ಕಲಬುರಗಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರ ಹಾಗೂ ಪ್ರಧಾನ ಕಾರ್ಯದರ್ಶಿಗಳ ನೇಮಕ: ಅಶೋಕ ಬಗಲಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ರಾಜ್ಯದಾದ್ಯಂತ ಸಂಘಟನಾ ಪರ್ವದ ಭಾಗವಾಗಿ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಈ ಕೆಳಕಂಡವರನ್ನು ನಿಯುಕ್ತಿ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ ಬಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ರೈತ ಮೋರ್ಚಾ: ಅಧ್ಯಕ್ಷರಾಗಿ ಬಸವರಾಜ ಮಾಲಿಪಾಟೀಲ ಕಮಲಾಪೂರ, ಪ್ರಧಾನ ಕಾರ್ಯದರ್ಶಿಗಳಾಗಿ ಷಣ್ಮುಖಪ್ಪ ಶಿಬರಬಂಡಿ, ಸುರೇಶ ರಾಠೋಡ.
ಜಿಲ್ಲಾ ಮಹಿಳಾ ಮೋರ್ಚಾ: ಅಧ್ಯಕ್ಷರಾಗಿ ಗೌರಿ ಚಿಚಕೋಟಿ, ಪ್ರಧಾನ ಕಾರ್ಯದರ್ಶಿಗಳಾಗಿ ನಿರ್ಮಲಾ ಬಿ. ಬೆಸ್ತಾ, ನಂದಾ ಬಾಬಾ.
ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ: ಅಧ್ಯಕ್ಷರಾಗಿ ಶಿವಕುಮಾರ ಪೋಚಾಲಿ, ಪ್ರಧಾನ ಕಾರ್ಯದರ್ಶಿಗಳಾಗಿ ಭಾಗೇಶ ಹೊತಿನಮಡು, ಸಿದ್ದು ಬಾನರ್.
ಜಿಲ್ಲಾ ಎಸ್.ಸಿ. ಮೋರ್ಚಾ: ಅಧ್ಯಕ್ಷರಾಗಿ ಮಹೇಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ಗುಂಡಪ್ಪ ಶಿರಾಡೋಣ, ತಿಪ್ಪಣ್ಣ ರಾಠೋಡ.
ಜಿಲ್ಲಾ ಯುವ ಮೋರ್ಚಾ: ಅಧ್ಯಕ್ಷರಾಗಿ ವಿರೇಂದ್ರ ಪಾಟೀಲ ರಾಯಕೋಡ, ಪ್ರಧಾನ ಕಾರ್ಯದರ್ಶಿಗಳಾಗಿ ಶರಣಗೌಡ ಪಾಟೀಲ ಹರಕಂಚಿ, ಕುಮಾರ ಬಂಡೆ.
ಜಿಲ್ಲಾ ಎಸ್.ಟಿ. ಮೋರ್ಚಾ: ಅಧ್ಯಕ್ಷರಾಗಿ ಗುರುರಾಜ ಸೂಲಹಳ್ಳಿ ನರಿಬೊಳ, ಪ್ರಧಾನ ಕಾರ್ಯದರ್ಶಿಗಳಾಗಿ ದೇವು ಎನ್. ಜಮಾದಾರ್, ರವೀಂದ್ರ ಲಕ್ಷ್ಮಣ್ ನಾಯಕ.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ: ಅಧ್ಯಕ್ಷರಾಗಿ ಅಪ್ಪಾರಾವ ಸಾಹೇಬ ಮಾಲಗತ್ತಿ, ಪ್ರಧಾನ ಕಾರ್ಯದರ್ಶಿಗಳಾಗಿ ಜಾನ್ ಹೊಸಳ್ಳಿ, ಮೆಹಬೂಬ್ ಸಾಬ್ ಚಿನಮಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

