ಜು.10 ರಂದು ಚಿತ್ತಾಪುರದಲ್ಲಿ ಗುರುವಂದನಾ ಕಾರ್ಯಕ್ರಮ, ಜು.17 ರಂದು ದಿಗ್ಗಾಂವದಲ್ಲಿ ಲಿಂ.ನಾಗಭೂಷಣ ಶಿವಾಚಾರ್ಯರ 41 ನೇಯ ಪುಣ್ಯಾರಾಧನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಪಂಚಗೃಹ ಹಿರೇಮಠ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಸಿದ್ದೇಶ್ವರ ಕೋಲಮಠ (ಕಡ್ಲಿ ಬಸವಣ್ಣ)ಯಲ್ಲಿ 15 ನೇ ಅನುಷ್ಠಾನ ಸವಿಕಲ್ಪ (ನಿರ್ವಿಕಲ್ಪ) ಅನುಷ್ಠಾನ ಜರುಗಿ ಕಲ್ಯಾಣ ಕರ್ನಾಟಕದಲ್ಲಿಯೆ ಹೆಸರುವಾಸಿಯಾಗಿತ್ತು ಅಲ್ಲಿಂದ ಇಲ್ಲಿಯ ವರೆಗೂ ಚಿತ್ತಾಪುರ ಪಟ್ಟಣದ ಸದ್ಭಕ್ತರು ಹಾಗೂ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘದವರು ತಮ್ಮ ಇಚ್ಛೆಯ ಮೇರೆಗೆ ಪ್ರತಿ ವರ್ಷ ಕಡ್ಲಿಗಾರ ಹುಣ್ಣಿಮೆಗೆ ಗುರುವಂದನಾ ಕಾರ್ಯಕ್ರಮ ಮಾಡುತ್ತಾ ಬಂದಿರುತ್ತಾರೆ. ಅದೆ ರೀತಿಯಾಗಿ ಈ ವರ್ಷವು ಇದೇ ಜುಲೈ 10 ರಂದು ಕಡ್ಲಿಗಾರ ಹುಣ್ಣಿಮೆಯಂದು ಬೆಳಿಗ್ಗೆ ಶ್ರೀ ಸಿದ್ದೇಶ್ವರ ಕೋಟಿಮಠ ಸುಕ್ಷೇತ್ರ ನಾಗಾವಿ ಹಾಗೂ ಶ್ರೀ ಸಿದ್ದವೀರೇಶ್ವರ ಪೆದ್ದುಮಠ ಚಿತ್ತಾಪುರದಲ್ಲಿ ಕರ್ತೃ ಶಿವಲಿಂಗಕ್ಕೆ ರುದ್ರಾಭಿಷೇಕ, ಪೂಜೆ ಬಿಲ್ವಾರ್ಚನೆ ನಂತರ ಶ್ರೀ ಸಿದ್ದವೀರ ಶ್ರೀಗಳಿಗೆ ಗುರುಪಾದ ಪೂಜೆ ಗೌರವ ಅರ್ಪಣೆ ಮತ್ತು ಹಲವಾರು ಕಲಾಕಾರರಿಗೆ ಹಾಗೂ ಸದ್ಭಕ್ತರಿಗೆ ಗುರುರಕ್ಷೆ ಆಶೀರ್ವಾದ ನಂತರ ಗುರುವಂದನಾ ಕಾರ್ಯಕ್ರಮ ಮಹಾಮಂಗಲಗೊಳ್ಳುವುದು. ಮಧ್ಯಾಹ್ನ 12 ರಿಂದ ಸರ್ವ ಭಕ್ತವೃಂದಕ್ಕೆ ಪ್ರಸಾದ ಜರುಗುವುದು. ಈ ಕಾರ್ಯಕ್ರಮಕ್ಕೆ ನಾಗಾವಿ ನಾಡಿನ, ನೃಪತುಂಗ ನಾಡಿನ, ಕಲ್ಯಾಣ ನಾಡಿನ ಸಮಸ್ತ ಸದ್ಭಕ್ತರು ಭಾಗವಹಿಸಬೇಕು ಎಂದು ಶ್ರೀಮಠದ ವಕ್ತಾರ ಶರಣು ಉಡುಗಿ ಕೋರಿದ್ದಾರೆ.
ದಿಗ್ಗಾಂವದಲ್ಲಿ ಜುಲೈ 17 ರಂದು ಜ್ಯೋತಿಷ್ಯ ಚಕ್ರವರ್ತಿ ವಾಕ್ಯಸಿದ್ಧಿ ಪುರುಷ ಲಿಂ. ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಸುಕ್ಷೇತ್ರ ಪಂಚಗೃಹ ಹಿರೇಮಠ ದಿಗ್ಗಾಂವ ಗುರುಗಳ 41 ನೇಯ ಪುಣ್ಯಾರಾಧನೆ ಪ್ರಯುಕ್ತ ಶಿವಭಜನೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಸದ್ಭಕ್ತರು ಭಾಗವಹಿಸಬೇಕಾಗಿ ಮನವಿ ಮಾಡಿದ್ದಾರೆ.
ಪ್ರವಚನಕಾರರು ವೇದಮೂರ್ತಿ ಜಗದೀಶ ಶಾಸ್ತ್ರಿಗಳು ಸನ್ನತಿ, ಸಂಗೀತ ವೇದಮೂರ್ತಿ ಸಂಗಯ್ಯಸ್ವಾಮಿ ಸ್ಥಾವರಮಠ ಹೋನಗುಂಟಿ, ತಬಲಾ ವೇದಮೂರ್ತಿ ಶರಣಯ್ಯಸ್ವಾಮಿ ಮಠಪತಿ ಕಲ್ಲಂಭ ಅವರು ಸೇವೆ ಸಲ್ಲಿಸಲಿದ್ದಾರೆ.

