Oplus_0

ಚಿತ್ತಾಪುರ: ಟ್ರಾಕ್ಟರನಲ್ಲಿ ಸೌಂಡ್ ಬಾಕ್ಸ್ ಹಾಕಿಕೊಂಡು ಓಡಾಡಿದರೆ ಕಾನೂನು ಕ್ರಮ ಪಿಎಸ್ಐ ಎಚ್ಚರಿಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಾಕ್ಟರನಲ್ಲಿ ಸೌಂಡ್ ಬಾಕ್ಸ್‌ಗಳನ್ನು ಅಳವಡಿಸಿ ಹೆಚ್ಚಿನ ಸೌಂಡ್ ಹಚ್ಚಿಕೊಂಡು ಸಾರ್ವಜನಿಕ ರಸ್ತೆಯಲ್ಲಿ, ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಓಡಾಡುತ್ತಿರುವುದು ಕಂಡುಬಂದಿರುತ್ತದೆ, ಇದರಿಂದ ಸಣ್ಣ ಸಣ್ಣ ಮಕ್ಕಳಿಗೆ, ವಯೋವೃದ್ಧರಿಗೆ ತೊಂದರೆ ಮತ್ತು ಕಿರಿ ಕಿರಿ ಉಂಟಾಗುತ್ತಿರುವುದರಿಂದ ಟ್ರಾಕ್ಟರನಲ್ಲಿ ಅಳವಡಿಸಿದ ಸೌಂಡ್ ಬಾಕ್ಸ್‌ಗಳನ್ನು ಒಂದು ವಾರದೊಳಗೆ ತೆಗೆದು ಹಾಕಬೇಕು ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಸೂಚಿಸಿದ್ದಾರೆ.

ಟ್ರಾಕ್ಟರನಲ್ಲಿ ಸೌಂಡ್ ಬಾಕ್ಸ್ ಹಾಕಿಕೊಂಡು ತೀವ್ರತರಹವಾದ ಶಬ್ದ ಹೊರಶುಸುವಿಕೆ ಚಾಲ್ತಿ ಇರುವ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ‌ ಚಲಾಯಿಸುವಾಗ ಹಿಂಬದಿಯಿಂದ ಬರುವ/ಸಹ ಸಂಚಾರಿ ವಾಹನಗಳು ಗೊತ್ತಾಗದೇ ಅಪಘಾತಗಳು ಆಗಿರುವ ನಿದರ್ಶನಗಳು ಉಂಟು. ಹೀಗಾಗಿ ಎಲ್ಲ ಟ್ರಾಕ್ಟರ್ ಮಾಲೀಕರು ಕೂಡಲೇ ಕಾನೂನು ನಿಯಮ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಒಂದು ವೇಳೆ ಟ್ರಾಕ್ಟರನಲ್ಲಿ ಸೌಂಡ್ ಬಾಕ್ಸ್ ಇಟ್ಟುಕೊಂಡು ತೀವ್ರತರವಾದ ಶಬ್ದ ಹೊರಶುಸುವಿಕೆಯನ್ನು ಮಾಡಿದ್ದು ಕಂಡುಬಂದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!