ಚಿತ್ತಾಪುರ ಯುವಕರ ಕಾರ್ಯಕ್ಕೆ ಮೆಚ್ಚುಗೆ
ದೀಪಾಲಂಕಾರದಿಂದ ಜಗಮಗಿಸುತ್ತಿರುವ ನಾಗಾವಿ ನಾಡು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಐತಿಹಾಸಿಕ ನಾಗಾವಿ ಯಲ್ಲಮ್ಮ ಜಾತ್ರಾ ಮಹೋತ್ಸವ (ಪಲ್ಲಕ್ಕಿ ಉತ್ಸವ) ನಿಮಿತ್ತ ದೀಪಾಲಂಕಾರದಿಂದ ನಾಗಾವಿ ನಾಡು ಜಗಮಗಿಸುತ್ತಿದೆ.
ಹೌದು, ಈ ಬಾರಿ ಅಕ್ಪಟೋಬರ್ 17 ರಂದು ನಡೆಯಲಿರುವ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಹೊಸ ಮೆರುಗು ನೀಡಲು ಯುವಪಡೆ ತಯ್ಯಾರಾಗಿ ನಿಂತಿದೆ.
ಪಟ್ಟಣದ ಯುವಕರು ಜ್ಯಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡುವ ದೊಡ್ಡ ಕೆಲಸಕ್ಕೆ ಕೈ ಹಾಕಿ ತಮ್ಮನ್ನು ತಾವು ತೊಡಗಿಸಿಕೊಂಡು ಯೋಜನಾಬದ್ಧವಾಗಿ ಮುನ್ನಡೆಯುತ್ತಿರುವ ಯುವಕರ ಕಾರ್ಯಕ್ಕೆ ಎಲ್ಲರೂ ಬೆನ್ನು ತಟ್ಟಿ ಆಶೀರ್ವದಿಸುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಯಾವುದೇ ಸಂಘ, ಸಮಿತಿ ಅಂತ ಮಾಡಿಲ್ಲ ಮತ್ತು ಅಧ್ಯಕ್ಷ ಉಪಾಧ್ಯಕ್ಷ ಅಂತ ಯಾವುದೇ ಪದಾಧಿಕಾರಿಗಳನ್ನು (ಬಾಡಿ) ಮಾಡಿಲ್ಲ, ನಾವೆಲ್ಲರೂ ಒಂದೇ ಎಂಬ ಸಮಭಾವದಿಂದ ತಾಯಿ ನಾಗಾವಿ ಯಲ್ಲಮ ದೇವಿಯ ಸೇವೆಯಲ್ಲಿ ನಿರತರಾಗಿದ್ದಾರೆ, ಯುವಕರ ಈ ಸೇವೆ ಇತರರಿಗೆ ಮಾದರಿಯಾಗಿದೆ.
ಯುವಕರು ಒಗ್ಗೂಡಿದರೆ ಯಾವುದೇ ಕೆಲಸ ನಿಲ್ಲುವುದಿಲ್ಲ ಎನ್ನುವುದಕ್ಕೆ ಈ ದೀಪಾಲಂಕಾರವೇ ಸಾಕ್ಷಿ ಎನ್ನಬಹುದು. ಚಿತ್ತಾಪುರಿನ ಐತಿಹಾಸಿಕ ನಾಗಾವಿ ನಾಡಿನ ಇತಿಹಾಸದಲ್ಲಿ ಈ ಬಾರಿ ದೀಪಾಲಂಕಾರದಿಂದ ಜಾತ್ರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ಬಂದಂತಾಗಿದೆ. ಮೈಸೂರು ಹಾಗೂ ಮಂಗಳೂರ ದಸರಾ ವೈಭವ ಈ ಬಾರಿ ನಮ್ಮೂರಲ್ಲಿಯೇ ಕೊಡಬಹುದು ರಾತ್ರಿ ಸಮಯದಲ್ಲಿ ಒಮ್ಮೆ ಚಿತ್ತಾಪುರ ಪಟ್ಟಣದಲ್ಲಿ ಸುತ್ತಾಡಿ ಅದರ ಅನುಭವ ಆಗಲಿದೆ. ಯುವಕರ ಈ ಮಹಾಕಾರ್ಯಕ್ಕೆ ನಾಗಾವಿ ಎಕ್ಸಪ್ರೆಸ್ ಪತ್ರಿಕೆ ಶುಭಹಾರೈಕೆಗಳು ಹಾರೈಸುತ್ತದೆ.