Oplus_0

ಚಿತ್ತಾಪುರದಲ್ಲಿ ಹಣಕಾಸು, ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಅಪರಾಧ ಶಿಬಿರ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಬಾರ್ಡ್ ಎಫ್ಐಎಫ್ ಮತ್ತು ಕೆನರಾ ಬ್ಯಾಂಕ್ ಅಡಿಯಲ್ಲಿ ಹಣಕಾಸು, ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಅಪರಾಧ ಶಿಬಿರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎಜಿಎಂ ಜಗದೀಶ್ ಪ್ರಸಾದ್, ಸಿಡಿಪಿಒ ಆರತಿ ತುಪ್ಪದ್, ತಾಪಂ ಎಡಿ ಪಂಡಿತ್ ಶಿಂಧೆ, ಪುರಸಭೆ ಅಧಿಕಾರಿ ವಿಠಲ್, ಕೆನರಾ ಬ್ಯಾಂಕ ಮುಖ್ಯ ವ್ಯವಸ್ಥಾಪಕ ಅಂಜಲಿ, ಎಎಸ್ಐ ಬಾಬುರಾವ್, ಎಫ್ಎಲ್ಸಿಎ ಕೌನ್ಸಲರ್ ರೇಖಾ ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ವ್ಯವಸ್ಥಾಪಕಿ ಅಂಜಲಿ ಮಾತನಾಡಿ, ಸಾಲ ಸೌಲಭ್ಯಗಳ ಹಾಗೂ ಬ್ಯಾಂಕ್ ಖಾತೆಗಳ ಬಗ್ಗೆ ವಿವರಿಸಿದರು. ರೇಖಾ ಅವರ ಕಠಿಣ ಮತ್ತು ಉತ್ತಮ ಕಾರ್ಯಕ್ಷಮತೆ ಬಗ್ಗೆ ಅಭಿನಂದಿಸಿದರು.

ಎಎಸ್ಐ ಬಾಬುರಾವ್ ಸೈಬರ್ ಅಪರಾಧದ ಬಗ್ಗೆ ವಿವರಿಸಿದರು. ರೇಖಾ ಅವರು ಪಿಎಂಎಸ್ಬಿವೈ, ಪಿಎಂಜೆಜೆಬಿವೈ, ಎಪಿವೈ, ಪಿಎಂಜೆಡಿವೈ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!