Oplus_0

ಚಿತ್ತಾಪುರದಲ್ಲಿ ಜ.4 ರಂದು ಕೊಲ್ಲಾಪೂರ ಮಹಾಲಕ್ಷ್ಮೀ ದೇವಿಯ 11ನೇ ವರ್ಷದ ದರ್ಶನಾಶೀರ್ವಾದ | ಸೇಡಂ-ಚಿತ್ತಾಪುರ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರ ತುಲಾಭಾರ: ಕರಬಸಯ್ಯ ಶಾಸ್ತ್ರಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಜನವರಿ 4 ರಂದು ಬೆಳಗ್ಗೆ 9.30 ಕ್ಕೆ ಶ್ರೀ ಕೊಲ್ಲಾಪೂರ ಮಹಾಲಕ್ಷ್ಮೀ ದೇವಿಯ11ನೇ ವರ್ಷದ ದರ್ಶನದ ಪ್ರಸಾದ ಮತ್ತು ಆಶೀರ್ವಾದ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಸೇಡಂ-ಚಿತ್ತಾಪುರ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರ ನಾಣ್ಯಗಳಿಂದ ತುಲಾಭಾರ ಹಮ್ಮಿಕೊಳ್ಳಲಾಗಿದೆ ಎಂದು ವೇ. ಮೂ. ಶ್ರೀ ಕರಬಸಯ್ಯ ಶಾಸ್ತ್ರೀಜಿ ತಿಳಿಸಿದ್ದಾರೆ.

ಚಿತ್ತಾಪುರ-ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಪಾವನ ಸಾನಿಧ್ಯ ವಹಿಸುವರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು, ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು ನೇತೃತ್ವ ವಹಿಸುವರು, ಹಲಕರ್ಟಿ ಶ್ರೀ  ಮುನೀಂದ್ರ ಶಿವಾಚಾರ್ಯರ, ರಾವೂರ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಹಲಕರ್ಟಿ ಸಿದ್ದೇಶ್ವರ ಮಠದ ಶ್ರೀ ರಾಜಶೇಖರ ಶಿವಾಚಾರ್ಯರು, ಅಳ್ಳೋಳ್ಳಿ ಶ್ರೀ ಸಂಗಮನಾಥ ದೇವರು, ಮಾಲಗತ್ತಿ ಶ್ರೀ ಚನ್ನಬಸವ ಶರಣರು, ಶ್ರೀನಿವಾಸ ಸರಡಗಿ ಶ್ರೀ ಅಪ್ಪಾರಾವದೇವಿ ಮುತ್ಯಾ, ದಂಡೋತಿ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಋಗ್ವದ ವೈಧಿಕ ಪುರೋಹಿತರ ಟ್ರಸ್ಟ್ ಗೌರವ ಅಧ್ಯಕ್ಷ ಶಿವಶರಣಯ್ಯ ಸ್ವಾಮಿ ಪುರದಯ್ಯನ ಮಠ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಸಿ. ಭಂಕಲಗಿ, ಸಮಾಜ ಸೇವಕ ರಾಜಶೇಖರ ಎಸ್. ಕಲಶೆಟ್ಟಿ, ರಾಜು ಸಂಕನೂರ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವೃತವಾಚಕರಾಗಿ ಗದಗ ಶ್ರೀ ವಿರೇಶ್ವರ ಪುಣ್ಯಾಶ್ರಮದ ವೇ.ಮೂ. ಶ್ರೀ ವೀರೇಶ ಶಾಸ್ತ್ರೀಗಳು ಮಲಕೂಡ, ವೇ.ಮೂ. ವೃಷಬೇಂದ್ರ ಶಾಸ್ತ್ರೀಗಳು ಕಾಚವಾರ, ವೇ.ಮೂ. ಶ್ರೀ ವೀರೇಶ ಶಾಸ್ತ್ರೀಗಳು ಕಂಬದ ಸೇಡಂ ಅವರು ಪೂಜಾ ಕಾರ್ಯ ನೆರವೇರಿಸುವರು ಎಂದು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!