Oplus_0

ಚಿತ್ತಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆ | ತೀವ್ರ ಚರ್ಚೆಗೆ ಗ್ರಾಸವಾದ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕಾರಣ

ನಾಗಾವಿ ಎಕ್ಸಪ್ರೆಸ್ ವಿಶೇಷ ವರದಿ 

ಚಿತ್ತಾಪುರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ. ಚಿತ್ತಾಪುರ ಇದರ ಆಡಳಿತ ಮಂಡಳಿಗೆ ಐದು ವರ್ಷಗಳ ಅವಧಿಗೆ ಮಾ.8 ರಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 12 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ನೂತನ ನಿರ್ದೇಶಕರು: 

ಈರಯ್ಯಾ ರೇವಣಸಿದ್ದಯ್ಯಾ ಬೆಣ್ಣೂರ ಬಿ, ಅವರ್ಗ (ಪೇಠಶಿರೂರ), ಭೀಮಾಶಂಕರ ಗುರಣ್ಣ ಅವರ್ಗ (ನಾಲವಾರ), ಅಬ್ದುಲ್ ರಶೀದ್ ಹಸನಸಾಬ್ ಯಾದಗೀರ ಅವರ್ಗ (ದಂಡೋತಿ), ದೇವಿಂದ್ರ ಮೈಲಾರಿ ಅವರ್ಗ (ಭಾಗೋಡಿ), ಶ್ರೀನಿವಾಸ ರಾಘವೇಂದ್ರ ಅವರ್ಗ (ಕೊಡದೂರ), ರಾಚಪ್ಪಾ ನಿಂಗಪ್ಪ ಬ-ವರ್ಗದ ಸಾಮಾನ್ಯ (ಚಿತ್ತಾಪುರ), ವಿಜಯಕುಮಾರ ರೇವಣಸಿದ್ದಪ್ಪ ಬ-ವರ್ಗದ ಸಾಮಾನ್ಯ (ತೆಂಗಳಿ), ಗೌರಮ್ಮ ಮಲ್ಲಿನಾಥ ಬ-ವರ್ಗದ ಮಹಿಳಾ ಮೀಸಲು (ಕಮರವಾಡಿ), ಸುನಿತಾ ಅಶೋಕ ವಗ್ಗರ ಬ-ವರ್ಗದ ಮಹಿಳಾ ಮೀಸಲು (ರಾವೂರ), ಮಹೇಶ ಸಾಬಣ್ಣ ಧರಿ ಬ-ವರ್ಗದ ಹಿಂ.ವರ್ಗ-ಆ ಮೀಸಲು (ಭಂಕೂರ), ಅಂಬರೀಷ ಚಂದ್ರಶೇಖರ ಸುಲೇಗಾಂವ ಬ-ವರ್ಗದ ಹಿಂ. ವರ್ಗ-ಬ ಮೀಸಲು (ಚಿತ್ತಾಪುರ), ಅಶೋಕ ಭೀಮಯ್ಯ ಹರನಾಳ ಬ-ವರ್ಗದ ಪ.ಜಾತಿ ಮೀಸಲು (ವಾಡಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಉಳಿದಂತೆ ಬ-ವರ್ಗದ ಪ.ಪಂಗಡ ಮೀಸಲು ಸ್ಥಾನ ಖಾಲಿಯಿದೆ ಎಂದು ತಿಳಿಸಿದ್ದಾರೆ.

ಮಾ.13 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ: 

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ.ಚಿತ್ತಾಪುರ ಇದರ ಐದು ವರ್ಷದ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ಮಾ.13 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಅಭ್ಯರ್ಥಿಗಳಿಂದ ನಾಮಪತ್ರಗಳ ಸಲ್ಲಿಸುವುದು ಬೆಳಗ್ಗೆ 10 ರಿಂದ 12 ಗಂಟೆವರೆಗೆ, ಆಡಳಿತ ಮಂಡಳಿಯ ಸಭೆ ಹಾಗೂ ನಾಮಪತ್ರಗಳ ಪರಿಶೀಲನೆ ಮಧ್ಯಾಹ್ನ 1 ಗಂಟೆಗೆ, ಕ್ರಮಬದ್ಧವಾದ ಅಭ್ಯರ್ಥಿಗಳ ನಾಮಪತ್ರಗಳು ಹಾಗೂ ತಿರಸ್ಕೃತ ಅಭ್ಯರ್ಥಿಗಳ ನಾಮಪತ್ರಗಳ ಪಟ್ಟಿ ಪ್ರಕಟಣೆ ನಾಮಪತ್ರಗಳ ಪರಿಶೀಲನೆ ನಂತರ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ನಾಮಪತ್ರಗಳನ್ನು ಹಿಂತೆಗೆದುಕೋಳ್ಳುವದು, ಕ್ರಮಬದ್ಧವಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ನಂತರ 30 ನಿಮಿಷಗಳ ಕಾಲ, ನಾಮಪತ್ರಗಳ ವಾಪಸ್ ಪಡೆದ ಅಭ್ಯರ್ಥಿಗಳ ಹೆಸರು ಹಾಗೂ ಸ್ಪರ್ದಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಣೆ, ನಾಮಪತ್ರಗಳ ವಾಪಸ್ ಪಡೆದ ನೀಡಿದ ಅವಧಿಯ ನಂತರ, ಮತದಾನ (ಅವಶ್ಯಕವಿದ್ದಲ್ಲಿ) ಮಧ್ಯಾಹ್ನ 2 ರಿಂದ 3 ಗಂಟೆವರೆಗೆ, ಮತ ಎಣಿಕೆ ಫಲಿತಾಂಶ ಘೋಷಣೆ, ಮತದಾನದ ನಂತರ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚಿತ್ತಾಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕಾರಣ: 

ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಭದ್ದ ವೈರಿಗಳಾಗಿರುವಾಗ ಅದರಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ನಡುವೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಬ್ರೇಕ್ ಹಾಕಿ ಅವಿರೋಧ ಆಯ್ಕೆಗೆ ಎರಡು ಪಕ್ಷಗಳ ಮುಖಂಡರು ಒಳ ಒಪ್ಪಂದ ಮಾಡಿಕೊಂಡಿರುವ ರಹಸ್ಯ ಗುಪ್ತವಾಗಿ ಉಳಿಯದೇ ಬಹಿರಂಗ ಆಗಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ. ಈ ಚುನಾವಣೆಯನ್ನು ನೋಡಿ ತಾಲೂಕಿನ ಜನತೆಗೆ ಅಚ್ಚರಿ ಮೂಡಿಸಿದೆ.

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ.ಚಿತ್ತಾಪುರ ಇದರ ಐದು ವರ್ಷದ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಾ.13 ರಂದು ನಡೆಯಲಿದ್ದು, ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪಾಲಾಗುತ್ತಿದೆಯೇ ಅಥವಾ ಬಿಜೆಪಿ ಪಾಲಾಗುತ್ತದೆಯೇ ಎಂಬುದು ತೀವ್ರ ಕುತೂಹಲ ಉಂಟುಮಾಡಿದೆ.

ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಟೀಕಾಪ್ರಹಾರ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕೆಲ ಮುಖಂಡರು ಬಿಜೆಪಿ ಮುಖಂಡರ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ಥಾನ ಹಂಚಿಕೆ ಮಾಡಿರುವ ವಿಷಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರದೆ ತಮ್ಮ ಹಂತದಲ್ಲಿಯೇ ಒಳ ಒಪ್ಪಂದ ಮಾಡಿಕೊಂಡಿರುವುದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಚಿವರಿಗೂ ಮುಜುಗರ ಉಂಟು ಮಾಡಿದೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಾನ ಹೊಂದಾಣಿಕೆ ಆದರೂ 12 ನಿರ್ದೇಶಕ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಸ್ಥಾನದಲ್ಲಿದ್ದಾರೆ ಹೀಗಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಅಧಿಕಾರದ ಹುದ್ದೆಗೆ ಬಿಜೆಪಿ ಏರಲಿದೆ ಎಂದು ಹೇಳಲಾಗಿದೆ. ಯಾವುದಕ್ಕೂ ಕಾದು ನೋಡಬೇಕಿದೆ.

Spread the love

Leave a Reply

Your email address will not be published. Required fields are marked *

You missed

error: Content is protected !!