ಚಿತ್ತಾಪುರದಲ್ಲಿ ನಾಳೆ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ರಾಜ್ಯ ಸಮಿತಿ ಸಭೆ, ಭೀಮ ಸಂಕಲ್ಪ ಸಮಾವೇಶ: ನಾಗೇಶ್ ಹಲಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ತಾಲೂಕು ಶಾಖೆ ವತಿಯಿಂದ ನ.26 ರಂದು ಬೆಳಗ್ಗೆ 11.30 ಕ್ಕೆ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ರಾಜ್ಯ ಸಮಿತಿ ಸಭೆ ಮತ್ತು ಭೀಮ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಖಜಾಂಚಿ ನಾಗೇಶ ಹಲಗಿ ತಿಳಿಸಿದ್ದಾರೆ.
ಗೌರವಾಧ್ಯಕ್ಷ ಪೂಜ್ಯ ವರಜ್ಯೋತಿ ಬಂತೆಜೀ ಜಿ.ಬಿ.ಟಿ. ಸುರಪುರ ಸಾನಿಧ್ಯ ವಹಿಸುವರು, ಗೃಹ, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು, ರಾಜ್ಯ ಸಂಚಾಲಕ ಟಿ.ಎಂ. ಮುನಿರಾಜು ಅಧ್ಯಕ್ಷತೆ ವಹಿಸುವರು, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಭಾವಚಿತ್ರಕ್ಕೆ ಪೂಜೆ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಜ್ಯೋತಿ ಬೆಳಗಿಸುವರು, ಮಹಾಗಾಂವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ॥ ಪ್ರೊ. ಕರೀಗೂಳೇಶ್ವರ ವಿಷಯ ಮಂಡನೆ ಮಾಡುವರು ಎಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸ್ಥಾಪಕ ಅಧ್ಯಕ್ಷ ನಾಗಣ್ಣ ಕಲದೇವನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಉದ್ಯಮಿಗಳಾದ ವಿನೋದ ಆರ್. ಗುತ್ತೇದಾರ, ಶಿವರೆಡ್ಡಿ ಪಾಲಪ್, ಅತಿಥಿಗಳಾಗಿ ಪಂಚ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಬೆಣ್ಣೂರಕರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ವಿಜಯಪುರ ಮಹಿಳಾ ಘಟಕ ಜಿಲ್ಲಾ ಸಂಚಾಲಕಿ ಅನುಸುಬಾಯಿ ವಿಮಲ ಮದರಿ, ವಿಶೇಷ ಆಹ್ವಾನಿತರಾಗಿ ಬೆಂಗಳೂರು ನಗರ ಜಿಲ್ಲಾ ಸಂಚಾಲಕ ಬಿ.ವೈ. ಮುರುಗೇಶ ಬೆಂಗಳೂರು, ಕೋಲಾರ ಜಿಲ್ಲಾ ಸಂಚಾಲಕ ವೆಂಕಟೇಶ ಲಕ್ಕೂರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಮೋಹನ ಬಾಬು, ಅವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಸಂಘಟನಾ ಸಂಚಾಲಕ ಕ್ರಾಂತಿ ಗೋವಿಂದ ನಿರೂಪಿಸುವರು, ಜಿಲ್ಲಾ ಸಂಚಾಲಕ ರಮೇಶ ದೊಡ್ಡಮನಿ ಸ್ವಾಗತಿಸುವರು, ರಾಜ್ಯ ಸಂಘಟನಾ ಸಂಚಾಲಕ ಡಾ. ಜಾಫರ್ ಹುಸೇನ್ ಪ್ರಾಸ್ತಾವಿಕವಾಗಿ ಮಾತನಾಡುವರು, ಯಾದಗಿರಿ ಜಿಲ್ಲಾ ಸಂಚಾಲಕ ಮಾನಪ್ಪ ಕಲ್ಲದೇವನಳ್ಳಿ ವಂದಿಸುವರು.

