Oplus_0

ರಾವೂರ ಕ್ರಾಸ್ ಹತ್ತಿರ ಆಂದೋಲಾ ಶ್ರೀಗೆ ತಡೆದ ಪೊಲೀಸರು | ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿ ದಂಡಗುಂಡಕ್ಕೆ ಬರದಂತೆ ನಿರ್ಬಂಧ: ತಹಸೀಲ್ದಾರ್ ಆದೇಶ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಆ.11 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ಅಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿ ರವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 152, 162, 163 ರನ್ವಯ ನಿರ್ಬಂಧನೆ ಜಾರಿಗೊಳಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಆದೇಶಿಸಿದ್ದಾರೆ.

ವಿವರಣೆ:

ಶ್ರಾವಣ ಮಾಸದ 3 ನೇ ಸೋಮವಾರದಂದು ಚಿತ್ತಾಪುರ ತಾಲೂಕಿನ ಠಾಣಾ ವಾಪ್ತಿಯಲ್ಲಿ ಬರುವ ದಂಡಗುಂಡ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆಗೆ ಸಂಗಮೇಶ್ವರ ಮಠದ ಪೀಠಾಧಿಪತಿ ಶ್ರೀ ಸಂಗನಬಸವ ಶಿವಚಾರ್ಯರು ಆ.9 ರಂದು ಪತ್ರಿಕಾಗೋಷ್ಠಿಯಲ್ಲಿ ತಾವು ಹಾಗೂ ತಮ್ಮ ಜೊತೆಯಲ್ಲಿ ಆಂದೋಲಾ ಶ್ರೀಗಳನ್ನು ಕರೆದುಕೊಂಡು ಬರುತ್ತೇವೆ ಅಂತ ಹೇಳಿರುತ್ತಾರೆ. ಶ್ರೀ ಸಂಗನಬಸವ ಶಿವಚಾರ್ಯರು ಹಾಗೂ ಶ್ರೀ ಆಂದೋಲಾ ಸಿದ್ದಲಿಂಗ ಶ್ರೀಗಳು ಈಗಾಗಲೇ ಅನೇಕ ಬಾರಿ ಮಾಧ್ಯಮದ ಮುಖಾಂತರ ದೇವಸ್ಥಾನ ಹಾಗೂ ಟ್ರಸ್ಟ್ ಕಮಿಟಿ ಹಾಗೂ ಭಕ್ತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುತ್ತಾರೆ ಮತ್ತು ಇದಕ್ಕೆ ಸಂಬಂದಿಸಿದಂತೆ ನ್ಯಾಯಲಯದಲ್ಲಿ ಪ್ರಕರಣಗಳು ಚಾಲ್ತಿಯಲ್ಲಿ ಇರುತ್ತವೆ. ದೇವಸ್ಥಾನ ಹಾಗೂ ಕಮಿಟಿ ಮತ್ತು ಭಕ್ತರ ವಿರುದ್ಧ ತಮ್ಮ ಮನಸ್ಸಿಗೆ ಬಂದಂತೆ ಈ ಮೊದಲು ಕೂಡ ಹೇಳಿಕೆ ನೀಡಿರುತ್ತಾರೆ ಹಾಗೂ ಶ್ರೀಗಳ ಮತ್ತು ಭಕ್ತರ ನಡುವೆ ಅನೇಕ ಸಲ ಘರ್ಷಣೆಗಳು ಆಗಿರುತ್ತವೆ. ಊರಿನ ಸಾರ್ವಜನಿಕರು ಹಾಗೂ ಟ್ರಸ್ಟ್ ಕಮಿಟಿಯವರು ಆಂದೋಲಾ ಸ್ವಾಮಿಜಿಗಳಿಗೆ ಜಾತ್ರೆಯ ಸಮಯದಲ್ಲಿ ದಂಡಗುಂಡ ಗ್ರಾಮಕ್ಕೆ ಬರದಂತೆ ಅವರನ್ನು ನಿರ್ಬಂದಿಸಬೇಕು ( ಬರದ ಆಗೆ ತಡೆಯಬೇಕು) ಅಂತಹ ಅರ್ಜಿ ನೀಡಿದ್ದಾರೆ.

ಸದರಿ ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ಶ್ರೀ ಸಂಗಮೇಶ್ವರ ಮಠದ ಪೀಠಾಧಿಪತಿ ಶ್ರೀ ಸಂಗನಬಸವ ಶಿವಾಚಾರ್ಯರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಪೀಠಾಸೀನ ಕಲಬುರಗಿ ರವರಲ್ಲಿ ಸಲ್ಲಿಸಿದ ಅರ್ಜಿಯಂತೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 162/2024. 163/2024 ನೇದ್ದರ ಪ್ರಕಾರ ಪ್ರಕರಣಗಳು ದಾಖಲಾಗಿದ್ದು, ಇನ್ನೂ ತನಿಖೆ ಹಂತದಲ್ಲಿ ಇರುತ್ತದೆ. ಸದರಿ ಮಠದ ಜಾಗಕ್ಕೆ ಸಂಬಂದಿಸಿದಂತೆ ಮಠದ ಪೀಠಾಧಿಪತಿಗಳು ಹಾಗೂ ದೇವಸ್ಥಾನದ ಕಮಿಟಿರವರ ಮದ್ಯದಲ್ಲಿ ತಕಾರರು ಇನ್ನೂ ಇತ್ಯರ್ಥವಾಗಿರುವುದಿಲ್ಲಾ. ಆದರೂ ಕೂಡ ಸಂಗನಬಸವ ಶಿವಾಚಾರ್ಯರರು ಆ.9 ರಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಟ್ರಸ್ಟ್ ಕಮಿಟಿಯವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದು, ಇದರಿಂದ ಕಮಿಟಿ ರವರಲ್ಲಿ ಹಾಗೂ ಗ್ರಾಮದ ಭಕ್ತಾದಿಗಳಲ್ಲಿ ಮಠದ ಪೀಠಾಧಿಪತಿಗಳ ಮೇಲೆ ಆಕ್ರೋಶ ಉಂಟಾಗಿರುತ್ತದೆ.

ಸದರಿ ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿಗಳು ನಮ್ಮ ಗ್ರಾಮಕ್ಕೆ ಬಂದಾಗ ಅವರು ದೇವಸ್ಥಾನದ ಟ್ರಸ್ಟ್ ಕಮಿಟಿ ರವರ ಬಗ್ಗೆ ಹಾಗೂ ಗ್ರಾಮಸ್ಥರ ಬಗ್ಗೆ ಏನಾದರೂ ಪ್ರಚೋದನಕಾರಿ ಮಾತನಾಡುವ ಸ್ವಭಾವವುಳ್ಳವರಾಗಿದ್ದು, ಅವರು ಬಂದಲ್ಲಿ ಸಾರ್ವಜನಿಕರು ಹಾಗೂ ಅವರ ಮದ್ಯ ಗಲಾಟೆಗಳು ಆಗುವ ಸಂಭವ ಇರುತ್ತದೆ. ಅಲ್ಲದೇ ಈ ಹಿಂದೆ ಅವರು ಹಲವು ಕೋಮುಗಳ ಮಧ್ಯ ಪ್ರಚೋದನಕಾರಿ ಬಾಷಣಗಳು ಮಾಡಿರುವುದರಿಂದ ಜಿಲ್ಲೆಯ ವಿವಿದ ಪೋಲಿಸ್ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ. ಕಾರಣ ಆ.11 ರಂದು ಶ್ರೀ ದಂಡಗುಂಡ ಬಸವೇಶ್ವರ ಜಾತ್ರೆಯ ಪ್ರಯುಕ್ತವಾಗಿ ಆಂದೋಲಾ ಶ್ರೀ ಸಿದ್ದಲಿಂಗ ಶ್ರೀಗಳು ಬಂದಲ್ಲಿ ಏನಾದರೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಹಾಗೂ ಟ್ರಸ್ಟ್ ಕಮಿಟಿಯವರ ಮದ್ಯದಲ್ಲಿ ಗಲಾಟೆಗಳು ಆಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂಭವ ಕಂಡು ಬಂದಿರುತ್ತದೆ. ಆದ್ದರಿಂದ ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿಯವರಿಗೆ ದಂಡಗುಂಡ ಗ್ರಾಮಕ್ಕೆ ಬರದಂತೆ ನಿರ್ಬಂದಿಸಬೇಕು ಎಂದು ಪತ್ರದ ಮೂಲಕ ಆರಕ್ಷಕ ವೃತ್ತ ನಿರೀಕ್ಷಕ ಹಾಗೂ ಉಪ ನಿರೀಕ್ಷಕರು ವಿನಂತಿಸಿರುತ್ತಾರೆ.

ಪ್ರಯುಕ್ತ ಆ.11 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ಅಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿ ರವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 152, 162, 163 ರನ್ವಯ ನಿರ್ಬಂಧನೆ ಜಾರಿಗೊಳಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ.

ರಾವೂರ ಕ್ರಾಸ್ ಹತ್ತಿರ ಆಂದೋಲಾ ಶ್ರೀಗೆ ತಡೆದ ಪೊಲೀಸರು:

ಅಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿಗಳು ಚಿತ್ತಾಪುರ ತಾಲೂಕಿನ ಸುಕ್ಷೇತ್ರ ದಂಡಗುಂಡ ಶ್ರೀ ಬಸವೇಶ್ವರ ಜಾತ್ರೆಗೆ ಬರುತ್ತಿರುವ ಮಾಹಿತಿ ಪಡೆದ ಪೊಲೀಸರು ರಾವೂರ ಕ್ರಾಸ್ ಹತ್ತಿರ ತಡೆಹಿಡಿದು, ಅಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿಜಿ ರವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 152, 162, 163 ರನ್ವಯ ನಿರ್ಬಂಧನೆ ಜಾರಿಗೊಳಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಹೊರಡಿಸಿದ ಆದೇಶ ಪತ್ರವನ್ನು  ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಶ್ರೀಗಳಿಗೆ ನೀಡಿ ವಾಪಸ್ ಕಳುಹಿಸಿದ ಪ್ರಸಂಗ ಸೋಮವಾರ ನಡೆಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!