Oplus_0

ಜ.15 ರಂದು ಹಿರೇಸಾವಳಗಿ ಶಿವಲಿಂಗೇಶ್ವರ ಮಕರ ಸಂಕ್ರಮಣ ಪಾದಯಾತ್ರೆ, ಜಾತ್ರಾ ಮಹೋತ್ಸವ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ತಾಲೂಕಿನ ಹಿರೇಸಾವಳಗಿ ಮೂಲ ಕರ್ತೃ ಮಹಾ ಮಹಿಮಾಶಾಲಿಗಳಾದ ಶ್ರೀ ಜಗದ್ಗುರು ಶಿವಲಿಂಗೇಶ್ವರ ಮಕರ ಸಂಕ್ರಮಣ ಪಾದಯಾತ್ರೆ ಜಾತ್ರಾ ಮಹೋತ್ಸವ ಜನವರಿ 15 ಮತ್ತು 16 ರಂದು ಶ್ರೀ ಗುರುನಾಥ ಮಹಾಸ್ವಾಮಿಗಳವರ ಘನ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗುವವು ಎಂದು ಸಮಿತಿಯವರು ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಜಗದ್ಗುರು ಶಿವಲಿಂಗೇಶ್ವರ ಮಕರ ಸಂಕ್ರಮಣ ಪಾದಯಾತ್ರೆ ಜಾತ್ರಾ ಮಹೋತ್ಸವವು 15 ರಂದು ರಾತ್ರಿ 7 ಗಂಟೆಗೆ ಶ್ರೀ ಮಠದಿಂದ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವವು ಭವ್ಯ ಮೆರವಣಿಗೆಯೊಂದಿಗೆ ಸಾಗುತ್ತ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ತಲುಪುವುದು. ರಾತ್ರಿ 8 ಗಂಟೆಗೆ ರೈತರು ಬೆಳೆದ ಜೋಳ (ಸೀತನಿ) ಬೆಳಸಿ ಬಡೆಯುವುದು. ನಂತರ ಅಲ್ಲಿಯೇ ರಾತ್ರಿ ಸಂಗೀತ ಭಜನೆ ಹಾಗೂ ಗೀಗೀ ಪದ ಕಾರ್ಯಕ್ರಮ ಜರುಗುವವು.

ರಾತ್ರಿ 1 ಗಂಟೆಗೆ ಶ್ರೀ ಮಠದಿಂದ ಮಠಾಧೀಶರಾದ ಶ್ರೀ ಮ. ನಿ. ಪ್ರ. ಸ್ವ ಗುರುನಾಥ ಮಹಾಸ್ವಾಮಿಗಳು ಪುರದ ಪ್ರಮುಖ ರಾಜ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಾಗುತ್ತ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ತಲುಪುವರು. ನಂತರ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ದಿ. 16 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮಠಕ್ಕೆ ತಲುಪುವರು. ಕಾರಣ ಎಲ್ಲಾ ಸದ್ಭಕ್ತಾಧಿಗಳು ಭಾಗವಹಿಸಿ ಗುರು-ದರ್ಶನಾಶೀರ್ವಾದ ಪಡೆದು, ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕು ಎಂದು ಕೋರಿದ್ದಾರೆ. ವಿಶೇಷ ಸೂಚನೆ : ಕಲಬುರಗಿ ಸುಪರ್ ಮಾರ್ಕೆಟ್‌ದಿಂದ ವಿಶೇಷ ಬಸ್ಸಿನ ಸೌಕರ್ಯ ಒದಗಿಸಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!