Oplus_0

ಸೇವಾ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ |  ರಾಮಸ್ವಾಮಿ ಸೇವೆ ಶ್ಲಾಘನೀಯ: ಭೀಮಣ್ಣ ಸಾಲಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸರ್ಕಾರಿ ಸೇವಾವಧಿಯಲ್ಲಿ ಸುಧೀರ್ಘವಾಗಿ 28 ವರ್ಷಗಳ ಕಾಲ ಹಾಸ್ಟೆಲ್ ವಾರ್ಡನ್ ಆಗಿ ಸೇವೆ ಸಲ್ಲಿಸಿದ ರಾಮಸ್ವಾಮಿ ಅವರ ಪ್ರಾಮಾಣಿಕ ಸೇವೆ ಶ್ಲಾಘನೀಯ ಎಂದು ಪಿಎಲ್ಡಿ ಬ್ಯಾಂಕ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಾಗಾವಿ ಕ್ಯಾಂಪಸ್ ವಸತಿ ನಿಲಯದ ಮೇಲ್ವಿಚಾರಕ ರಾಮಸ್ವಾಮಿ ವಿ.ಎಚ್ ಇವರ ಸೇವಾ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಮಸ್ವಾಮಿ ಹಾಸ್ಟೆಲ್ ವಾರ್ಡನ್ ಆಗಿ ಮಕ್ಕಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಒಬ್ಬ ಸರಳ ವ್ಯಕ್ತಿತ್ವದ ಅಪರೂಪದ ವ್ಯಕ್ತಿಯಾಗಿದ್ದಾರೆ. ಮುಂದಿನ ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದ ಯಶಸ್ಸಿನ ಪಥದಲ್ಲಿ ಸಾಗಲಿ ಶುಭಹಾರೈಸಿದರು.

ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಸರ್ಕಾರಿ ನೌಕರರ ಜೀವನದಲ್ಲಿ ಮೊದಲು ಸರ್ಕಾರಿ ಹುದ್ದೆಗೆ ನೇಮಕ ಆಗಿದ್ದ ದಿನ ಹಾಗೂ ಕೊನೆಯದಾಗಿ ಸೇವೆಯಿಂದ ನಿವೃತ್ತಿ ಆಗುವ ದಿನ ಈ ಎರಡು ದಿನಗಳು ಸ್ಮರಣೀಯ ಅಚ್ಚಳಿಯದ ದಿನಗಳಾಗಿರುತ್ತವೆ. ಇದರ ನಡುವೆ ಸಲ್ಲಿಸಿದ ಸೇವೆಯೇ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ರಾಮಸ್ವಾಮಿ ಅವರ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಬಣ್ಣಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಶಿಕ್ಷಕ ಮನೋಹರ್ ಹಡಪದ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಮಸ್ವಾಮಿ  ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುನೀತಾ ಉಡಗಿ, ನಿವೃತ್ತ ಶಿಕ್ಷಕ ಮಲ್ಲಣ್ಣ ಮಾಸ್ಟರ್ ಮುಡಬೂಳ, ನಿಲಯ ಮೇಲ್ವಿಚಾರಕ ವಿಶ್ವನಾಥ ಕುದುರಿಕಾರ, ಮನೋಹರ್ ಹಡಪದ, ಕಾಶಿರಾಯ ಕಲಾಲ್, ರಾಜಶೇಖರ್ ಬಳ್ಳಾ, ರಮೇಶ್ ಭಕ್ತಿ, ವೀರಣ್ಣ ಶಿಲ್ಪಿ, ನರಸಪ್ಪ ಚಿನ್ನಕಟ್ಟಿ, ಮಸ್ತಾನ್ ಪಟೇಲ್, ಚಂದ್ರಶೇಖರ ನಾಲವಾರ, ನಾಗರಾಜ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ನಾಗೇಶ್ ಸೇಡಂ ರಾಮಸ್ವಾಮಿ ಬಗ್ಗೆ ಪರಿಚಯ ಮಾಡಿಕೊಟ್ಟರು, ರಮೇಶ್ ಪುರನ್ ಸ್ವಾಗತಿಸಿದರು, ನೌಕರರ ಸಂಘದ ಜಿಲ್ಲಾಧ್ಯಕ್ಷ ಉಪಾಧ್ಯಕ್ಷ ಸಿದ್ದಪ್ಪ ಹೊನಿಗೇರಾ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!