ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಚುನಾವಣೆ: ಸಂಗಣ್ಣಗೌಡ ಮಲ್ಯದ್ ಪೇನಲ್ ನಿಂದ ಭರ್ಜರಿ ಪ್ರಚಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿತ್ತಾಪುರ ತಾಲೂಕು ಶಾಖೆಗೆ 2024-29 ನೇ ಸಾಲಿನ ಅವಧಿಗಾಗಿ ಅ.28 ರಂದು ನಡೆಯಲಿರುವ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಪ್ರಾಥಮಿಕ ವಿಭಾಗದಿಂದ ಇಂಗಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಗಣ್ಣಗೌಡ ಮಲ್ಯದ್ ನೇತೃತ್ವದ ಪ್ರಜಾಸತ್ತಾತ್ಮಕ ಕ್ರಿಯಾಶೀಲ ಶಿಕ್ಷಕರ ಪೇನಲ್ ನಿಂದ ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆದಿದೆ.
ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಭದ್ರಪ್ಪ ಗುರುಮಠಕಲ್, ಎಲ್.ಪಿ.ಎಸ್ ಹಿರೇಮಣಿ ತಾಂಡಾದ ಶಿಕ್ಷಕ ಮಹಾಂತೇಶ್ ಪ್ರಸನ್ನ, ಜಿಎಲ್.ಪಿಎಸ್ ಮೊಳಿ ತಾಂಡಾದ ಶಿಕ್ಷಕಿ ಸುಮಂಗಲಾ ಜಾಧವ, ಜಿಎಚ್.ಪಿಎಸ್ ಉರ್ದು ವಾಡಿ ಶಾಲೆಯ ಶಿಕ್ಷಕಿ ಅಪ್ಸರಾಬೇಗಂ ಶೇಖ್ ಅವರು ತಮ್ಮ ಬೆಂಬಲಿಗ ಶಿಕ್ಷಕರೊಂದಿಗೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿಜಯಕುಮಾರ ಬಂಕಲಗಿ, ದೇವಪ್ಪ ನಂದೂರಕರ್, ಹಾಜಿಸಾಬ ಮುಲ್ಲಾ, ವೀರಸಸಂಗಪ್ಪ ಸುಲೇಗಾಂವ, ಜಗನಾಥ ಬಡಿಗೇರ, ಗುರುಲಿಂಗಪ್ಪ ದೊಡ್ಡಮನಿ, ಸುರೇಶ ಓಂಕರ್, ಬಸಪ್ಪ ಮುಗುಳಖೋಡ, ವೆಂಕಟೇಶ್ ದೇಸಾಯಿ, ಪವನ ಸೇರಿದಂತೆ ಇತರ ಶಿಕ್ಷಕ ಮತದಾರರು ಪ್ರಚಾರ ಕಾರ್ಯಕ್ಕೆ ಸಾತ್ ನೀಡಿದ್ದಾರೆ.
ಮೊಗಲಾ, ಇಟಗಾ, ದಿಗ್ಗಾಂವ, ಹಲಕರ್ಟಿ, ಲಾಡ್ಲಾಪುರ, ಕುಂಬಾರಹಳ್ಳಿ, ನಾಲವಾರ, ಕೊಲ್ಲೂರ, ಸನ್ನತ್ತಿ, ಕನಗನಹಳ್ಳಿ, ಕೊಂಚುರ, ಬಳವಡಗಿ, ಮೊಗಲಾ ತಾಂಡಾ 1,2, ಮತ್ತು ಚಿತ್ತಾಪುರ ಪಟ್ಟಣದ ಪೂರ್ವ ಮತ್ತು ಪಶ್ಚಿಮ ವಲಯದ ಎಲ್ಲಾ ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೋಗಿ ಪ್ರಚಾರ ಮಾಡಿದ್ದಾರೆ.
ಪ್ರಚಾರದ ಭರಾಟೆ ನೋಡಿದರೆ ಬಸವರಾಜ ಬಳೂಂಡಗಿ ಹಾಗೂ ಸಂಗಣ್ಣಗೌಡ ಮಲ್ಯದ್ ಅವರು ಪೇನಲ್ ಗಳ ನಡುವೆ ತೀವ್ರ ಪೈಪೋಟಿ ಮತ್ತು ಜಿದ್ದಾಜಿದ್ದಿ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿಕ್ಷಕ ಮತದಾರರು ಯಾವ ಪೇನಲ್ ಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದು ಕಾದುನೋಡಬೇಕಿದೆ.