Oplus_0

ಕಮಲಾಪೂರ ತಾಲೂಕು ಭಾರತೀಯ ದಲಿತ ಪ್ಯಾಂಥರ್ ಪದಾಧಿಕಾರಿಗಳ ಆಯ್ಕೆ | ಅನ್ಯಾಯದ ವಿರುದ್ಧ ದಲಿತ ಪ್ಯಾಂಥರ್ ಹೋರಾಟಕ್ಕೆ ಸದಾ ಸಿದ್ಧ : ಚಿಮ್ಮಾಇದಲಾಯಿ

ನಾಗಾವಿ ಎಕ್ಸಪ್ರೆಸ್ 

ಕಮಲಾಪೂರ: ದಲಿತರ ಹಕ್ಕುಗಳ ರಕ್ಷಣೆಗಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಉದ್ದೇಶದಿಂದ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಮಲಾಪೂರ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಗುರುವಾರ ಅಧಿಕೃತವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ್ ಚಿಮ್ಮಾಇದಲಾಯಿ ತಿಳಿಸಿದ್ದಾರೆ.

ಸಂಘಟನೆಯ ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ತಾಲೂಕಿನಲ್ಲಿ ದೌರ್ಜನ್ಯಕ್ಕೊಳಗಾಗುವ ಶೋಷಿತ ಸಮುದಾಯಗಳಿಗೆ ಧ್ವನಿಯಾಗಲು ನೂತನ ಸಮಿತಿಯನ್ನು ರಚಿಸಲಾಗಿದೆ.

ನೂತನ ಪದಾಧಿಕಾರಿಗಳ ವಿವರ: ತಾಲೂಕು ಅಧ್ಯಕ್ಷರಾಗಿ ಸತೀಶ ಹಿಪ್ಪರಗಿ, ಉಪಾಧ್ಯಕ್ಷರಾಗಿ ಅಶೋಕ ಸುತರ, ಮಲ್ಲಿಕಾರ್ಜುನ ಕಾಂಬಳೆ. ಪ್ರಧಾನ ಕಾರ್ಯದರ್ಶಿ ಮೋಹನ ಪ್ರಸನ್ನ, ಸಂಘಟನಾ ಕಾರ್ಯದರ್ಶಿ ಭಲಜೀತ ಓಕಳಿ, ಸಹ ಕಾರ್ಯದರ್ಶಿ ಭಂಡೆಪ್ಪ ಓಕಳಿ, ಖಜಾಂಚಿ ಸಂಜೀವಕುಮಾರ ಅವರನ್ನು ಆಯ್ಕೆ ಮಾಡಲಾಗಿದೆ

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷರು, ಕಮಲಾಪೂರ ತಾಲೂಕಿನಾದ್ಯಂತ ದಲಿತರು, ಶೋಷಿತರು ಹಾಗೂ ಬಡವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಅನ್ಯಾಯಗಳ ವಿರುದ್ಧ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಹೋರಾಟಕ್ಕೆ ಸದಾ ಸಿದ್ಧ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಿರೇಮನಿ ಮಾತನಾಡಿ, ದಲಿತರ ಪರ ಮೊದಲಿಂದಲೂ ದಲಿತ ಪ್ಯಾಂಥರ್ ಸಂಘಟನೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಹೀಗಾಗಿ ಈ ಭಾಗದಲ್ಲಿ ನೂತನ ಪದಾಧಿಕಾರಿಗಳು ಸಂಘಟನೆ ಬಲ ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ದಂಡೆ, ನಗರಾಧ್ಯಕ್ಷ ದಿಲೀಪಕುಮಾರ ಕಿರಸಾವಳಗಿ ಹಾಗೂ ತಾಲೂಕು ಮಟ್ಟದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Spread the love

Leave a Reply

Your email address will not be published. Required fields are marked *

error: Content is protected !!