ಹಲಕರ್ಟಿ ಗ್ರಾಮದ ಜನರಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಎಸ್.ಯು.ಸಿ.ಐ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಹಲಕರ್ಟಿ ಗ್ರಾಮದ ಜನರಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಮುಖಂಡರು ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಪ್ರತಿಭಟಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಹಲಕರ್ಟಿ ಗ್ರಾಮವು ತಾಲೂಕಿನಲ್ಲೇ ಪ್ರಮುಖವಾದ ಗ್ರಾಮವಾಗಿದ್ದು, ಇಲ್ಲಿ ವಾಸಿಸುವ ಜನ ಕೃಷಿ ಹಾಗೂ ದಿನಗೂಲಿ ಕೆಲಸದ ಮೇಲೆ ಅವಲಂಬಿತರಾಗಿದ್ದಾರೆ, ಅವರಿಗೆ ಕನಿಷ್ಟ ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿಗಳಂತ ಮೂಲಭೂತ ಸೌಲಭ್ಯಗಳನ್ನು ಕೋಡಬೇಕಾಗಿರುವುದು ಗ್ರಾಮ ಪಂಚಾಯತಿಯ ಮೊದಲ ಆದ್ಯ ಕರ್ತವ್ಯವಾಗಿದೆ. ಆದರೆ ಪ್ರತಿ ವರ್ಷ ಬೇಸಿಗೆ ಕಾಲ ಬಂದಾಗ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪ್ರತಿದಿನವೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಕಾರ್ಯದರ್ಶಿ ಶರಣು ಹೇರೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪಂಚಾಯತಿಯ ವಿರುದ್ದ ಹಲವಾರು ಬಾರಿ ಪ್ರತಿಭಟನೆಗಳ ಮೂಲಕ ಗಮನಕ್ಕೆ ತಂದರು ಕೂಡ ಈ ಸಮಸ್ಯೆ ಬಗೆಹರಿಯದೆ ಇರುವುದು ಖಂಡನಿಯ. ಇವಾಗ ಮತ್ತೆ ಎರಡು ತಿಂಗಳಿಂದ ಗ್ರಾಮದ ಹಲವಾರು ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಇದರ ಬಗ್ಗೆ ಗ್ರಾಮ ಪಂಚಾಯತಿ ಇಲ್ಲಿಯವರೆಗೂ ಗಮನ ಹರಿಸದೆ ಇರುವುದು ಜನಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಈ ಕೂಡಲೆ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದ್ದಿದ್ದರೆ ಜನಗಳು ಮುಂದಿನ ಹಂತದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಅದಕ್ಕೆ ಗ್ರಾಮ ಪಂಚಾಯತಿಯೇ ನೇರ ಹೋಣೆಯನ್ನು ಹೊರಬೇಕಾಗುತ್ತದೆ ಎಂದು ಎಸ್.ಯು.ಸಿ.ಐ ಕಮ್ಯೂನಿಷ್ಟ್ ಪಕ್ಷದ ಮುಖಂಡರು ಎಚ್ಚರಿಸಿದ್ದಾರೆ.

ಹಲಕರ್ಟಿ ಗ್ರಾಮದ ವಾರ್ಡ ನಂ 1ರ ಲಕ್ಷ್ಮೀ ನಗರ, ಮಲ್ಲಯನಗುಡಿ, ಹಾಗೂ ವೀರಭದ್ರೇಶ್ವರ ಗುಡಿಯ ಹತ್ತಿರ ಇರುವ ಬಡಾವಣೆಗಳಿಗೆ ಈ ಕೂಡಲೇ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ, ಶಾಶ್ವತ ಶಾಶ್ವತ ಪರಿಹಾರವನ್ನು ಒದಗಿಸಬೇಕು, ಗ್ರಾಮದಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಮಿನಿ ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಿ, ಗ್ರಾಮದ ವಾರ್ಡ ನಂ.2 ರ ಸುಣಗಾರ ಮನೆಯ ಹತ್ತಿರ ಇರುವ ಮಿನಿ ನೀರಿನ ಟ್ಯಾಂಕಿಗೆ ನೀರಿನ ವ್ಯೆವಸ್ಥೆ ಕಲ್ಪಿಸಬೇಕೆಂಬ ಮನವಿ ಪತ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದರು.

ಮನವಿ ಪತ್ರ ಸ್ವೀಕರಿಸಿದ ಪಿಡಿಓ ಅನೀಲಕುಮಾರ ಪಾಟೀಲ ಒಂದು ವಾರದಲ್ಲಿ ಬೊರವೇಲ್ ಕೊರೆಸಿ ನೀರು ಕೊಡುತ್ತೇವೆ ಎಂದು ಹೇಳಿದರು. ಸ್ಥಳಕ್ಕೆ ಆಗಮಿಸಿದ ಎ.ಡಬ್ಲು ಆಗಮಿಸಿ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಶರಣು ಹೇರೂರ ಸದಸ್ಯರಾದ ಗೌತಮ ಮರತೂರಕರ್, ಶಿವುಕುಮಾರ ಆಂದೊಲಾ, ಚೌಡಪ್ಪ ಗಂಜಿ, ಭೀಮಪ್ಪ ಮಾಟ್ನಳ್ಳಿ, ಸಾಬಣ್ಣ ಸುಣಗಾರ, ನಾನಸಾಬ್ ಕೊಲಕುಂದಿ, ಶಿವಯೊಗಿ ಬಳ್ಳಾ, ಹಾಗೂ ಹಲಕಟ್ಟಾ ಗ್ರಾಮದ ಮಹಿಳೆಯರು ಇನ್ನಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!