ಚಿತ್ತಾಪುರದಲ್ಲಿ ನಾಳೆ ಮೊಬೈಲ್ ವೈದ್ಯಕೀಯ ಘಟಕದ ಉದ್ಘಾಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ , ಡಾ. ಓಮ್ ಇಂಡೋ ಜರ್ಮನ್ ಆಸ್ಪತ್ರೆ ಚಿತ್ತಾಪುರ ಇವರ ಸಹಯೋಗದಲ್ಲಿ ನ.21 ರಂದು ಮೊಬೈಲ್ ವೈದ್ಯಕೀಯ ಘಟಕದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 11 ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಸೀನಿಯರ್ ಲೂಸಿ ಪ್ರಿಯಾ ತಿಳಿಸಿದ್ದಾರೆ. ಇದರ ಸದುಪಯೋಗ ಕಲಬುರ್ಗಿ ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿನ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಶೋಕ್ ಲೇಲ್ಯಾಂಡ್ ಸಿಎಸ್ಆರ್ ಮತ್ತು ಕಾರ್ಪೊರೇಟ್ ಸಂಬಂಧಗಳು, ಟಿ-ಹೆಡ್ ಶಶಿಕುಮಾರ್, ತಹಸೀಲ್ದಾರ್ ನಾಗಯ್ಯ ಹಿರೇಮಠ, ಜನರಲ್, ಬೆಥನಿ ಸಭೆ – ಜೆಕೆಎಸ್ಟಿ ಸಹಾಯಕ ಸುಪೀರಿಯರ್ ಶಾಂತಿ ಪ್ರಿಯಾ, ಜೆಕೆಎಸ್ಟಿ ಪ್ರಾಂತೀಯ ಸುಪೀರಿಯರ್ ಎಸ್.ಆರ್ ಸ್ಯಾಲಿ.
ಗೌರವ ಅತಿಥಿಗಳಗಳಾಗಿ ಅಶೋಕ್ ಲೇಲ್ಯಾಂಡ್ ಡಿಜಿಎಂ ಎಚ್.ಆರ್. ಮತ್ತು ಸಿಎಸ್ಆರ್ ಕೃಷ್ಣ ಶಂಕರ್ ವಿ,ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಕರ್ನಾಟಕ ಪ್ರಾಜೆಕ್ಟ್ ಡೈರೆಕ್ಟರ್ ಗಿರೀಶ್ ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ, ಸಿಡಿಪಿಒ ಆರತಿ ತುಪ್ಪದ್, ನ್ಯಾಯವಾದಿ ಮತ್ತು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಅವಂಟಿ, ಸಿಎಸ್ಆರ್ ಮತ್ತು ಇಎಸ್.ಜಿ, ಅಸ್ತೇರ್ ಡಿಎಂ ಹೆಲ್ತ್‌ಕೇರ್ ಹೆಡ್ ರೋಹನ್ ಫ್ರಾಂಕೋ, ಅಶೋಕ್ ಲೇಲ್ಯಾಂಡ್ ಸಿಎಸ್ಆರ್ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟಸುಬ್ರಮಣಿಯನ್.ಆರ್, ತಾಲೂಕಾ ಆರೋಗ್ಯಾಧಿಕಾರಿ ಡಾ. ಸೈಯದ್ ರಝಿವುಲ್ಲಾ ಖಾದ್ರಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಿದ್ಯಾ ರಾಣಿ ಕಾನ್ವೆಂಟ್ ಸುಪೀರಿಯರ್ ಎಸ್ಆರ್ ಸಂದ್ರಾ ಮಾರಿಯಾ, ಬಿಎಸ್ ಅವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.