ಕಲಬುರಗಿ ಜೆಸ್ಕಾಂ ಎಇಇ ಸಂತೋಷ ಡಾಂಗೆ ವರ್ಗಾವಣೆಗೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಗು.ವಿ.ಸ.ಕಂ. ವಿಭಾಗ-1 ರಲ್ಲಿ ಎಇಇ ಎಲ್ಟಿ ರೈಟನಿಂಗ್ ವಿಭಾಗದಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಸಂತೋಷ ಡಾಂಗೆ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಬೇರೊಬ್ಬರನ್ನು ಪ್ರಭಾರಿ ಅಥವಾ ಶಾಶ್ವತ ಕಾರ್ಯ ನಿರ್ವಾಹಕ ಅಭಿಯಂತರರು(ವಿ) ವಿಭಾಗ-2 ಕ್ಕೆ ನಿಯೋಜಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ತಾಲೂಕು ಸಮಿತಿ ಪದಾಧಿಕಾರಿಗಳು ಕಲಬುರಗಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈಗ ವಿಭಾಗ-2 ರಲ್ಲಿ ಖಾಲಿ ಇರುವ ಹುದ್ದೆಗೆ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರರು (ವಿ) ಎಂದು ವ್ಯವಸ್ಥಾಪಕ ನಿರ್ದೇಶಕರು ಗು.ವಿ.ಸ.ಕಂ. ಕಲಬುರಗಿ ರವರು ನಿಯೋಜಿರುತ್ತಾರೆ. ಇವರು ಬಂದ ಮೇಲೆ ನಮ್ಮ ಚಿತ್ತಾಪುರ ತಾಲೂಕಿಗೆ ವಿದ್ಯುತ್ ಸುರಕ್ಷಿತಾ ಮತ್ತು ಡೌಲಪಮೆಂಟ್ ಹಾಗೂ ಇನ್ನಿತರ ಕಾಮಗಾರಿಯ ಬಜೇಟ್ ಇದ್ದಂತ ಕಾಮಗಾರಿಯನ್ನು ಮಾಡಿಸಲಾರದೆ ಬಜೇಟ್ ಹಿಂದಕ್ಕೆ ಕಳಿಸಿಕೊಡುತ್ತಿದ್ದಾರೆ. ಅದಕ್ಕೆ ನಮ್ಮ ಚಿತ್ತಾಪುರ ಡೌಲಪಮೆಂಟ್ ಬಜೇಟ್ ಕೇಳುವುದಕ್ಕೆ ಹೋದರೆ ಅವರು ಬಾಯಿಗೆ ಬಂದಂತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಮತ್ತು ವಿಭಾಗಕ್ಕೆ ಕೆಲಸಕ್ಕೆ ಬಂದಂತ ಗ್ರಾಹಕರಿಗೆ ಹಾಕಿರುವ ಖುರ್ಚಿಗಳನ್ನು ತೆಗೆಸಿರುತ್ತಾರೆ. ಕಛೇರಿಯ ಕೆಲಸಕ್ಕೆ ನಾವು ಕಛೇರಿಯಲ್ಲಿ ನಿಂತರೆ ನೀವು ಬರಬೇಡಿ ಎಂದು ಹೊರಗೆ ಹಾಕುತ್ತಿದ್ದಾರೆ. ಇವರು ಪ್ರಭಾರಿಯಾಗಿ ಬಂದ ಮೇಲೆ ಚಿತ್ತಾಪುರ ತಾಲೂಕಿನಲ್ಲಿ ಒಂದೇ ಒಂದು ಕೆಲಸ ಆಗುತ್ತಿಲ್ಲ ಮತ್ತು ನಮ್ಮ ಚಿತ್ತಾಪುರ ಉಪ ವಿಭಾಗದಲ್ಲಿ ವಿದ್ಯುತ್ ಕಂಬಗಳು ತರಿಸುತ್ತಿಲ್ಲ, ಈಗ ನಮಗೆ ಚಿತ್ತಾಪುರ ತಾಲೂಕು ಸಮಿತಿಯಲ್ಲಿ ಸುಮಾರು 50-60 ವಿದ್ಯುತ್ ಗುತ್ತಿಗೆದಾರರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಹಾಗೂ ನಮ್ಮ ಸದರಿ ಈಗ ನಮ್ಮ ಕುಟುಂಬ ನಡೆಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ನಾವು ಕಾಮಗಾರಿ ಮಾಡಿರುವ ಬಿಲ್ಲುಗಳು ಕೊಡುತ್ತಿಲ್ಲ ನಾವು ಸಾಲವನ್ನು ಪಡೆದು ಕಾಮಗಾರಿ ಕೆಲಸವನ್ನು ಮಾಡಿದ್ದೇವೆ. ಕೊಟ್ಟವರ ಕಿರುಕುಳ ಹೆಚ್ಚಾದ ಕಾರಣ ನಮಗೆ ವಿಷ ಕುಡಿಯುವ ಅನಿವಾರ್ಯತೆ ಬಂದಿದೆ. ಅದಕ್ಕೆ ಸಂತೋಷ ಡಾಂಗೆ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರರು (ವಿ) ಇವರನ್ನು ತಕ್ಷಣವೇ ತೆಗೆದು ಹಾಕಿ ಬೇರೊಬ್ಬರನ್ನು ಪ್ರಭಾರಿಯಾಗಿ ಅಥವಾ ಶಾಶ್ವತ ಕಾರ್ಯನಿರ್ವಾಹಕ ಅಭಿಯಂತರರನ್ನು ನಿಯೋಜಿಸಬೇಕೆಂದು ವ್ಯವಸ್ಥಾಪಕ ನಿರ್ದೇಶಕರು ಗು.ವಿ.ಸ.ಕಂ. ಕಲಬುರಗಿ ರವರಿಗೆ ಆದೇಶಿಸಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ತಾಲೂಕು ಸಮಿತಿಯವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಒಂದು ವೇಳೆ ವರ್ಗಾವಣೆ ಮಾಡಲು ವಿಳಂಬ ಮಾಡಿದರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಬಸವರಾಜ ಎಮ್. ಅಳ್ಳೋಳ್ಳಿ, ಗೌರವ ಉಪಾಧ್ಯಕ್ಷ ಭೀಮಾಶಂಕರ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ದೀಪಕ್ ಬೆಳಕುಣಿ, ಗೌರವ ಜಂಟಿ ಕಾರ್ಯದರ್ಶಿ ಅಪ್ಸರ್ ಅಹ್ಮದ್, ಗೌರವ ಖಜಾಂಚಿ ಪ್ರಶಾಂತ ಗರ್ಜೆ, ನಾಗು ಮರಗೋಳ ಸೇರಿದಂತೆ ಇತರರು ಇದ್ದರು.

