ಕಾಳಗಿ ಸರ್ಕಾರಿ ಪ್ರೌಢ ಶಾಲೆಯ ಎಫ್.ಡಿ.ಸಿ ವಿರುದ್ಧ ಕ್ರಮಕ್ಕೆ ಸಂತೋಷ್ ಕಡಬೂರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಸರ್ಕಾರಿ ಪ್ರೌಡ (ಕನ್ನಡ) ಶಾಲೆಯ ಎಫ್.ಡಿ.ಸಿ ಸಂಗೀತಾ ಎಸ್.ಕೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಿ ಕಲಬುರಗಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಳೆಯ ವಿದ್ಯಾರ್ಥಿ ಹಾಗೂ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಸಂತೋಷ್ ಕಡಬೂರ ಮಂಗಳವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಪಟ್ಟಣದ ಸರ್ಕಾರಿ ಪ್ರೌಡ (ಕನ್ನಡ) ಶಾಲೆಯಲ್ಲಿ ಎಫ್.ಡಿ.ಸಿ. ಯಾಗಿ ಕೆಲಸ ಮಾಡುತ್ತಿರುವ ಸಂಗೀತಾ ಎಸ್.ಕೆ. ಇವರು ಕರ್ತವ್ಯದ ಮೇಲೆ ನಿಷ್ಟೆ ಇಲ್ಲದೇ, ಹಳೆಯ ವಿದ್ಯಾರ್ಥಿಗಳು ಸರ್ಕಾರ ಕರೆದದಿರುವ ಹೈಸ್ಕೂಲ್ ಶಿಕ್ಷಕರ ನೇಮಕಾತಿ ಪ್ರಯುಕ್ತ ವಿದ್ಯಾರ್ಥಿಗಳ ಕನ್ನಡ ಮಾಧ್ಯಮ, ಗ್ರಾಮೀಣ ಪ್ರಮಾಣ ಪತ್ರವನ್ನು ಬರೆಯಸಿಕೊಳ್ಳಲು ಹೋದಾಗ ಸೋಮಾರಿತನ ಒಂದೇ ಅಲ್ಲದೇ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಹೀಗಾಗಿ ಇವರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಳೆಯ ವಿದ್ಯಾರ್ಥಿಗಳು ಶಾಲೆಗೆ ಬಂದಾಗ, ಈಗ ಆಗಲ್ಲಾ ನಾಳೆ ಬನ್ನಿ, ಮಧ್ಯಾಹ್ನ ನಾನು ಎನು ಬರೆಯಲ್ಲಾ ಹೀಗೆ ಹಲವಾರು ದರ್ಪದ ಮಾತಗಳನ್ನಾಡುತ್ತಾ ವಿದ್ಯಾರ್ಥಿಗಳಿಗೆ ತೊಂದರೆಯನ್ನು ಕೋಡುತ್ತಿದ್ದು, ಕೂಡಲೇ ಅವರನ್ನು ವಿಚಾರಣೆಯನ್ನು ಮಾಡಿ ಸೂಕ್ತ ಕ್ರಮಕೈಗೊಂಡು ವರ್ಗಾವಣೆ ಅಥವಾ ಬೇರೆ ಕಡೆಗೆ ನಿಯೋಜನೆ ಮಾಡಿ ಶಾಲೆಯ ಹಾಗೂ ಊರಿನ ಘನತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

