ಶ್ರೀ ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ, ಶ್ರೀ ಸದ್ಗುರು ವಿಶ್ವಾರಾಧ್ಯರ ಪುರಾಣ ಉದ್ಘಾಟನೆ | ಅಬ್ಬೆತುಮಕೂರು ಸಿದ್ಧ ಸಂಸ್ಥಾನ ಮಠದಲ್ಲಿ ಜಾತಿ ಧರ್ಮವಿಲ್ಲ ಸಮಾನತೆ ಇದೆ: ಜಯಶ್ರೀ ಮತ್ತಿಮೂಡ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದಲ್ಲಿ ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲ, ಅಲ್ಲಿ ಸಮಾನತೆ ಇದೆ ಎಂದು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಹೇಳಿದರು.
ಪಟ್ಟಣದ ವರುಣ್ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶಿವಶಂಕರ ಮಠದ ಮಠಾಧೀಶರಾದ ಶ್ರೀ ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಪೂಜ್ಯರಿಗೆ ನಾಣ್ಯಗಳಿಂದ ತುಲಾಭಾರ ಹಾಗೂ ಶ್ರೀ ಸದ್ಗುರು ವಿಶ್ವಾರಾಧ್ಯರ ಪುರಾಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ಬೆತುಮಕೂರು ಮಠದಲ್ಲಿ ಅಗಾಧ ಶಕ್ತಿಯಿದೆ, ಆ ಶಕ್ತಿ ಎಲ್ಲರನ್ನೂ ಕಾಡುತ್ತಿದೆ ಮತ್ತು ನಂಬಿದ ಭಕ್ತರನ್ನು ಉದ್ದರಿಸುತ್ತಿದೆ. ಕಷ್ಟ ಅಂತಾ ಮಠಕ್ಕೆ ಬಂದವರ ಕಷ್ಟವನ್ನು ಪರಿಹರಿಸುವ ದೊಡ್ಡ ಶಕ್ತಿಯಿದೆ ಎಂದು ಹೇಳಿದರು.
ಎಲ್ಲರನ್ನು ಒಂದೇ ಭಾವದಿಂದ ಕಾಣುವ ಗಂಗಾಧರ ಸ್ವಾಮೀಜಿ ತಾಯಿ ಹೃದಯ ಹಾಗೂ ಮಾತೃ ಸ್ವರೂಪಿಯಾಗಿದ್ದಾರೆ ಎಂದರು. ದಾನ ಧರ್ಮ ಮಾಡುವ ಕೈ ಶ್ರೇಷ್ಠವಾಗಿದೆ, ಈ ನಿಟ್ಟಿನಲ್ಲಿ ದಾನ ಧರ್ಮದಿಂದ ಅಧ್ಬುತ ಬದಲಾವಣೆ ಹಾಗೂ ಪ್ರಗತಿ ಆಗಲಿದೆ ಎಂದು ಹೇಳಿದರು. ಸಮಾಜಮುಖಿ ಕಾರ್ಯಕ್ರಮಗಳಿಗೆ ಎಲ್ಲರೂ ಕೂಡಿ ಕೈ ಜೋಡಿಸಿದಾಗ ಮಾತ್ರ ಕೆಲಸಕಾರ್ಯಗಳು ನಡೆಯಲು ಸಾಧ್ಯ ಈ ನಿಟ್ಟಿನಲ್ಲಿ ನಾನು ಶಾಸಕರಿಂದ ಭಕ್ತಿಯ ಸೇವೆ ಸಲ್ಲಿಸುವುದಾಗಿ ಹೇಳಿದರು.
ಸಾನಿಧ್ಯ ವಹಿಸಿದ್ದ ಅಬ್ಬೆತುಮಕೂರ ವಿಶ್ವಾರಾಧ್ಯ ಸಿದ್ದ ಸಂಸ್ಥಾನ ಮಠದ ಶ್ರೀ ಡಾ. ಗಂಗಾಧರ ಮಹಾಸ್ವಾಮಿಗಳು, ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಅವರು ಆಶೀರ್ವಚನ ನೀಡಿದರು. ಪತ್ರಕರ್ತ ಶರಣು ಗೊಬ್ಬುರ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಎಮ್ ದೇಶಮುಖ, ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಶೋಕ ನಿಪ್ಪಾಣಿ ಅವರು ಅಧ್ಯಕ್ಷತೆ ವಹಿಸಿದ್ದರು.
ಮಳಖೇಡ ಶ್ರೀ ಕೊಟ್ಟುರೇಶ್ವರ ಸ್ವಾಮಿಜಿ, ವೀರಶೈವ ಲಿಂಗಾಯತ ಮಹಾಸಭಾ ಪ್ರಮುಖರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ನಾಲವಾರ, ಚಂದ್ರಶೇಖರ ಬಿ. ಸಜ್ಜನಶೆಟ್ಟಿ, ಬಸವರಾಜ ಸಾಹು ಶಿವಗೋಳ ಹೆಬ್ಬಾಳ, ನಾಗರೆಡ್ಡಿ ಪಾಟೀಲ್ ಕರದಾಳ, ಆರ್.ರುದ್ರಯ್ಯ, ಡಾ. ಚಂದ್ರಶೇಖರ ಕಾಂತಾ, ರವೀಂದ್ರ ಸಿ ಸಜ್ಜನಶೆಟ್ಟಿ, ಈಶ್ವರಮ್ಮ ಚಂದ್ರಶೇಖರ ಅವಂಟಿ, ಮಹಾದೇವಿ ಮಲ್ಲರೆಡ್ಡಿ ಗೋಪಸೇನ್, ಶಾಂತಣ್ಣ ಚಾಳೀಕಾರ, ವೆಂಕಟಮ್ಮ ಎಮ್ ಪಾಲಪ್, ಆನಂದ ಪಾಟೀಲ್ ನರಿಬೋಳ, ಪ್ರಸಾದ ಸಿ. ಅವಂಟಿ, ಚಂದ್ರಶೇಖರ ಬಳ್ಳಾ, ಬಸವರಾಜ ಸಂಕನೂರ, ವಿಶ್ವರಾಧ್ಯ ಎಚ್ ನೆನಕಿ, ಪ್ರಕಾಶ ಡಿ ಹಂಚನಾಳ, ಸಂಗೀತಾ ರೇವಣಸಿದ್ದಪ್ಪ ಯದ್ಲಾಪೂರ, ಲಕ್ಷ್ಮೀಬಾಯಿ ಎಸ್ ಹತ್ತಿ, ಕವಿತಾ ವಿಶ್ವನಾಥ ಭಾಗೋಡಿ, ನಿರ್ಮಲಾ ಎಸ್ ಭಂಗಿ, ಕಮಲಾಬಾಯಿ ಟೋಕಾಪೂರ, ಲಕ್ಷ್ಮೀಬಾಯಿ ಆರ್ ಮಟ್ಟಿ, ಕೋಟೇಶ್ವರ ರೇಷ್ಮಿ, ಮಲ್ಲಕಾರ್ಜುನರೆಡ್ಡಿ ಇಜಾರ್, ಶಿವಲಿಂಗಪ್ಪ ವಾಡೇದ ರಾವೂರ, ಶಿವರೆಡ್ಡಿ ಎಸ್ ಪಾಲಪ್, ಮಂಜುಳಾ ಬಸವರಾಜ ಹೂಗಾರ, ಬಸವರಾಜ ಕಾಳಗಿ, ಶಿವಕುಮಾರ ಎಮ್ ಪೂಜಾರಿ, ಮಹಾದೇವ ಅಂಗಡಿ, ಬಸವರಾಜಗೌಡ ಆಲೂರ, ಜಯಂತ ಕುಲಕರ್ಣಿ ಮಾಲಗತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವೀರೇಶ್ ಶಾಸ್ತಿ ಮಲಕೂಡ ಪುರಾಣ ಪ್ರವಚನ ನೀಡಿದರು. ಪ್ರತೀಕ್ಷಾ ಗಾರಂಪಳ್ಳಿ ಭರತನಾಟ್ಯ ಪ್ರದರ್ಶಿಸಿದರು. ವೀರಶೈವ ಸಮಾಜದ ಅಧ್ಯಕ್ಷ ನಾಗರಾಜ ಸಿ. ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ್ ಸುಲೇಗಾಂವ ಸ್ವಾಗತಿಸಿದರು, ವಿರೇಶ ಮಾಕಾಪ ಕರದಾಳ ನಿರೂಪಿಸಿದರು.

