Oplus_0

ರಾಮತೀರ್ಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟೋಪಕರಣಗಳ ವಿತರಣೆ | ಪೀಪಲ್ ಫಾರ್ ಪೀಪಲ್ ಫೌಂಡೇಶನ್ ಸಮಾಜಮುಖಿ ಕಾರ್ಯ ಶ್ಲಾಘನೀಯ: ಶಂಕರ ವಾಲಿಕರ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಅತ್ಯಾಕರ್ಷಕ ಆಟೋಪಕರಣಗಳನ್ನು ಒದಗಿಸಿರುವ ಪೀಪಲ್ ಫಾರ್ ಪೀಪಲ್ ಫೌಂಡೇಶನ್ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಎಸ್ಡಿಎಂಸಿ ಅಧ್ಯಕ್ಷ ಶಂಕರ ವಾಲಿಕರ್ ಹೇಳಿದರು.

ತಾಲೂಕಿನ ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಆಟೋಟಗಳ ಮೂಲಕ ಸಂತಸದಾಯಕ ಕಲಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಪೀಪಲ್ ಫಾರ್ ಪೀಪಲ್ ಫೌಂಡೇಶನ್ ವತಿಯಿಂದ ಕೊಡಮಾಡಿದ ಜಾರುಬಂಡಿ (ಸ್ಲೈಡ್), ಜೋಕಾಲಿ ಹಾಗೂ ಸ್ಪ್ರಿಂಗ್ ರೈಡರ್ ಕ್ರೀಡಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಸಲಕರಣೆಗಳನ್ನು ಜೋಪಾನವಾಗಿ ಬಳಸಿಕೊಂಡು ಶಾಲಾ ಆವರಣದಲ್ಲಿ ಸಂತಸದಿಂದ ಕಾಲ ಕಳೆಯಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷರಿಗೆ ಸನ್ಮಾನ: ಸಂಸ್ಥೆ ನೀಡಿದ ಆಟೋಪಕರಣಗಳನ್ನು ಶಾಲೆಗೆ ತರಲು ಸುಮಾರು 18 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ಉದಾರತೆ ಮೆರೆದ ಎಸ್‌ಡಿಎಂಸಿ ಅಧ್ಯಕ್ಷ ಶಂಕರ ವಾಲಿಕರ್ ಅವರನ್ನು ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಪ್ಪಯ್ಯ ಹಿರೇಮಠ ಮಾತನಾಡಿ, ಮಕ್ಕಳ ಬಾಲ್ಯವು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಬಾರದು. ಇಂದು ಶಾಲೆಗೆ ದೊರೆತಿರುವ ಜಾರುಬಂಡಿ, ಜೋಕಾಲಿ ಮತ್ತು ಸ್ಪ್ರಿಂಗ್ ಆಟಿಕೆಗಳು ಮಕ್ಕಳನ್ನು ಶಾಲೆಯತ್ತ ಮತ್ತಷ್ಟು ಆಕರ್ಷಿಸುತ್ತವೆ ಹಾಗೂ ಅವರಲ್ಲಿ ಉಲ್ಲಾಸ ಮತ್ತು ಸಂತೋಷವನ್ನು ತುಂಬುತ್ತವೆ ಎಂದು ಅಭಿಪ್ರಾಯಪಟ್ಟರು.

ಜಗನ್ನಾಥ ಬಡಿಗೇರ್ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದಂತೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೂ ಇಂತಹ ಸುಂದರ ಆಟೋಪಕರಣಗಳು ದೊರೆತಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಮುಖದಲ್ಲಿ ನಗು ತರಿಸಲು ಸಂಸ್ಥೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಇವುಗಳನ್ನು ಶಾಲೆಗೆ ತರಲು ವಿಶೇಷ ಶ್ರಮವಹಿಸಿದ ಶಿಕ್ಷಕರಾದ ಶ್ರೀ ಸುರೇಶ ಓಂಕಾರ್ ಅವರ ಕಾಳಜಿ ಮತ್ತು ಪ್ರಯತ್ನ ನಿಜಕ್ಕೂ ಅಭಿನಂದನೀಯ ಎಂದು ಶ್ಲಾಘಿಸಿದರು.

ಸಿದ್ದಣ್ಣ ಅವರು ಮಾತನಾಡಿ, ಶಾಲೆಯಲ್ಲಿ ಜಾರುಬಂಡಿ, ಜೋಕಾಲಿಯಂತಹ ಆಟದ ಸಾಮಗ್ರಿಗಳಿದ್ದರೆ ಮಕ್ಕಳ ಹಾಜರಾತಿ ಹೆಚ್ಚುವುದರ ಜೊತೆಗೆ ಅವರಲ್ಲಿ ಕಲಿಕೆಯ ಆಸಕ್ತಿಯೂ ಇಮ್ಮಡಿಯಾಗುತ್ತದೆ. ಶಾಲೆಯ ಅಭಿವೃದ್ಧಿಗಾಗಿ ಸದಾ ತುಡಿಯುವ ಸುರೇಶ ಸರ್ ಅವರ ಇಂತಹ ಸತ್ಕಾರ್ಯಗಳಿಗೆ ಗ್ರಾಮಸ್ಥರ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರು ಶಿವಾನಂದ ಕೆಂಪಳ್ಳೇರ್ ಅವರು, ನಮ್ಮ ಶಾಲೆಯ ಮಕ್ಕಳಿಗೆ ಜಾರುಬಂಡಿ, ಜೋಕಾಲಿ ಮತ್ತು ಸ್ಪ್ರಿಂಗ್ ರೈಡರ್‌ಗಳಂತಹ ಗುಣಮಟ್ಟದ ಆಟೋಪಕರಣಗಳನ್ನು ನೀಡಿರುವ ಪೀಪಲ್ ಫಾರ್ ಪೀಪಲ್ ಫೌಂಡೇಶನ್ ಸಂಸ್ಥೆಗೆ ಹೃತ್ಪೂರ್ವಕ ಕೃತಜ್ಞತೆಗಳು. ಅಲ್ಲದೇ, ಇವುಗಳನ್ನು ತರಲು ಆರ್ಥಿಕ ಸಹಾಯ ಮಾಡಿದ ಎಸ್‌ಡಿಎಂಸಿ ಅಧ್ಯಕ್ಷ ಶಂಕರ ವಾಲಿಕರ್ ಹಾಗೂ ನಿರಂತರವಾಗಿ ಶ್ರಮಿಸಿದ ಸಹ ಶಿಕ್ಷಕ ಸುರೇಶ ಓಂಕಾರ್ ಅವರ ಕಾರ್ಯ ಶ್ಲಾಘನೀಯ. ಮಕ್ಕಳು ಈ ಆಟೋಪಕರಣಗಳನ್ನು ಸುರಕ್ಷಿತವಾಗಿ, ಸರದಿಯ ಪ್ರಕಾರ ಬಳಸಿಕೊಂಡು ಶಾಲೆಯನ್ನು ಇನ್ನಷ್ಟು ಪ್ರೀತಿಸಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಜುನಾಥ ಕಡ್ಲಿಗುಂಡಿ, ನಾಗನಗೌಡ, ಸಾಬಣ್ಣ ಅವರು ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷರಿಗೆ ಸನ್ಮಾನ: ಸಂಸ್ಥೆ ನೀಡಿದ ಆಟೋಪಕರಣಗಳನ್ನು ಶಾಲೆಗೆ ತರಲು ಸುಮಾರು 18 ಸಾವಿರ ರೂ. ಆರ್ಥಿಕ ನೆರವು ನೀಡಿ ಉದಾರತೆ ಮೆರೆದ ಎಸ್‌ಡಿಎಂಸಿ ಅಧ್ಯಕ್ಷ ಶಂಕರ ವಾಲಿಕರ್ ಅವರನ್ನು ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅತಿಥಿಗಳಾಗಿ ಎಸ್‌ಡಿಎಂಸಿ ಉಪಾಧ್ಯಕ್ಷ ಹುಸೇನ್ ಬಿ ಮಕ್ತುಂಸಾಬ್, ಸದಸ್ಯರಾದ ಶ್ರೀದೇವಿ ಬಸವರಾಜ್, ಶರಣು ಪೂಜಾರಿ, ಅಕ್ಬರ್ ಸಾಬ್, ಹಣಮಂತ ಮಡ್ಡಿ, ನಿಂಗಣ್ಣ ಜೈನ್ ಸಾಹುಕಾರ್, ಮಲ್ಲಪ್ಪ ವಾಡ್, ಕಲಾವಿದ ರಾಮು ಹಡಪದ, ಅಡುಗೆ ಸಿಬ್ಬಂದಿಯವರಾದ ಪದ್ಮಾವತಿ,  ಜ್ಯೋತಿ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹ ಶಿಕ್ಷಕ ಸುರೇಶ ಓಂಕಾರ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಭಾಗ್ಯಲಕ್ಷ್ಮೀ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!