ಇಂಗಳಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಮನೆ ಭೂಮಿಪೂಜೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ವಾಡಿ ವಲಯದ ಇಂಗಳಗಿ ಗ್ರಾಮದ ಮಾಸಾಶನ ಫಲಾನುಭವಿ ಶರೀಫಾ ಬೀ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಮಂಜೂರಾಗಿದ್ದ ವಾತ್ಸಲ್ಯ ಮನೆ ಭೂಮಿಪೂಜೆ ನಡೆಯಿತು.
ಇಂಗಳಗಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಮೇಶ ಸಾಹು ಅಳ್ಳೊಳ್ಳಿ, ಊರಿನ ಗಣ್ಯರಾದ ನಾಗರಾಜ್ ಸಾಹು ಅಳ್ಳೊಳ್ಳಿ, ಒಕ್ಕೂಟ ಅಧ್ಯಕ್ಷೆ ನೀಲಾ ನಾಗರಾಜ್ ರವರ ಉಪಸ್ಥಿತಿಯಲ್ಲಿ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ, ವಲಯ ಮೇಲ್ವಿಚಾರಕರು, ದಾನಿಗಳು, ಸಂಘದ ಸದಸ್ಯರು ಮಾಸಾಶನ ಫಲಾನುಭವಿ ಉಪಸ್ಥಿತರಿದ್ದರು.

