ಜ. 24 ರಂದು ಕಲಬುರಗಿ ಜಿಲ್ಲಾ ಮಟ್ಟದ ಆದರ್ಶ ವಿದ್ಯಾಧಾತ್ರಿ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಆದರ್ಶ ಉಪಾಧ್ಯಾಯರುಗಳ ಪ್ರಶಸ್ತಿ ಪ್ರಧಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ವತಿಯಿಂದ ಆಧುನಿಕ ಭಾರತದ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ 195ನೇ ಜನ್ಮದಿನೋತ್ಸವ ಅಂಗವಾಗಿ ಕಲಬುರಗಿ ಜಿಲ್ಲಾ ಮಟ್ಟದ ಆದರ್ಶ ವಿದ್ಯಾಧಾತ್ರಿ ಪ್ರಶಸ್ತಿ ಪ್ರಧಾನ ಹಾಗೂ ರಾಜ್ಯ ಮಟ್ಟದ ಆದರ್ಶ ಉಪಾಧ್ಯಾಯರುಗಳ ಪ್ರಶಸ್ತಿ ಪ್ರಧಾನ ಹಾಗೂ ರಾಜ್ಯ ಘಟಕ ಉದ್ಘಾಟನೆ ಮತ್ತು ಸ್ಕೂಪ್ಸ್ ಕ್ಯಾಲೆಂಡರ್ ಲೋಕಾರ್ಪಣೆ ಕಾರ್ಯಕ್ರಮ ಇದೇ ಜ. 24 ರಂದು ಮಧ್ಯಾಹ್ನ 12.47 ನಿಮಿಷಕ್ಕೆ ಕಲಬುರಗಿಯ ಎಸ್. ಎಮ್. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸ್ಕೂಪ್ಸ್ ತಾಲೂಕು ಅಧ್ಯಕ್ಷೆ ಜಯಶೀಲಾ ಬಿರಾದಾರ ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನಿಂದ ಬಿಆರ್’ಪಿ ಜಯಶೀಲಾ ಬಿರಾದಾರ, ಸಾತನೂರು ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ದೇವೇಂದ್ರರೆಡ್ಡಿ ದುಗುನೂರು ಇವರು ರಾಜ್ಯಮಟ್ಟದ ಆದರ್ಶ ಉಪಾಧ್ಯಾಯರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ದಿಗ್ಗಾಂವ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಂಗಲಾ, ಚಿತ್ತಾಪುರ ಕನ್ಯಾ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಸ್ತೂರಿಬಾಯಿ ಪಾಟೀಲ ಇವರು ಕಲಬುರಗಿ ಜಿಲ್ಲಾ ಮಟ್ಟದ ಆದರ್ಶ ವಿದ್ಯಾಧಾತ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕುಮಾರಿ ಪ್ರಿಯದರ್ಶಿನಿ ಸಾಲಿ, ಕುಮಾರಿ ಭಾಗ್ಯಶ್ರೀ ಇವರು ರಾಜ್ಯಮಟ್ಟದ ಚಿಗುರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಚಿತ್ತಾಪುರ ತಾಲೂಕಿನ ಸ್ಕೂಪ್ಸ್ ಅಧ್ಯಕ್ಷೆ ಜಯಶೀಲಾ ಬಿರಾದಾರ ತಿಳಿಸಿದ್ದಾರೆ.

