ಕಮಕನೂರ ಗ್ರಾಮದಲ್ಲಿ ಅಸ್ಪೃಶ್ಯತಾ ಅರಿವು ಕಾರ್ಯಕ್ರಮ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಕಮಕನೂರ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಚಿತ್ತಾಪುರ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ, ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲಕುಮಾರ ವಟವಟಿ, ಅಸ್ಪೃಷ್ಯತೆ ಎಂಬುದು ಒಂದು ಸಾಮಾಜಿಕ ಪಿಡುಗು, ಅದನ್ನು ಬೇರು ಸಮೇತ ಕಿತ್ತೆಸೆಯಲು ತಾವೇಲ್ಲರೂ ಮನಸ್ಸು ಮಾಡಬೇಕು. ಮತ್ತು ಬುದ್ಧ, ಬಸವ ಹಾಗೂ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮಾತನಾಡಿ, ಇಡೀ ಪ್ರಪಂಚದಲ್ಲಿಯೇ, ಭಾರತ ವಿಶ್ವ ಗುರು ಎನಿಸಿಕೊಳ್ಳಬೇಕಾದರೆ ದೇಶದಲ್ಲಿನ ಜಾತೀಯತೆ ಸಂಪೂರ್ಣವಾಗಿ ತೊಲಗಬೇಕು ಮತ್ತು ಸಾಮ್ರಾಟ್ ಅಶೋಕನ ಕಾಲದ ಭಾರತ ಪುನ: ಸ್ಥಾಪನೆಯಾಗಬೇಕು ಎಂದು ಹೇಳಿದರು.
ಶಿಕ್ಷಕಿ ಶಿವಜ್ಯೋತಿ ಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ ಲಕ್ಷ್ಮೀ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷೆ ಸರಸ್ವತಿ ದೊಡ್ಡಮನಿ, ಉದಯಕುಮಾರ ತಳವಾರ, ಭೀಮಣ್ಣ ಪೂಜಾರಿ, ಅಶೇನ್ ಪಟೇಲ, ಮಹೇಶ ತಳವಾರ, ಶಿವು ಜಮಾದಾರ, ದೇವು ಬಂಡಿ, ಮಲ್ಲು ಬಂಡಿ, ಮಹೇಶ ಜಮಾದಾರ, ಶರಣು ಜೋತಪೂರ, ಶಾಲೆಯ ಸಹ ಶಿಕ್ಷಕಿಯರು, ಗ್ರಾಮದ ಹಿರಿಯ ಮುಖಂಡರು, ಯುವಕರು, ಗ್ರಾ.ಪಂ.ಸಿಬ್ಬಂದಿಗಳು, ವಿದ್ಯಾರ್ಥಿಗಳು, ಟ್ರಸ್ಟ್ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು. ಶಿಕ್ಷಕ ಭೀಮ್ ರೆಡ್ಡಿ ನಿರೂಪಿಸಿ, ವಂದಿಸಿದರು.