ಬೋಡಬಂಡಾ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಮಾ.27 ರಂದು ಶ್ರೀ ರಾಮ ನವಮಿ ಉತ್ಸವ: ನರೇಂದ್ರ ರಾಠೋಡ
ನಾಗಾವಿ ಎಕ್ಸಪ್ರೆಸ್
ಗುರುಮಠಕಲ್: ತಾಲೂಕಿನ ಸುಕ್ಷೇತ್ರ ಬೋಡಬ೦ಡಾ ಗ್ರಾಮದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಮಾ.27 ರಂದು ಶ್ರೀ ರಾಮ ನವಮಿ ಉತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಶ್ರೀ ಲಕ್ಷ್ಮೀತಿಮ್ಮಪ್ಪ ದೇವಸ್ಥಾನ ಜೀಣೋದ್ಧಾರ ಸೇವಾ ಸಮಿತಿ ವ್ಯವಸ್ಥಾಪಕ ನರೇಂದ್ರ ರಾಠೋಡ ತಿಳಿಸಿದ್ದಾರೆ.
ಅಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರಿಗೆ ಪಂಚಾಮೃತಾಭಿಷೇಕ ಹಾಗೂ ಅಲಂಕಾರ ಸೇವಾ ಹಾಗೂ ಮಹಾಪೂಜೆ ಜರಗುವುದು, ಬೆಳಗ್ಗೆ 9 ರಿಂದ 11 ರವರೆಗೆ ಶ್ರೀ ರಾಮ ತಾರಕ ಹೋಮ, ಪೂರ್ಣಾಹುತಿ, ಬೆಳಗ್ಗೆ 11.30 ರಿಂದ ರಥೋತ್ಸವ ಕಾರ್ಯಕ್ರಮ ಜರಗುವುದು ಮಧ್ಯಾಹ್ನ 12 ಗಂಟೆಗೆ ಅಭಿಜಿತ್ ಮೂಹುರ್ತದಲ್ಲಿ ಶ್ರೀ ರಾಮ ದೇವರಿಗೆ ತೊಟ್ಟಿಲ ಸೇವಾ, ಉಂಜಲ ಸೇವೆ, ಅಷ್ಟಾವಧಾನ ಸೇವಾ, ಮಹಾಮಂಗಳಾರತಿ ಕಾರ್ಯಕ್ರಮದ ನಂತರ ಸಾಯಂಕಾಲದ ವರೆಗೆ ಭಜನಾ ಕಾರ್ಯಕ್ರಮ ಜರಗುವುದು ಎಂದು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಕೆ.ಮೋಹನಾಚಾರ್ಯ ಬೋಡಬ೦ಡಾ ಪೂಜೆ ಕಾರ್ಯ ಹಾಗೂ ಪಂ. ಪವನಾಚಾರ್ಯ ಮೋಟ್ನಳ್ಳಿ ಅವರು ಕಾರ್ಯಕ್ರಮ ನಡೆಸಿಕೊಡುವವರು, ಹೀಗಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.

