ಕಾಳಗಿಯಲ್ಲಿ ಹಿಂದೂ ಉತ್ಸವ ಫೆ.22 ಕ್ಕೆ, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಭವ್ಯ ಮೆರವಣಿಗೆ, ಕು. ಹಾರಿಕಾ ಮಂಜುನಾಥ ಅವರಿಂದ ದಿಕ್ಕೂಚಿ ಭಾಷಣ: ಪ್ರಶಾಂತ ಕದಂ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯುತ್ಸವ ನಿಮಿತ್ತ ಹಿಂದೂ ಉತ್ಸವ ಸಮಾರಂಭವನ್ನು ಶಿವಜಯಂತಿ ಉತ್ಸವ ಸಮಿತಿ ಕಾಳಗಿ ವತಿಯಿಂದ ಫೆ. 22 ರಂದು ಕಾಳಗಿ ಪಟ್ಟಣದಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡಿದ್ದು, ಆದ್ದರಿಂದ ಸಮಾಜದ ಬಾಂಧವರು, ಛತ್ರಪತಿ ಶಿವಾಜಿ ಮಹಾರಾಜ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಿಂದೂ ಉತ್ಸವ ಕಾರ್ಯಕ್ರಮವನ್ನು ಯಶಶ್ವಿಗೊಳಿಸಬೇಕು ಎಂದು ಶಿವಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಕದಂ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಫೆ.22 ರಂದು ಮಧ್ಯಾಹ್ನ 1 ಗಂಟೆಯಿಂದ ಸಾಯಂಕಾಲ 5.30 ರ ವರೆಗೆ ಪಟ್ಟಣದ ಅಂಬೇಡ್ಕರ ವೃತ್ತದಿಂದ ಶ್ರೀ ಅಂಬಾಭವಾನಿ ದೇವಸ್ಥಾನ(ಬಜಾರ ರಸ್ತೆ) ವರೆಗೆ ಅದ್ಧೂರಿಯಾಗಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಭವ್ಯ ಮೆರವಣಿಗೆ ಜರುಗುವುದು. ಸಾಯಾಂಕಾಲ 6 ಗಂಟೆಗೆ ಶ್ರೀ ಅಂಬಾಭವಾನಿ ದೇವಸ್ಥಾನ (ಬಜಾರರಸ್ತೆ) ಹತ್ತಿರ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಕು. ಹಾರಿಕಾ ಮಂಜುನಾಥ(ಬಾಲ ವಾಗ್ಮಿ) ಅವರಿಂದ ದಿಕ್ಕೂಚಿ ಭಾಷಣ ಜರುಗುವುದು.
ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮಂಗಲಗಿ-ತೆಂಗಳಿಯ ಪೂಜ್ಯ ಡಾ. ಶಾಂತಸೋಮನಾಥ ಶಿವಾಚಾರ್ಯರು, ಕಾಳಗಿ ಹಿರೇಮಠದ ಪೂಜ್ಯ ನೀಲಕಂಠ ಮರಿದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಜ್ಯೋತಿ ಬೆಳಗಿಸುವರು. ಶಾಸಕ ಡಾ. ಅವಿನಾಶ ಜಾಧವ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಳಗಿ ಮರಾಠ ಸಾಮಜದ ಅಧ್ಯಕ್ಷ ತುಳಸಿರಾಮ ಚವ್ಹಾಣ, ಗೌರವ ಅಧ್ಯಕ್ಷ ಸುಭಾಷ ಕದಂ, ಮಾಜಿ ಜಿ.ಪಂ ಸದಸ್ಯ ರಾಜೇಶ ಗುತ್ತೇದಾರ ಸೇರಿದಂತೆ ಕಾಳಗಿ ತಾಲೂಕಿನ ಮರಾಠ ಸಮಾಜದ ಮುಖಂಡರು, ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶಿವ ಜಯಂತಿ ಉತ್ಸವ ಸಮಿತಿಯ ಪ್ರಮುಖರಾದ ರೋಹನ ಜಾಧವ್, ಬಾಳಸಾಹೇಬ ಸಂಗೇದಾರ, ಅಮರನಾಥ ಸೂರ್ಯವಂಶಿ, ಸುರೇಶ ಸೇಗಾಂವಕರ್, ಮಹೇಶ ಸೇಗಾಂವಕರ್, ಅಮರನಾಥ ಕದಂ, ಸಂತೋಷ ಸೇಗಾಂವಕರ್, ಭೀಮರಾವ ಬಾಂಬೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು. |