ಕೊಲ್ಲಾಪುರ ಮಹಾಲಕ್ಷ್ಮೀ ದೇವಿಯ 11ನೇ ವರ್ಷದ ದರ್ಶನಾಶೀರ್ವಾದ, ಕರಬಸಯ್ಯ ಶಾಸ್ತ್ರಿ ಅವರಿಗೆ ಭಕ್ತರ ಬೆಳಕು ಪ್ರಶಸ್ತಿ ಪ್ರಧಾನ | ಹರಕೆ ಈಡೇರಿದಾಗ ಸಲ್ಲಿಸುವ ಸೇವೆಯೇ ತುಲಾಭಾರ: ಶಿವಶಂಕರ ಶಿವಾಚಾರ್ಯರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವ್ಯಕ್ತಿ ಇಟ್ಟುಕೊಂಡ ಹರಕೆ ಈಡೇರಿದಾಗ ಸಲ್ಲಿಸುವ ಸೇವೆಯೇ ತುಲಾಭಾರ ಸೇವೆ ಎಂದು ಸೇಡಂ-ಚಿತ್ತಾಪುರ ಶಿವಶಂಕರ ಮಠದ ಶ್ರೀ ಶಿವಶಂಕರ್ ಶಿವಾಚಾರ್ಯರು ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ವೇದಮೂರ್ತಿ ಕರಬಸಯ್ಯ ಶಾಸ್ತ್ರಿ ಸಂಕಲ್ಪದ ಮೇರೆಗೆ ಹಮ್ಮಿಕೊಂಡಿದ್ದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ 11ನೇ ವರ್ಷದ ದರ್ಶನ ಮತ್ತು ಆಶೀರ್ವಾದ ಶ್ರೀ ಲಕ್ಷ್ಮಿ ಸಹಿತ 201 ಭಕ್ತರಿಂದ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಲಾಭಾರ ಆಚರಣೆಯನ್ನು ಹರಕೆಯ ಆಧಾರದ ಮೇಲೆ ನಡೆಸಲಾಗುತ್ತದೆ. ಹರಕೆ ಕಟ್ಟಿಕೊಂಡ ವ್ಯಕ್ತಿಯ ಇಚ್ಛೆಗಳು ಪೂರೈಸಿದಾಗ ಅಥವಾ ಅವನ ಸಮಸ್ಯೆಗಳು ದೂರದಾಗ ಹರಕೆ ಕಟ್ಟಿಕೊಂಡಂತೆ ತುಲಾಭಾರವನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಚಿತ್ತಾಪುರದಲ್ಲಿ ಧಾರ್ಮಿಕ ಕೈಂಕರ್ಯಗಳು ಕೈಗೊಳ್ಳುತ್ತಿರುವ ಕರಬಸಯ್ಯ ಶಾಸ್ತ್ರಿ ಸೇವೆ ಅಮೋಘವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸೇಡಂ-ಚಿತ್ತಾಪುರ ಶಿವಶಂಕರ ಮಠದ ಶ್ರೀ ಶಿವಶಂಕರ್ ಶಿವಾಚಾರ್ಯರರಿಗೆ ಕರಬಸಯ್ಯ ಶಾಸ್ತ್ರಿ ಕುಟುಂಬದಿಂದ ನಾಣ್ಯಗಳಿಂದ ತುಲಾಭಾರ ಸೇವೆ ಮಾಡಲಾಯಿತು.
ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಶ್ರೀನಿವಾಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದ ಶ್ರೀ ಅಪ್ಪರಾವ ದೇವಿ ಮುತ್ಯಾ, ದಂಡೋತಿ ಶ್ರೀ ಬಾಲ ಯೋಗಿನಿ ಜಯಶ್ರೀ ಮಾತಾಜಿ, ವೇದಮೂರ್ತಿ ಶಿವಶರಣಯ್ಯ ಸ್ವಾಮಿ ಪುರದಯ್ಯನಮಠ, ರಾಜಶೇಖರ್ ಕಲಶೆಟ್ಟಿ, ಕರಣಯ್ಯ ಶಾಸ್ತ್ರಿ, ವೀರೇಶ್ ಮಲಕೂಡ, ಶಿವಕುಮಾರ್ ಹಿರೇಮಠ್ ಸೇಡಂ ವೇದಿಕೆಯಲ್ಲಿದ್ದರು.
ಕರಬಸಯ್ಯ ಶಾಸ್ತ್ರಿ ಅವರಿಗೆ ಚಿತ್ತಾಪುರ ಉಭಯ ಶ್ರೀಗಳಿಂದ ಭಕ್ತರ ಬೆಳಕು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 201 ದಂಪತಿಗಳಿಂದ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದಯ್ಯ ಹಿರೇಮಠ, ನಾಗರಾಜ್ ರೇಷ್ಮಿ, ನಾಗರೆಡ್ಡಿ ಗೋಪಸೇನ್, ಮಹಂತಗೌಡ ಪಾಟೀಲ್ ಭಾಗೋಡಿ, ನಾಗರಾಜ್ ಹೂಗಾರ, ಶರಣಬಸಪ್ಪ ಬೊಮ್ನನಳ್ಳಿ, ಅಂಬರೀಷ್ ಸುಲೇಗಾಂವ, ಕೋಟೇಶ್ವರ ರೇಷ್ಮಿ, ಬಸವರಾಜ ಸಂಕನೂರ, ಶರಣು ಪತ್ರಿ ಸೇರಿದಂತೆ ಇತರರು ಇದ್ದರು. ಶಿವುಕುಮಾರ ಹಿರೇಮಠ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು, ಮಮತಾ ಶಾಸ್ತ್ರಿ ವಂದಿಸಿದರು.

