Oplus_0

ನಾಲವಾರ ಸ್ಟೇಷನ್-ಮಾರಡಗಿ ರಸ್ತೆ ದುರಸ್ತಿಗೆ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ನಾಲವಾರ ಸ್ಟೇಷನ್ ನಿಂದ ಮಾರಡಗಿ ಗ್ರಾಮದವರೆಗೂ ರಸ್ತೆ ಸಂಪೂರ್ಣ ಹಾಳಾಗಿದ್ದು ಸಂಚಾರಕ್ಕೆ ಸಂಚಕಾರ ಉಂಟಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಯುವ ಮುಖಂಡ ಸಾಗರ್. ಎಸ್ ದೇವಿಂದ್ರಕರ್ ಆಗ್ರಹಿಸಿದ್ದಾರೆ.

ರಸ್ತೆ ಹದಗೆಟ್ಟು ಹೋಗಿದ್ದರಿಂದ ಅಂಬುಲೆನ್ಸ್ ಓಡಾಟ ಶಾಲಾ ಮಕ್ಕಳ ಸ್ಕೂಲ್ ಬಸ್‌ ಹಾಗೂ ಸಾರ್ವಜನಿಕರ ಓಡಾಟ ಕಷ್ಟಕರವಾಗಿದ್ದು, ತಕ್ಷಣ ಇತ್ತಕಡೆ ಸ್ವಲ್ಪ ಮುತುವರ್ಜಿ ವಹಿಸಿ ಪರಿಹಾರೋಪಾಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!