಲಾಪೂರ, ಸಿದ್ದು ಅವರಾದ, ಸಾಬಣ್ಣ ಲಾಡ್ಲಾಪೂರ, ಮೌನೇಶ್ ಲಾಡ್ಲಾಪೂರ, ಸಾಬಣ್ಣ ಚಾಮನೂರು, ಭೀಮು ದಿಗ್ಗಾಂವ, ಮೌನೇಶ್ವರ ದಿಗ್ಗಾಂವ,  ನಾಗರಾಜ ರೆಡ್ಡಿ, ಟಿಪಿಒ ಶಿವಶರಣಪ್ಪ ಮಂಠಾಳೆ, ಎಡಿಎಲ್ಆರ್ ಪ್ರಸನ್ನ ದೇಶಪಾಂಡೆ, ಲೋಹಿತ್ ಕಟ್ಟಿಮನಿ, ಆರ್.ಐ ಸುನೀಲ್ ಯನಗುಂಟಿಕರ್ ವಿಠಲ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!