ಚಿತ್ತಾಪುರದಲ್ಲಿ ನಾಳೆ ರೂ.1085 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭಕ್ಕೆ ಬರುವ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ: ಡಿವೈಎಸ್ಪಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ರೂ.1085 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಲೋಕಾರ್ಪಣೆ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವುಕುಮಾರ್ ಅವರು ಆಗಮಿಸುತ್ತಿರುವ ಪ್ರಯುಕ್ತ, ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸ್ಥಳಗಳನ್ನು ಗುರುತಿಸಿ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.
ಒಂಟಿ ಕಮಾನ ಮಾರ್ಗವಾಗಿ ಕಾರ್ಯಾಕ್ರಮಕ್ಕೆ ಈ ಭಾಗದ ಹಳ್ಳಿಗಳಿಂದ ಬರುವ ಎಲ್ಲಾ ವಾಹನಗಳಿಗೆ ಎಪಿಎಂಸಿ ಆವರಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ರಾವೂರ-ನಾಲವಾರ-ಶಹಾಬಾದ ಮಾರ್ಗವಾಗಿ ಕಾರ್ಯಾಕ್ರಮಕ್ಕೆ ಈ ಭಾಗದ ಹಳ್ಳಿಗಳಿಂದ ಬರುವ ವಾಹನಗಳಿಗೆ ಬಾಪುರಾವ ಕಲ್ಯಾಣ ಮಂಟಪದ ಹಿಂದುಗಡೆ ಇರುವ ಟಿಎಮ್ ಟ್ರಾನ್ಸಪೋರ್ಟ ಮತ್ತು ಸರಸ್ವತಿ ಆಂಗ್ಲ ಮಾದ್ಯಮ ಶಾಲೆಯ ಆವರಣದಲ್ಲಿ ನಿಲುಗಡೆ ಸ್ಥಳಾವಕಾಶ ಮಾಡಲಾಗಿದೆ.
ಗುಂಡಗುರ್ತಿ-ದಂಡೋತಿ-ಟೆಂಗಳಿ ಮಾರ್ಗವಾಗಿ ಕಾರ್ಯಾಕ್ರಮಕ್ಕೆ ಈ ಭಾಗದ ಹಳ್ಳಿಗಳಿಂದ ಬರುವ ವಾಹನಗಳಿಗೆ ಐಬಿ ಗೋಪಾಲ ರೆಸ್ಟೋರೆಂಟ ಮುಂದುಗಡೆ ಇರುವ ಆಸೀಫ್ ಮೇಡಿಕಲ್ ರವರ ಲೇಔಟನಲ್ಲಿ ನಿಲುಗಡೆ ಸ್ಥಳಾವಕಾಶ ಮಾಡಲಾಗಿದೆ.
ಸಾರ್ವಜನಿಕರು ಯಾವುದೆ ಕಾರಣಕ್ಕೂ ರಸ್ತೆಯ ಬದಿಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸದೇ ಸುಗಮ ಸಂಚಾರಕ್ಕೆ ಸಹಕಾರ ನೀಡಬೇಕು.
ಗಣ್ಯ ವ್ಯಕ್ತಿಗಳು ಬರುವ ಮಾರ್ಗದಲ್ಲಿ ಅವರ ಸಂಚಾರಕ್ಕೆ ಅಡತಡೆಯಾಗದಂತೆ ತಮ್ಮ ವಾಹನಗಳನ್ನು ಚಲಾಯಿಸಬಾರದು. ಕಾರ್ಯಾಕ್ರಮಕ್ಕೆ ಬರುವ ಸಾರ್ವಜನಿಕರು ಬೆಳಗ್ಗೆ 11.30 ಗಂಟೆಯೊಳಗಾಗಿ ಕಾರ್ಯಕ್ರಮದ ಸ್ಥಳ ತಲುಪಬೇಗಾಗಿ ವಿನಂತಿ.
ಎಲ್ಲಾ ಸಾರ್ವಜನಿಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೊಲೀಸ್ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

