ಕಾಳಗಿ ತೋಟದ ಮನೆಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ರೈತ ಸೇನೆ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಜೆಸ್ಕಾಂ ವ್ಯಾಪ್ತಿಗೆ ಒಳಪಡುವ ತೋಟದ ಮನೆಗಳಿಗೆ ಹಾಗೂ ಜಮೀನುಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಮತ್ತು ಹಗಲು ಹೊತ್ತಿನಲ್ಲಿ 12 ಗಂಟೆ ಥ್ರೀ ಫೇಸ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ನೇತೃತ್ವದಲ್ಲಿ ನೂರಾರು ರೈತರು ಕಾಳಗಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಮುಖರು, ತೋಟದ ಮನೆಗಳಿಗೆ ಹಾಗೂ ಜಮೀನಿನಲ್ಲಿ ಇರುವಂತಹ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಇಲ್ಲದೆ ಇರುವುದರಿಂದ ಅಲ್ಲಿ ವಾಸಿಸುವ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ವಿಷಜಂತುಗಳ ಮತ್ತು ಕಾಡು ಪ್ರಾಣಿಗಳ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಕೂಡಲೇ ಅಧಿಕಾರಿಗಳು ಸೂಕ್ತ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತದವರೆಗೆ ನೂರಾರು ರೈತರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಮನವಿ ಪತ್ರವನ್ನು ಜೆಸ್ಕಾಂ ಎಇಇ ಹಾಗೂ ತಹಸೀಲ್ದಾರರಿಗೆ ಸಲ್ಲಿಸಿದರು.
ಹೊಸಳ್ಳಿ(ಎಚ್) ಪೂಜ್ಯ ಸಿದ್ದಲಿಂಗ ಶಿವಾಚಾರ್ಯರು, ಮಂಗಲಗಿ-ತೆಂಗಳಿಯ ಪೂಜ್ಯ ಡಾ. ಶಾಂತಸೋಮನಾಥ ಶಿವಾಚಾರ್ಯರು, ಡೊಣ್ಣೂರಿನ ಪೂಜ್ಯ ಪ್ರಶಾಂತ ದೇವರು, ರಟಕಲ್‌ನ ಪೂಜ್ಯ ರೇವಣಸಿದ್ದ ಶರಣರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೊಣಗಿ, ಕಾಳಗಿ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ರೇವಣಸಿದ್ದಪ್ಪ ಸಾತನೂರ, ರೇವಣಸಿದ್ದ ಕಲಶೆಟ್ಟಿ, ಶಿವಕುಮಾರ ಸುಲೇಪೇಟ್, ಸುಂದರ ಸಾಗರ, ಆರ್.ಆರ್. ಪಾಟೀಲ್, ಸೋಮಣ್ಣ ಹಲಚೇರಿ, ಸಿದ್ದಯ್ಯ ಮಠಪತಿ, ಶಿವಕುಮಾರ ಪಾಟೀಲ್, ಸಿದ್ರಾಮ ಪಾಟೀಲ್, ನಾಗರಾಜ ಬೇವಿನಕರ್, ಮಲ್ಲಿಕಾರ್ಜುನ ಕೊಡದೂರ ಸೇರಿದಂತೆ ನೂರಾರು ರೈತರು ಇದ್ದರು.

