Oplus_0

ಶಿವಾಜಿ ಮಹಾರಾಜರು ಪ್ರಬುದ್ಧ ಆಡಳಿತಗಾರ: ಕಂಬಳೇಶ್ವರ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಶಿವಾಜಿ ಮಹಾರಾಜರು ಅತ್ಯುತ್ತಮ ನಾಯಕತ್ವ, ಆಡಳಿತ ತಂತ್ರಗಳು ಅನುಸರಿಸಿಕೊಂಡ ಪ್ರಬುದ್ಧ ಆಡಳಿತಗಾರನಾಗಿದ್ದರು ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ನಿಮಿತ್ತ ಶಿವಾಜಿ ಮೂರ್ತಿಗೆ ಶ್ರೀಗಳು ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅವರ ಆಳ್ವಿಕೆಯ ಅವಧಿಯು ಆಡಳಿತ ಮತ್ತು ನ್ಯಾಯಾಲಯ ವಲಯಗಳಲ್ಲಿ ಪರ್ಷಿಯನ್ ಭಾಷೆಗಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡುವ ಮೂಲಕ ಗುರುತಿಸಲ್ಪಟ್ಟಿತು, ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮರಾಠ ಸಮಾಜದ ಅಧ್ಯಕ್ಷ ಅನಿಲ್ ಯಂಡೆ, ಮುಖಂಡರಾದ ಸುನೀಲ್ ಯಂಡೆ, ರೋಹಿತ್ ಚವ್ಹಾಣ್, ರೋಹಿತ್ ಯಂಡೆ, ಸಂತೋಷ ಗವಳಕರ್, ಆಕಾಶ್ ಸುಗಂಧಿ, ರಾಘವೇಂದ್ರ ಮೋಹಿತೆ, ಸಂಜು ಸೂರ್ಯವಂಶಿ, ಗುರು ಉಪ್ಪಾರ್, ನವೀನ್ ಚವ್ಹಾಣ್, ಅನುಪ್ ಉಬಾಳೆ, ಬಂಟ್ಟಿ ಹರಳೆ, ನಿತೇಶ ಸುಗಂಧಿ, ಅನೀಲ್ ಚಪಟ್ಲೆ, ಅಂಬಣ್ಣ ಹೋಳಿಕಟ್ಟಿ, ಸಾಬಣ್ಣ ಹೋಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ಮೇಘರಾಜ ಗುತ್ತೇದಾರ್, ನರಹರಿ ಕುಲಕರ್ಣಿ, ಮಹೇಶ್ ಸುಗಂಧಿ, ಪ್ರಶಾಂತ್ ಶಿಂದೆ, ರಾಜೇಶ ಹೋಳಿಕಟ್ಟಿ, ಹರ್ಷ ಸೂರ್ಯವಂಶಿ ಸೇರಿದಂತೆ ಪಿಎಸ್‌ಐ ಚಂದ್ರಾಮಪ್ಪ, ದತ್ತು ಜಾನೆ, ಸವಿಕುಮಾರ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!