ಪರಿವರ್ತನಾ ಜಲಾಯನ ಕಾರ್ಯಕ್ರಮ | ಗ್ರಾಮದ ರೈತರು ಸದುಪಯೋಗ ಮಾಡಿಕೊಳ್ಳಲು ಸಿಇಓ ಭಂವರಸಿಂಗ್ ಮೀನಾ ಕರೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ಕಂದಗೋಳ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ WORT ಸಂಸ್ಥೆಯ ಹೆಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನಾ ಜಲಾಯನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಓ ಭಂವರಸಿಂಗ್ ಮೀನಾ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಡಬ್ಲ್ಯೂ ಆರ್ ಟಿ ಸಂಸ್ಥೆ 10 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಸಂತೋಷದ ವಿಷಯ ಈ ಗ್ರಾಮಗಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಪ್ರದೇಶ ಗುಡ್ಡಗಾಡ ಆಗಿರುವುದರಿಂದ ಮಳೆ ಬಂದಾಗ ಹರಿದು ಹೋಗುವ ನೀರು, ತಡೆಯುವ ಹಾಗೆ, ಮತ್ತು ನಡೆದು ಹೋಗುವ ನೀರು ನಿಲ್ಲುವ ಹಾಗೆ, ಮತ್ತು ನಿಂತ ನೀರು ಇಂಗುವ ಹಾಗೆ, ಇಂಗಿದ ನೀರು ಬಾವಿ ಮತ್ತು ಕೊಳವೆ ಬಾಯಿಂದ ತೆಗೆದುಕೊಂಡು ಪರಿವರ್ತನೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೊಣಗಿ, ಕಂದಗೋಳ ಗ್ರಾಮ ಪಂಚಾಯತ ಅಧ್ಯಕ್ಷೆ ಮಂಜುಳಾ ಸಿಂಗೆ, ಆಣಕಲ್ ಪಂಚಾಯತ್ ಅಧ್ಯಕ್ಷೆ ನಾಗವೇಣಿ ರಾಠೋಡ,
ಕೆವಿಕೆ ಅಧಿಕಾರಿ ರಾಜೇಂದ್ರ, ತಾಲೂಕ ಪಂಚಾಯತ್ ಇಒ ಬಸಲಿಂಗಪ್ಪ ಡಿಗ್ಗಿ, ತಾಲೂಕ ಕೃಷಿ ಅಧಿಕಾರಿ ಸಂಜುಕುಮಾರ, ವಿಕಾಸ್ ಪಟೇದಾರ್, ಚೇತನ್ ಪಾಟೀಲ್, ಮತ್ತು ಪಂಚಾಯತ ಅಧಿಕಾರಿಗಳು, ರೈತ ಮುಖಂಡರು ರೇವಣಸಿದ್ಧಪ್ಪ, ಸಾತ್ನೂರ, ಮಂಜು ಪಾಟೀಲ್, ಗುರು ಬೋಧನ್, ಸಿದ್ದನಗೌಡ, ಸಿದ್ದು ಪಾಟೀಲ್, ಚಂದ್ರಕಾಂತ ಸಿಂಗೆ, ಮಲ್ಲು ವಟುವಟಿ, ರಾಜು ದೊಡ್ಡ ಮನಿ, ಶಿವಾನಂದ್ ಗೌಡಪ್ಪನವರ, ಮತ್ತು ಆಯ್ಕೆಯಾದ 10 ಗ್ರಾಮಗಳಾದ ಕಂದಗೂಳ, ವಟವಟಿ, ರೇವಾಯಿ , ಬೇಡಸೂರ್, ಮುಕ್ರಂಬಾ, ಗೊಣಗಿ, ದುತ್ತರ್ಗಾ, ಪಂಗರಗಾ, ಮಾವಿನಸುರ, ಅರಣಕಲ್, ಗ್ರಾಮದ ಸುಮಾರು 400ಕ್ಕೂ ಹೆಚ್ಚು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.

